ಮುಂಬೈ: ಅಪಾರ್ಟ್​ಮೆಂಟ್ ಎದುರು ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆ, ಮನೆಗೆ ಬಂದು ನೋಡೋವಷ್ಟರಲ್ಲಿ ಪತ್ನಿಯೂ ಸಾವು

|

Updated on: Aug 04, 2024 | 2:17 PM

ತನ್ನ ಅಪಾರ್ಟ್​ಮೆಂಟ್​ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ತೆಗೆದುಕೊಂಡು ಪತ್ನಿಗೆ ಎಷ್ಟೇ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸಿರಲಿಲ್ಲ. ಅವರ ಕುತ್ತಿಗೆಯಲ್ಲಿದ್ದ ಕೀ ಬಳಸಿ ಮನೆಗೆ ಹೋಗಿ ನೋಡಿದಾಗ ಹಾಲ್​ನಲ್ಲಿ ಪತ್ನಿಯೂ ಕೂಡ ಶವವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್ ಮುಂಭಾಗದ ರಸ್ತೆಯಲ್ಲಿ 58 ವರ್ಷದ ಕಿಶೋರ್ ಪೆಡ್ನೇಕರ್ ಮೃತದೇಹ ಪತ್ತೆಯಾಗಿತ್ತು.

ಮುಂಬೈ: ಅಪಾರ್ಟ್​ಮೆಂಟ್ ಎದುರು ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆ, ಮನೆಗೆ ಬಂದು ನೋಡೋವಷ್ಟರಲ್ಲಿ ಪತ್ನಿಯೂ ಸಾವು
ದಂಪತಿ ಸಾವು
Follow us on

ತನ್ನ ಅಪಾರ್ಟ್​ಮೆಂಟ್​ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ತೆಗೆದುಕೊಂಡು ಪತ್ನಿಗೆ ಎಷ್ಟೇ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸಿರಲಿಲ್ಲ. ಅವರ ಕುತ್ತಿಗೆಯಲ್ಲಿದ್ದ ಕೀ ಬಳಸಿ ಮನೆಗೆ ಹೋಗಿ ನೋಡಿದಾಗ ಹಾಲ್​ನಲ್ಲಿ ಪತ್ನಿಯೂ ಕೂಡ ಶವವಾಗಿ ಬಿದ್ದಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್ ಮುಂಭಾಗದ ರಸ್ತೆಯಲ್ಲಿ 58 ವರ್ಷದ ಕಿಶೋರ್ ಪೆಡ್ನೇಕರ್ ಮೃತದೇಹ ಪತ್ತೆಯಾಗಿತ್ತು.

ಜಿಮ್ ಉಪಕರಣಗಳ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆತನ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿಶೋರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್, ಅವರು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅಸುನೀಗಿದ್ದಾರೆ.

ಕಿಶೋರ್ ಅವರ ಪತ್ನಿ ರಾಜಶ್ರೀ ಅವರ ಸಾವಿನ ಬಗ್ಗೆ ತಿಳಿಸಲು ಅಧಿಕಾರಿಗಳು ಪ್ರಯತ್ನಿಸಿದಾಗ, ಅವರಿಗೆ ಪದೇ ಪದೇ ಕರೆಗಳು ಉತ್ತರಿಸಲಿಲ್ಲ. ಅವರ ಫ್ಲಾಟ್‌ಗೆ ಬಂದ ಪೊಲೀಸರು ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದು ಕಂಡುಬಂತು. ಆಗ ಕಿಶೋರ್‌ನ ಕುತ್ತಿಗೆಯಲ್ಲಿ ಎರಡು ಕೀಗಳು ನೇತಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ.

ಮತ್ತಷ್ಟು ಓದಿ: ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲೇ ಅಳಿಯನ ಹತ್ಯೆ; ಕೃತ್ಯವೆಸಗಿದ್ದು ಅಮಾನತುಗೊಂಡ ಪಂಜಾಬ್ ಪೊಲೀಸ್ ಎಐಜಿ

ಈ ಕೀಗಳನ್ನು ಬಳಸಿ, ಪೊಲೀಸರು ಫ್ಲಾಟ್ ತೆರೆದಾಗ ಅವರ ಪತ್ನಿಯ ಮೃತದೇಹವು ಕಂಡುಬಂದಿದೆ. ಕಿಶೋರ್ ತಾನು ಸಾಯುವ ಮೊದಲು ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಖಿನ್ನತೆ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ಹಲವು ಔಷಧಿಗಳು ಅವರ ಫ್ಲಾಟ್​ನಲ್ಲಿ ಪತ್ತೆಯಾಗಿದ್ದವು. ಖಿನ್ನತೆಗೆ ಒಳಗಾಗಿದ್ದ ಕಿಶೋರ್ ಸಾಯಲು ನಿರ್ಧರಿಸಿದ್ದರು.

ಸಾಯುವ ಮೊದಲು ಮಗನಿಗೆ ದೆಹಲಿಯಿಂದ ಮುಂಬೈಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ತನ್ನ ಬ್ಯಾಂಕ್ ಖಾತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ವಾಟ್ಸಾಪ್ ಮೂಲಕ ಸಂಬಂಧಿಕರಿಗೆ ಕಳುಹಿಸಿದ್ದರು. ದಂಪತಿಯ ಮಗ ದೆಹಲಿಯಲ್ಲಿ ನೆಲೆಸಿದ್ದು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ