ಅಮೇಜಾನ್ ಕಂಪನಿಯ ಪೋಸ್ಟರ್ ಧ್ವಂಸ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಬೇಕಿರುವ ರಾಜ್ ಠಾಕ್ರೆ
ಮುಂಬೈ: ಅಮೇಜಾನ್ ಕಂಪನಿಯ ಪೋಸ್ಟರ್ಗಳನ್ನು ಹರಿದು ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಮುಂಬೈಯ ಸ್ಥಳೀಯ ನ್ಯಾಯಾಲಯಕ್ಕೆ ಇಂದು ಹಾಜರಾಗಬೇಕಿದೆ. ಅಮೇಜಾನ್ ಆ್ಯಪ್ನಲ್ಲಿ ಮರಾಠಿ ಭಾಷೆಯ ಆಯ್ಕೆ ನೀಡದಿರುವುದನ್ನು ಖಂಡಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಅಮೇಜಾನ್ ಕಂಪನಿಯ ಪೋಸ್ಟರ್ಗಳನ್ನು ಧ್ವಂಸಗೊಳಿಸಿದ್ದರು. ಈ ಕುರಿತು ಅಮೇಜಾನ್ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ವಿರುದ್ಧ ಅರ್ಜಿ ಸಲ್ಲಿಸಿತ್ತು. ಇತ್ತೀಚಿಗಷ್ಟೇ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅಮೇಜಾನ್ ಸಿಇಒ ಜೆಫ್ ಬಿಜೋಸ್ಗೆ […]
ಮುಂಬೈ: ಅಮೇಜಾನ್ ಕಂಪನಿಯ ಪೋಸ್ಟರ್ಗಳನ್ನು ಹರಿದು ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಮುಂಬೈಯ ಸ್ಥಳೀಯ ನ್ಯಾಯಾಲಯಕ್ಕೆ ಇಂದು ಹಾಜರಾಗಬೇಕಿದೆ.
ಅಮೇಜಾನ್ ಆ್ಯಪ್ನಲ್ಲಿ ಮರಾಠಿ ಭಾಷೆಯ ಆಯ್ಕೆ ನೀಡದಿರುವುದನ್ನು ಖಂಡಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಅಮೇಜಾನ್ ಕಂಪನಿಯ ಪೋಸ್ಟರ್ಗಳನ್ನು ಧ್ವಂಸಗೊಳಿಸಿದ್ದರು. ಈ ಕುರಿತು ಅಮೇಜಾನ್ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯ ವಿರುದ್ಧ ಅರ್ಜಿ ಸಲ್ಲಿಸಿತ್ತು.
ಇತ್ತೀಚಿಗಷ್ಟೇ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅಮೇಜಾನ್ ಸಿಇಒ ಜೆಫ್ ಬಿಜೋಸ್ಗೆ ಅಮೇಜಾನ್ನಲ್ಲಿ ಮರಾಠಿ ಭಾಷೆಯಲ್ಲಿ ಸೇವೆ ನೀಡುವಂತೆ ಪತ್ರ ಬರೆದಿದ್ದರು. ಕನ್ನಡ, ತಮಿಳು, ತೆಲುಗು ಮಲಯಾಳಂ ಭಾಷೆಗಳಲ್ಲಿ ಸೇವೆ ನೀಡಲಾಗುತ್ತಿದ್ದು, ಭಾರತದಲ್ಲೇ ಮೂರನೇ ಹೆಚ್ಚು ಬಳಕೆದಾರರಿರುವ ಮರಾಠಿಯಲ್ಲಿ ಸೇವೆ ನೀಡುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಪತ್ರದ ನಂತರ ಅಮೇಜಾನ್ ಸಿಇಒ ಜೆಫ್ ಬಿಜೋಸ್ ರಾಜ್ ಠಾಕ್ರೆಯವರಲ್ಲಿ ಕ್ಷಮೆ ಕೇಳಿದ್ದರು. ಅಲ್ಲದೇ, ಮುಂಬೈಯ ಅಮೇಜಾನ್ ಕಚೇರಿಯಲ್ಲಿ ಸಭೆ ನಡೆಸಿ 20 ದಿನಗಳಲ್ಲಿ ಮರಾಠಿಯಲ್ಲಿ ಸೇವೆ ನೀಡುವ ಕುರಿತು ಭರವಸೆ ನೀಡಿದ್ದರು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಯುವ ಘಟಕದ ಉಪಾಧ್ಯಕ್ಷ ಅಖಿಲ್ ಚಿತ್ರೆ ತಿಳಿಸಿದ್ದರು. ಆದರೆ, ಇದರ ನಡುವೆಯೇ ಅಮೇಜಾನ್ ನ್ಯಾಯಾಲಯದ ಮೊರೆ ಹೋಗಿತ್ತು.
ಅಪ್ಲಿಕೇಶನ್ನಲ್ಲಿ ಇಲ್ಲ ಮರಾಠಿ ಭಾಷೆ ಆಯ್ಕೆ; ರೊಚ್ಚಿಗೆದ್ದ MNS ಕಾರ್ಯಕರ್ತರಿಂದ ಅಮೇಜಾನ್ ಕಚೇರಿ ಧ್ವಂಸ