ಈ ಹಿಂದೆ ಛೋಟಾ ರಾಜನ್ ಹೆಸರಲ್ಲಿ ನಕಲಿ ವೋಟರ್ ಐಡಿ ಸೃಷ್ಟಿ; ಈಗ ಮಂಡ್ಯದ ಕೆರೆ ಅಂಗಳದಲ್ಲಿ ಸಿಕ್ತಿದೆ ನಕಲಿ ದಾಖಲಾತಿಗಳು!
ರ್ಕಾರಿ ಸೌಲಭ್ಯ ಪಡೆಯಲು ನಕಲಿ ದಾಖಲೆಗಳನ್ನು ಮಾಡಿಕೊಡುತ್ತಿದ್ದಾರೆ. ಅಲ್ಲದೆ ದೇಶದೊಳಗೆ ಅಕ್ರಮವಾಗಿ ನುಸುಳಿ ಬಂದವರಿಗೂ ನಕಲಿ ದಾಖಲೆ ಮಾಡಿಕೊಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸಲ್ಮಾಭಾನು ಆರೋಪಿಸಿದ್ದಾರೆ.
ಮಂಡ್ಯ: ಜಿಲ್ಲೆಯ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರಾದ ಹಿನಾ ಕೌಸರ್ ಮತ್ತು ತೌಸಿಫ್ ಎಂಬಿಬ್ಬರು ದಾಖಲಾತಿ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿನಾ ಕೌಸರ್ ಮತ್ತು ತೌಸಿಫ್ ದಂಪತಿ ದೇಶದ್ರೋಹ ಕೃತ್ಯ ಎಸಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮಂಡ್ಯದ ಕೆರೆ ಅಂಗಳದಲ್ಲಿ ನಕಲಿ ದಾಖಲಾತಿಗಳು ಸಿಗುತ್ತಿವೆ ಎಂದು ಮಂಡ್ಯದ ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಭಾನು ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ಪತಿ, ಪತ್ನಿ ಇಬ್ಬರೂ ಸೇರಿ ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡುತ್ತಿದ್ದಾರೆ. ನಕಲಿ ಮಾರ್ಕ್ಸ್ ಕಾರ್ಡ್, ಓಟರ್ ಐಡಿ, ಪಾನ್‌ಕಾರ್ಡ್, ಪಾಸ್ ಪೋರ್ಟ್ಗಳನ್ನು ಸೃಷ್ಟಿ ಮಾಡುತ್ತಿದ್ದು, ಸರ್ಕಾರಿ ಸೌಲಭ್ಯ ಪಡೆಯಲು ನಕಲಿ ದಾಖಲೆಗಳನ್ನು ಮಾಡಿಕೊಡುತ್ತಿದ್ದಾರೆ. ಅಲ್ಲದೆ ದೇಶದೊಳಗೆ ಅಕ್ರಮವಾಗಿ ನುಸುಳಿ ಬಂದವರಿಗೂ ನಕಲಿ ದಾಖಲೆ ಮಾಡಿಕೊಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಭಾನು ಆರೋಪಿಸಿದ್ದಾರೆ.
ಈ ರೀತಿಯ ದಂಧೆ ದೇಶಕ್ಕೆ ಮಾರಕವಾಗಲಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. 700 ರಿಂದ 3 ಸಾವಿರ ರೂ. ವರೆಗೂ ಹಣ ಪಡೆದು ನಕಲಿ ದಾಖಲೆಗಳ ಸೃಷ್ಟಿ ಮಾಡುತ್ತಿದ್ದಾರೆ. ಈ ಹಿಂದೆ ಮಂಡ್ಯ ನಗರ ವಿಳಾಸದಲ್ಲಿ ಛೋಟಾ ರಾಜನ್ ಹೆಸರಲ್ಲಿ ಸೃಷ್ಟಿಯಾಗಿದ್ದ ನಕಲಿ ಓಟರ್ ಐಡಿ ಬಗ್ಗೆ ಸುದ್ದಿಯಾಗಿತ್ತು. ಆದರೆ ಮುಂದಿನ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಈ ದಂಧೆಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಂಡ್ಯದ ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಭಾನು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬಸ್ಥರಿಂದ ಗೂಂಡಾಗಿರಿ; ವಂಚನೆ ದೂರು ನೀಡಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಸಿಎಂ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ 13 ಜನರ ಕಿಸೆಗೆ ಬಿತ್ತು ಕತ್ತರಿ! 1.50 ಲಕ್ಷ ಕಳ್ಳತನದ ಆರೋಪ