
ಮುಂಬೈ, ಡಿಸೆಂಬರ್ 09: ಸಂಜೆ ಸಮಯದಲ್ಲಿ ವಾಕಿಂಗ್ಗೆಂದು ಹೋಗಿದ್ದ ವೃದ್ಧೆ ಮನೆಗೆ ಹಿಂದಿರುಗಿ ಬರಲೇ ಇಲ್ಲ. ಅವರು ಅಪಘಾತ(Accident)ವಾಗಿ ಆಸ್ಪತ್ರೆ ಸೇರಿದ್ದರು. ಅವರ ಕುಟುಂಬ ಅವರಿರುವ ಜಾಗವನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದು, ಅದಕ್ಕೆ ಸಹಾಯ ಮಾಡಿದ್ದು ಅವರ ನೆಕ್ಲೇಸ್ನಲ್ಲಿದ್ದ ಜಿಪಿಎಸ್ ಟ್ರ್ಯಾಕರ್. ವಾಕಿಂಗ್ಗೆ ಹೋಗಿದ್ದಾಗ ಸಾಯಿರಾ ಬಿ ತಾಜುದ್ದೀನ್ ಮುಲ್ಲಾ ಅವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದು, ಅಲ್ಲಿದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು.
ಮನೆಯಲ್ಲಿ ಅವರು ಮನೆಗೆ ಬಾರದ್ದನ್ನು ಕಂಡು ಆತಂಕಕ್ಕೊಳಗಾಗಿದ್ದರು. ಅಲ್ಲೆಲ್ಲೇ ಹುಡುಕಿದರೂ ಅವರ ಸುಳಿವು ಪತ್ತೆಯಾಗಿರಲಿಲ್ಲ. ಕೊನೆಗೆ ಒಂದು ನೆಕ್ಲೇಸ್ನಿಂದ ಅವರಿರುವ ಜಾಗವನ್ನು ಪತ್ತೆ ಹಚ್ಚಲಾಯಿತು. ಆ ಮಹಿಳೆಯ ಮೊಮ್ಮಗ ನೆಕ್ಲೇಸ್ನಲ್ಲಿ ಜಿಪಿಎಸ್ ಟ್ರ್ಯಾಕರ್ ಅನ್ನು ಅಳವಡಿಸಿದ್ದರು.
ಮನೆಯಲ್ಲಿ ಎಲ್ಲರೂ ಬೇಸರದಿಂದ ಕುಳಿತಿದ್ದರು ಆಗ ಮೊಮ್ಮಗ ವಾಸಿಮ್ ಅಯೂಬ್ ಮುಲ್ಲಾ ಮನೆಗೆ ಬಂದವರೇ ವಿಷಯ ತಿಳಿದು ತಕ್ಷಣ ಟ್ರ್ಯಾಕರ್ ಆನ್ ಮಾಡಿದ್ದಾರೆ. ಆಗ ಮನೆಯಿಂದ 5 ಕಿ.ಮೀ ದೂರದಲ್ಲಿ ಅವರು ಇರುವ ಕುರಿತು ಕುರುಹು ದೊರೆತಿದೆ. ರೇಲ್‌ನಲ್ಲಿರುವ ಕೆಇಎಂ ಆಸ್ಪತ್ರೆಗೆ ಕೂಡಲೇ ಹೋಗಿದ್ದಾರೆ.
ಮತ್ತಷ್ಟು ಓದಿ: ಪತ್ನಿ, ಮಕ್ಕಳನ್ನು ನೋಡಲು ಹೊರಟಿದ್ದ ಸಿಪಿಐ ಸಜೀವ ದಹನ: ಕಾರು ಅಪಘಾತ ಸಂಭವಿಸಿದ್ದೇಗೆ?
ತಲೆಗೆ ಗಾಯವಾಗಿದ್ದ ಮುಲ್ಲಾ ಅವರನ್ನು ಜೆಜೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಸಿಮ್ ಮುಲ್ಲಾ ನಲ್ಲಸೋಪಾರಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವಾಸಿಮ್ ಅಂದು ಮಾಡಿದ್ದ ಆ ಕಾರ್ಯದಿಂದ ಇಂದು ಮಹಿಳೆಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ