ಮುಂಬೈ: ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ, 16 ಕಾರುಗಳು ಬೆಂಕಿಗಾಹುತಿ
ಮುಂಬೈನ ದಾದರ್ ಪ್ರದೇಶದ ಹರಿಶ್ಚಂದ್ರ ಯವಾಲೆ ಮಾರ್ಗದಲ್ಲಿರುವ ಕೊಹಿನೂರ್ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 16 ಕಾರುಗಳು ಬೆಂಕಿಗಾಹುತಿಯಾಗಿದೆ. ರಾತ್ರಿ 1-2 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ. ಸಧ್ಯಕ್ಕೆ ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ.

ಇದಕ್ಕೂ ಮುನ್ನ ಅಕ್ಟೋಬರ್ನಲ್ಲಿ ಭಿವಂಡಿಯಲ್ಲಿರುವ ಡೈಯಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಬಾಯ್ಲರ್ ಸ್ಫೋಟಗೊಂಡು ಬೆಂಕಿ ಹೊತ್ತಿ ಉರಿದಿತ್ತು.
ಮತ್ತೊಂದು ಘಟನೆ ಮಹಾವೀರ್ನಗರದ ಪವನ್ ಧಾಮ್ ವೀಣಾ ಸಂತೂರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ.
ಮತ್ತಷ್ಟು ಓದಿ:ಬೆಂಗಳೂರು ಖಾಸಗಿ ಬಸ್ ಅಗ್ನಿ ದುರಂತ: ಸ್ಥಳದಲ್ಲಿದ್ದವು 12 ಗ್ಯಾಸ್ ಸಿಲಿಂಡರ್, 30 ಬ್ಯಾಟರಿ, ತಪ್ಪಿದ ಭಾರಿ ಅನಾಹುತ: 42 ಜನ ಬಚಾವ್
ಸೋಮವಾರ ಮಧ್ಯಾಹ್ನ 12.27ಕ್ಕೆ ಘಟನೆ ನಡೆದಿತ್ತು, ಎಂದು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಮೃತರನ್ನು ಗ್ಲೋರಿ ವಾಲ್ಪಾಟಿ, ಜೋಸು ಜೇಮ್ಸ್ ರಾಬರ್ಟ್ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ