Tamil Nadu: ರಾಮೇಶ್ವರಂನಲ್ಲಿ ಅಣ್ಣಾಮಲೈ ಅವರ ‘ಎನ್ ಮಣ್ಣ್ ಎನ್ ಮಕ್ಕಳ್’ ಪಾದಯಾತ್ರೆಗೆ ಅಮಿತ್ ಶಾ ಚಾಲನೆ
En Mann En Makkal padayatra: ಪ್ರಯಾಣದ ಯೋಜನೆಯ ಪ್ರಕಾರ, ರಾಮೇಶ್ವರಂನಿಂದ ಪ್ರಾರಂಭವಾಗುವ ಈ ಯಾತ್ರೆ ಜುಲೈ 28 ಮತ್ತು 29 ರಂದು ರಾಮನಾಥಪುರಂ ಜಿಲ್ಲೆಗೆ ತಲುಪುತ್ತದೆ. ಜುಲೈ 30 ರಂದು ಪರಮಕ್ಕುಡಿ, ಜುಲೈ 31 ರಂದು ತಿರುವಾಡನೈ ಮತ್ತು ಶಿವಗಂಗೈ ಬ್ಲಾಕ್, ಆಗಸ್ಟ್ 1 ರಂದು ತಿರುಪತ್ತೂರು ಮತ್ತು ಆಗಸ್ಟ್ 15 ರಂದು ಕನ್ಯಾಕುಮಾರಿ ತಲುಪಲಿದೆ.
ರಾಮೇಶ್ವರಂ ಜುಲೈ 28: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರ ‘ಎನ್ ಮಣ್ಣ್ ಎನ್ ಮಕ್ಕಳ್’ (En Mann En Makkal) ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ರಾಮೇಶ್ವರಂನಲ್ಲಿ ಚಾಲನೆ ನೀಡಿದ್ದಾರೆ. ಈ ಯಾತ್ರೆಯ ಮೂಲಕ ಅಣ್ಣಾಮಲೈ ಅವರು 2024 ರ ಲೋಕಸಭೆಗೆ ಮುನ್ನ ರಾಜ್ಯದ ಎಲ್ಲಾ 39 ಲೋಕಸಭಾ ಕ್ಷೇತ್ರಗಳ ಮತದಾರರನ್ನು ತಲುಪಲಿದ್ದಾರೆ. ಅಣ್ಣಾಮಲೈ ಅವರು ಶನಿವಾರ ಬೆಳಗ್ಗೆ ರಾಮೇಶ್ವರಂ ರಾಮನಾಥ ಸ್ವಾಮಿ ದೇವಸ್ಥಾನದಿಂದ ಯಾತ್ರೆ ಆರಂಭಿಸಲಿದ್ದಾರೆ.
ಪ್ರಯಾಣದ ಯೋಜನೆಯ ಪ್ರಕಾರ, ರಾಮೇಶ್ವರಂನಿಂದ ಪ್ರಾರಂಭವಾಗುವ ಈ ಯಾತ್ರೆ ಜುಲೈ 28 ಮತ್ತು 29 ರಂದು ರಾಮನಾಥಪುರಂ ಜಿಲ್ಲೆಗೆ ತಲುಪುತ್ತದೆ. ಜುಲೈ 30 ರಂದು ಪರಮಕ್ಕುಡಿ, ಜುಲೈ 31 ರಂದು ತಿರುವಾಡನೈ ಮತ್ತು ಶಿವಗಂಗೈ ಬ್ಲಾಕ್, ಆಗಸ್ಟ್ 1 ರಂದು ತಿರುಪತ್ತೂರು ಮತ್ತು ಆಗಸ್ಟ್ 15 ರಂದು ಕನ್ಯಾಕುಮಾರಿ ತಲುಪಲಿದೆ. ಅಣ್ಣಾಮಲೈ ಅವರು ಯಾತ್ರೆಯ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸ್ವಯಂಸೇವಕರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ಕನ್ಯಾಕುಮಾರಿ ಜಿಲ್ಲೆಯಲ್ಲಿ 3 ದಿನಗಳ ಕಾಲ ಕಳೆಯಲಿದ್ದಾರೆ.
Flagging-off @BJP4TamilNadu’s “En Mann En Makkal” Padyatra, a march spreading the spirit of unity & progress fostered by Modi Ji.
ராமேஸ்வரத்தில் தமிழக பாரதிய ஜனதா கட்சியின் “என் மண் என் மக்கள்” பாதயாத்திரை துவக்கம். #EnMannEnMakkal https://t.co/pkTHIzXxeK
— Amit Shah (@AmitShah) July 28, 2023
ಅಣ್ಣಾಮಲೈ ಅವರ ಈ ಪಾದಯಾತ್ರೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಎಲ್ಲಾ 234 ವಿಧಾನಸಭಾ ಕ್ಷೇತ್ರಗಳು ಮತ್ತು 39 ಲೋಕಸಭಾ ಕ್ಷೇತ್ರಗಳನ್ನು ಐದು ಹಂತಗಳಲ್ಲಿ ಭೇಟಿ ನೀಡಲಾಗುವುದ. ಮುಂದಿನ ವರ್ಷದ ಜನವರಿ ಮಧ್ಯದಲ್ಲಿ ಯಾತ್ರೆಯು ಚೆನ್ನೈನಲ್ಲಿ ಕೊನೆಗೊಳ್ಳಲಿದೆ.
I bow to the people of Tamil Nadu for the massive turnout at the launch of ‘En Mann En Makkal’ Padyatra in Rameswaram. Looking forward to addressing this huge gathering.#EnMannEnMakkal pic.twitter.com/7i7CP9aEGB
— Amit Shah (@AmitShah) July 28, 2023
ಬಿಜೆಪಿಯ ರಾಜ್ಯ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳ ಕುರಿತು 10 ಲಕ್ಷ ಪುಸ್ತಕಗಳನ್ನು ವಿತರಿಸಲು ಯೋಜಿಸಿದೆ. ಮುಂದಿನ 6 ತಿಂಗಳಲ್ಲಿ 11 ಮೆಗಾ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ, ಇದರಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಾರೆ.
ಇದನ್ನೂ ಓದಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪಾದಯಾತ್ರೆಯನ್ನು ಆರಂಭಿಸಲು ರಾಮೇಶ್ವರಂ ಆಯ್ಕೆ ಮಾಡಿದ್ದೇಕೆ?
ಏತನ್ಮಧ್ಯೆ, ‘ಯಾತ್ರೆಯು ಇಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ’ ಎಂದು ಡಿಎಂಕೆ ಹೇಳಿದೆ. 2024 ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಗಮನಾರ್ಹ ಗೆಲುವು ದಾಖಲಿಸುತ್ತದೆ. ಬಿಜೆಪಿಯ ವಿಭಜಕ ರಾಜಕಾರಣದ ನಿಜಬಣ್ಣವನ್ನು ಜನರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಡಿಎಂಕೆ ಸಂಸದ ಟಿಆರ್ ಬಾಲು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ