ಡಾ.ದತ್ತಾ ಸಾಮಂತ್ ಹತ್ಯೆ ಪ್ರಕರಣ: ಛೋಟಾ ರಾಜನ್‌ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ

1997ರಲ್ಲಿ ಹತ್ಯೆಗೀಡಾದ ಮುಂಬೈನ ಖ್ಯಾತ ಟ್ರೇಡ್ ಯೂನಿಯನ್ ನಾಯಕ ಡಾ.ದತ್ತಾ ಸಾಮಂತ್ (ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ರಾ ಛೋಟಾ ರಾಜನ್‌ನನ್ನು ಖುಲಾಸೆ ಮಾಡಿದ ಸಿಬಿಐ ವಿಶೇಷ ನ್ಯಾಯಾಲಯ

ಡಾ.ದತ್ತಾ ಸಾಮಂತ್ ಹತ್ಯೆ ಪ್ರಕರಣ: ಛೋಟಾ ರಾಜನ್‌ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ
ಛೋಟಾ ರಾಜನ್‌

Updated on: Jul 28, 2023 | 8:57 PM

ಮುಂಬೈ ಜುಲೈ 28: 1997ರಲ್ಲಿ ಹತ್ಯೆಗೀಡಾದ ಮುಂಬೈನ ಖ್ಯಾತ ಟ್ರೇಡ್ ಯೂನಿಯನ್ ನಾಯಕ ಡಾ.ದತ್ತಾ ಸಾಮಂತ್ (Dr Datta Samant  Murder Case)ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ರಾಜೇಂದ್ರ ಸದಾಶಿವ್ ನಿಕಾಲ್ಜೆ ಅಕಾ ಛೋಟಾ ರಾಜನ್‌ನನ್ನು (Chhota Rajan) ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಜನವರಿ 16, 1997 ರಂದು ಘಾಟ್‌ಕೋಪರ್‌ನ ಪಂತ್ ನಗರಕ್ಕೆ ಜೀಪ್ ನಲ್ಲಿ ಪೊವೈಗೆ ಪ್ರಯಾಣಿಸುತ್ತಿದ್ದಾಗ ಪದ್ಮಾವತಿ ರಸ್ತೆಯ ನರೇಶ್ ಜನರಲ್ ಸ್ಟೋರ್ ಬಳಿ ಡಾ.ಸಮಂತ್ ಮೇಲೆ ಹಲ್ಲೆ ನಡೆದಿತ್ತು. ಆತನ ಮೇಲೆ ನಾಲ್ವರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಟ್ರೇಡ್ ಯೂನಿಯನ್ ನಾಯಕನ ಮೇಲಿನ ದಾಳಿಯನ್ನು ಸಂಘಟಿಸಿದ ಆರೋಪ ಛೋಟಾ ರಾಜನ್ ಮೇಲಿತ್ತು.

ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ನಾಲ್ವರು ಮೋಟಾರು ಸೈಕಲ್‌ಗಳಲ್ಲಿ ಬಂದು ಟ್ರೇಡ್ ಜೂನಿಯನ್ ನಾಯಕನ ಜೀಪನ್ನು ಅಡ್ಡಗಟ್ಟಿ ಕನಿಷ್ಠ 17 ಗುಂಡುಗಳನ್ನು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಅನಿಕೇತ್ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ: Tamil Nadu: ರಾಮೇಶ್ವರಂನಲ್ಲಿ ಅಣ್ಣಾಮಲೈ ಅವರ ‘ಎನ್ ಮಣ್ಣ್ ಎನ್ ಮಕ್ಕಳ್’ ಪಾದಯಾತ್ರೆಗೆ ಅಮಿತ್ ಶಾ ಚಾಲನೆ

ದಾಳಿಯಲ್ಲಿ ಅವರ ಮುಖ ಮತ್ತು ಕುತ್ತಿಗೆಗೆ ಗಾಯವಾಗಿರುವ ಡಾ.ಸಮಂತ್ ಅವರ ಚಾಲಕ ಭೀಮರಾವ್ ಸೋನಕಾಂಬಳೆ ಅವರು ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಅಪರಿಚಿತ ದಾಳಿಕೋರರ ವಿರುದ್ಧ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Fri, 28 July 23