ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಲ್ಯಾಂಬೊರ್ಗಿನಿ, ಭಯಾನಕ ವಿಡಿಯೋ ನೋಡಿ

ವೇಗವಾಗಿ ಚಲಿಸುತ್ತಿದ್ದ ಐಷಾರಾಮಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಿತ್ತಳೆ ಬಣ್ಣದ ಲ್ಯಾಂಬೊರ್ಗಿನಿ ಕಾರು ಜಖಂಗೊಂಡ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಅಪಘಾತ(Accident) ಸಂಭವಿಸುವ ಕೆಲ ಸಮಯದ ಮೊದಲು ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದ ಕಾರನ್ನು ಕೂಡ ಕಾಣಬಹುದು.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಲ್ಯಾಂಬೊರ್ಗಿನಿ, ಭಯಾನಕ ವಿಡಿಯೋ ನೋಡಿ
ಕಾರು

Updated on: Sep 22, 2025 | 12:46 PM

ಮುಂಬೈ, ಸೆಪ್ಟೆಂಬರ್ 22: ವೇಗವಾಗಿ ಚಲಿಸುತ್ತಿದ್ದ ಐಷಾರಾಮಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಿತ್ತಳೆ ಬಣ್ಣದ ಲ್ಯಾಂಬೊರ್ಗಿನಿ ಕಾರು ಜಖಂಗೊಂಡ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಅಪಘಾತ(Accident) ಸಂಭವಿಸುವ ಕೆಲ ಸಮಯದ ಮೊದಲು ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದ ಕಾರನ್ನು ಕೂಡ ಕಾಣಬಹುದು.

ಈ ಐಷಾರಾಮಿ ಕಾರಿನ ಮುಂಭಾಗಕ್ಕೆ ಹೆಚ್ಚಿನ ಹಾನಿಯಾಗಿದೆ. ಬಂಪರ್​ಗೆ ಹಾನಿಯಾಗಿದೆ. ಮುಂಭಾಗದ ಟ್ರಂಕ್ ತೆರೆದಿರುವುದನ್ನು ಕಾಣಬಹುದು. ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದು, ಯಾರಿಗೂ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ: ಗದಗ ಭೀಕರ ಅಪಘಾತ: ಹಸೆಮಣೆ ಏರಬೇಕಿದ್ದ ಇಬ್ಬರು ಪೊಲೀಸ್​ ಕಾನ್ಸ್​​ಟೇಬಲ್​​​ ಸೇರಿ ಮೂವರು ಸಾವು

ಪಿಟಿಐ ವರದಿ ಮಾಡಿರುವ ಪೊಲೀಸರ ಪ್ರಕಾರ, ಮಳೆಯಿಂದ ನೆನೆದ ರಸ್ತೆಗಳಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಕಾರಿನ ಚಾಲಕನನ್ನು 52 ವರ್ಷದ ಅತಿಶ್ ಶಾ ಎಂದು ಗುರುತಿಸಲಾಗಿದ್ದು, ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆಯಲ್ಲಿ ಸ್ಕಿಡ್ ಆಗಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಾರು ಅಪಘಾತದ ವಿಡಿಯೋ

ಶಾ ಅವರು ನೆಪಿಯನ್ ಸಮುದ್ರ ಬಳಿಯ ರಸ್ತೆಯಿಂದ ದಕ್ಷಿಣ ಮುಂಬೈನ ಕೊಲಾಬಾಗೆ ಕಾರಿನಲ್ಲಿ ಹೋಗುತ್ತಿದ್ದರು. ಅಧಿಕಾರಿಯ ಪ್ರಕಾರ, ಹಾನಿಗೊಳಗಾದ ಕಾರನ್ನು ನಂತರ ರಸ್ತೆಯಿಂದ ದೂರಕ್ಕೆ ಎಳೆದುಕೊಂಡು ಹೋಗಲಾಯಿತು. ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬೆಳಗಿನ ಜಾವ ಮಳೆ ಸುರಿದ ನಂತರ ರಸ್ತೆ ಒದ್ದೆಯಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 12:43 pm, Mon, 22 September 25