Watch Video: ತೃತೀಯಲಿಂಗಿಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ ವ್ಯಕ್ತಿ, ಮದುವೆಯ ನಂತರ ಪೊಲೀಸರ ಮೊರೆ ಹೋದ ಜೋಡಿ: ಮುಂದೇನಾಯ್ತು?
ಮೊನ್ನೆಯಷ್ಟೇ ತೆಲಂಗಾಣದಲ್ಲಿ ಇಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಜಗಿತ್ಯಾಲ್ ಹರ್ಷದ್ ಅವರನ್ನು ವೀನವಂಕಕ್ಕೆ ಸೇರಿದ ಲಿಂಗ ಬದಲಾಯಿಸಿಕೊಂಡ ದಿವ್ಯಾ ಅವರನ್ನು ವಿವಾಹವಾದರು. ಹರ್ಷದ್ 5 ವರ್ಷಗಳ ಹಿಂದೆ ಜಗಿತ್ಯಾಲ್ ನಲ್ಲಿ ಭೇಟಿಯಾಗಿದ್ದರು. ಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಮಂಗಳಮುಖಿ/ ತೃತೀಯಲಿಂಗಿ ಪ್ರೇಮ ವಿವಾಹಕ್ಕೆ ಸಂಬಂಧಿಸಿದ ಕರುಣಾಜನಕ ಕಥೆಯೊಂದು ಬೆಳಕಿಗೆ ಬಂದಿದೆ. ದೇಶದಲ್ಲಿ ಸಲಿಂಗ ವಿವಾಹಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ನ್ಯಾಯಾಲಯದ ಇತ್ತೀಚಿನ ತೀರ್ಪಿನ ನಂತರ, ಸಲಿಂಗ ದಂಪತಿಯ ವಿವಾಹಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ. ಇದೇ ವೇಳೆ ತೆಲಂಗಾಣದಲ್ಲಿ ವಿಶೇಷ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತೃತೀಯಲಿಂಗಿಯೊಬ್ಬಳನ್ನು ಪ್ರೀತಿಸತೊಡಗಿದ. ಪ್ರೀತಿಗಾಗಿ ಸಮಾಜದ ಸಂಕೋಲೆಯನ್ನು ಮುರಿಯಲು ಸಿದ್ದನಾದ. ಈ ಪ್ರೀತಿ ಚಿಗುರೊಡೆಯುತ್ತಿದ್ದಂತೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇದೀಗ ದಂಪತಿ ಪೊಲೀಸರಿಂದ ರಕ್ಷಣೆ (Protection) ಕೋರಿದ್ದಾರೆ. ತೆಲಂಗಾಣದ ಖಮ್ಮಮ್ನ ಗಣೇಶ್ ಎಂಬ ವ್ಯಕ್ತಿ ಆಂಧ್ರಪ್ರದೇಶದ ನಂದಿಗಾಮದ ಲಿಂಗಮಾರ್ಪಡಿಸಿಕೊಂಡ ದೀಪು ಎಂಬುವರನ್ನು ಮದುವೆಯಾಗಿದ್ದಾರೆ. ಮದುವೆಗೆ (Marriage) ಮುನ್ನ ದಂಪತಿ ಸುಮಾರು ಒಂದು ವರ್ಷ ಪ್ರೀತಿಸುತ್ತಿದ್ದರು. ದಂಪತಿ (Transgender Couple) ಹೈದರಾಬಾದ್‌ನಲ್ಲಿ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರಂತೆ.
ಈ ಮದುವೆಗೆ ಇಬ್ಬರ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆ ಜೋಡಿ ತಮ್ಮ ಜೀವವು ಅಪಾಯದಲ್ಲಿದೆ ಎಂಬುದನ್ನು ಅರಿತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಯಸಿದ್ದಾರೆ. ಹಾಗಾಗಿ ಮದುವೆಯ ನಂತರ ಗಣೇಶ ಮತ್ತು ದೀಪು ಇತ್ತೀಚೆಗೆ ತಮ್ಮ ಸುರಕ್ಷತೆಗಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಸಮ್ಮುಖದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ಈ ನಡುವೆ ಇವರಿಬ್ಬರ ಪ್ರೇಮ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ. ಅವರ ಕಥೆ ತಿಳಿದ ನಂತರ ಅನೇಕ ನೆಟಿಜನ್‌ಗಳು ನಾನಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೊನ್ನೆಯಷ್ಟೇ ತೆಲಂಗಾಣದಲ್ಲಿ ಇಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಜಗಿತ್ಯಾಲ್ ಹರ್ಷದ್ ಅವರನ್ನು ವೀನವಂಕಕ್ಕೆ ಸೇರಿದ ಲಿಂಗ ಬದಲಾಯಿಸಿಕೊಂಡ ದಿವ್ಯಾ ಅವರನ್ನು ವಿವಾಹವಾದರು. ಹರ್ಷದ್ 5 ವರ್ಷಗಳ ಹಿಂದೆ ಜಗಿತ್ಯಾಲ್ ನಲ್ಲಿ ಭೇಟಿಯಾಗಿದ್ದರು. ಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
Love knows no gender or region: newly married couple Ganesh from #Khammam #Telangana & Deepu, transgender from #Nandigama #AndhraPradesh, met in #Hyderabad & fell in love one year ago; they got married one week ago & came to PS for protection as families opposed @ndtv @ndtvindia pic.twitter.com/cKiShVjbIO
— Uma Sudhir (@umasudhir) November 6, 2023
ಆದರೆ, ಈ ಹಿಂದೆ ಇದೇ ರೀತಿಯ ವಿವಾಹಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಲಿಂಗ ವಿವಾಹಗಳಿಗೆ ಸಾಂವಿಧಾನಿಕ ಸಿಂಧುತ್ವವನ್ನು ನೀಡುವುದನ್ನು ವಿರೋಧಿಸಿ 3:2 ಮತದೊಂದಿಗೆ ತೀರ್ಪು ನೀಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಕಾನೂನು ಮಾಡುವುದಕ್ಕಿಂತ ಸಂಸತ್ತಿನಲ್ಲಿ ಕಾನೂನು ರಚಿಸಬೇಕಾಗಿದೆ ಎಂದೂ ಸಲಹೆ ನಿಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ