AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್​ 19 ಕೇಸ್​ಗಳಲ್ಲಿ ಶೇ.89ರಷ್ಟು ಒಮಿಕ್ರಾನ್​ ಪ್ರಕರಣಗಳು; ಸಮೀಕ್ಷೆ ವರದಿ

ಇನ್ನೊಂದೆಡೆ ಈ 280 ಮಂದಿಯಲ್ಲಿ ಕೇವಲ 7 ಜನರು ಒಂದೇ ಡೋಸ್​ ಕೊರೊನಾ ಲಸಿಕೆ ಪಡೆದವರು. ಅದರಲ್ಲಿ 6ಮಂದಿಗೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದೆ. ಅದರಲ್ಲೂ ಇಬ್ಬರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈನಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್​ 19 ಕೇಸ್​ಗಳಲ್ಲಿ ಶೇ.89ರಷ್ಟು ಒಮಿಕ್ರಾನ್​ ಪ್ರಕರಣಗಳು; ಸಮೀಕ್ಷೆ ವರದಿ
ಒಮಿಕ್ರಾನ್​
TV9 Web
| Edited By: |

Updated on: Jan 25, 2022 | 8:07 AM

Share

ಮುಂಬೈನಲ್ಲಿ ಪತ್ತೆಯಾಗುತ್ತಿರುವ ಹೊಸ ಕೊವಿಡ್​ 19 ಕೇಸ್(Covid 19 Cases)​ಗಳಲ್ಲಿ ಬಹುತೇಕ ಒಮಿಕ್ರಾನ್​ ಪ್ರಕರಣಗಳೇ ಆಗಿವೆ ಎಂದು ಕೊವಿಡ್​ 19 ಟೆಸ್ಟ್​ ಸಮೀಕ್ಷೆ ಹೇಳಿದೆ. ಒಟ್ಟಾರೆ 280 ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿಶೇ.89ರಷ್ಟು ಒಮಿಕ್ರಾನ್​ ಸೋಂಕು ಪತ್ತೆಯಾಗಿತ್ತು. ಶೇ.8ರಷ್ಟು ಡೆಲ್ಟಾ ಉತ್ಪನ್ನಗಳು ಮತ್ತು ಶೇ.3ರಷ್ಟು ಡೆಲ್ಟಾ ರೂಪಾಂತರಿಗಳು ಮತ್ತು ಉಪವಿಧಗಳಾಗಿವೆ ಎಂದು ಬೃಹನ್​​ಮುಂಬೈ ಮುನ್ಸಿಪಲ್ ಕಾರ್ಪೋರೇಶನ್​ ತಿಳಿಸಿದೆ. 

ಇತ್ತೀಚಿಗೆ ಒಟ್ಟು 373 ಮಾದರಿಗಳನ್ನು ಟೆಸ್ಟ್​ ಮಾಡಲಾಗಿತ್ತು. ಅದರಲ್ಲಿ 280 ಮಾದರಿಗಳು ಬೃಹನ್​ ಮುಂಬೈ ಕಾರ್ಪೋರೇಶನ್​​ನವರದ್ದು. ಅದರಲ್ಲಿ ಶೇ.89ರಷ್ಟು ಅಂದರೆ ಸುಮಾರು 248 ಮಂದಿಯಲ್ಲಿ ಒಮಿಕ್ರಾನ್​ (ಉಪವಿಧ) ಸೋಂಕು ಪತ್ತೆಯಾಗಿದೆ. ಶೇ.8ರಷ್ಟು ಅಂದರೆ 21 ಜನರಲ್ಲಿ ಡೆಲ್ಟಾ ಸೋಂಕಿನ ವಿಧ ಕಂಡುಬಂದಿದೆ. ಉಳಿದ 11 ರಲ್ಲಿ ಇಬ್ಬರಲ್ಲಿ ಡೆಲ್ಟಾ ರೂಪಾಂತರಿಯ ಉಪ-ಪ್ರಕಾರಗಳಿವೆ ಎಂದು ಮುನ್ಸಿಪಲ್​ ಸಾರ್ವಜನಿಕ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಹಾಗೇ, ಈ 280 ಜನರಲ್ಲಿ ಶೇ..34ರಷ್ಟು ಅಂದರೆ 96 ಸೋಂಕಿತರು 21-24ವರ್ಷದವರಾಗಿದ್ದಾರೆ. ಶೇ. 28ರಷ್ಟು ಅಥವಾ 79 ಮಂದಿ 41-60 ವರ್ಷದವರು. ಕೇವಲ 22 ಮಂದಿ ಮಾತ್ರ  20ಕ್ಕಿಂತಲೂ ಕೆಳಗಿನ ವಯಸ್ಸಿನವರು ಎಂದು ತಿಳಿಸಿದೆ.

ಇನ್ನೊಂದೆಡೆ ಈ 280 ಮಂದಿಯಲ್ಲಿ ಕೇವಲ 7 ಜನರು ಒಂದೇ ಡೋಸ್​ ಕೊರೊನಾ ಲಸಿಕೆ ಪಡೆದವರು. ಅದರಲ್ಲಿ 6ಮಂದಿಗೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿದೆ. ಅದರಲ್ಲೂ ಇಬ್ಬರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 174 ರೋಗಿಗಳು ಎರಡೂ ಡೋಸ್​ ಕೊರೊನಾ ಲಸಿಕೆ ಪಡೆದವರೇ ಆಗಿದ್ದಾರೆ. ಹಾಗಿದ್ದಾಗ್ಯೂ 89 ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅದರಲ್ಲಿ ಇಬ್ಬರು ಆಕ್ಸಿಜನ್​ ಸಪೋರ್ಟ್​​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು 15 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು ಎಂದೂ ಸಮೀಕ್ಷೆ ವರದಿ ಹೇಳಿದೆ. ಇನ್ನುಳಿದ 99 ಮಂದಿ ಇದುವರೆಗೂ ಕೊವಿಡ್​ 19 ಲಸಿಕೆ ತೆಗೆದುಕೊಂಡವರೇ ಅಲ್ಲ. ಅವರಲ್ಲಿ 76 ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಯಿತು. 12 ರೋಗಿಗಳಿಗೆ ಆಕ್ಸಿಜನ್​ ಸಪೋರ್ಟ್ ಬೇಕಾಯಿತು. 5ಮಂದಿ ಐಸಿಯುಗೆ ದಾಖಲಾಗಬೇಕಾಯಿತು ಎಂದೂ ತಿಳಿಸಿದ್ದಾರೆ.

ಮುಂಬೈನಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಲು ಬಿಎಂಸಿ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸರಿಯಾಗಿ ಮಾಸ್ಕ್​ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಯನ್ನು ಸರಿಯಾಗಿ ಹ್ಯಾಂಡ್​ವಾಶ್​​ನಿಂದ ತೊಳೆದುಕೊಳ್ಳಬೇಕು. ಗುಂಪುಗೂಡುವನ್ನು ಬಿಡಬೇಕು ಎಂಬಿತ್ಯಾದಿ ನಿಯಮಗಳನ್ನು ಜಾರಿಗೊಳಿಸಿದೆ.

ಇದನ್ನೂ ಓದಿ: ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರಕ್ಕೆ ಇಳಿದ ಸೋನು ಸೂದ್​; ನೀವು ಮಾತು ತಪ್ಪಿದಿರಿ ಎಂದ ಫ್ಯಾನ್ಸ್​

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ