Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲೇ ಅಳಿಯನ ಹತ್ಯೆ; ಕೃತ್ಯವೆಸಗಿದ್ದು ಅಮಾನತುಗೊಂಡ ಪಂಜಾಬ್ ಪೊಲೀಸ್ ಎಐಜಿ

ಮಲ್ವಿಂದರ್ ಸಿಂಗ್ ಅವರು ಹರ್‌ಪ್ರೀತ್ ಸಿಂಗ್​​ ಗೆ ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಮೂರು ಗುಂಡುಗಳನ್ನು ಹಾರಿಸಿದ್ದು ಅವರನ್ನು  ತಕ್ಷಣವೇ ಬಂಧಿಸಲಾಯಿತು. ಸಿಂಗ್ ಹಾರಿಸಿದ ಗುಂಡು ಹರ್‌ಪ್ರೀತ್ ಸಿಂಗ್ ಎದೆಗೆ ನಾಟಿದ್ದು, ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮಲ್ವಿಂದರ್ ಕೈಯಿಂದ ಕೃತ್ಯಕ್ಕೆ ಬಳಸಿದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲೇ ಅಳಿಯನ ಹತ್ಯೆ; ಕೃತ್ಯವೆಸಗಿದ್ದು ಅಮಾನತುಗೊಂಡ ಪಂಜಾಬ್ ಪೊಲೀಸ್ ಎಐಜಿ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Aug 03, 2024 | 7:40 PM

ಚಂಡೀಗಢ ಆಗಸ್ಟ್ 03: ಭಾರತೀಯ ಸಿವಿಲ್ ಅಕೌಂಟ್ ಸರ್ವಿಸಸ್ (ICAS) ಅಧಿಕಾರಿಯಾಗಿದ್ದ ಹರ್‌ಪ್ರೀತ್ ಸಿಂಗ್ ಅವರನ್ನು ಅವರ ಮಾವ ಮಲ್ವಿಂದರ್ ಸಿಂಗ್ (Malwinder Singh), ಚಂಡೀಗಢದ (Chandigarh) 43ನೇ ಸೆಕ್ಟರ್‌ನ( ಜಿಲ್ಲಾ ನ್ಯಾಯಾಲಯಲ್ಲಿ ಶನಿವಾರ ಮಧ್ಯಾಹ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮಲ್ವಿಂದರ್ ಸಿಂಗ್ ಪಂಜಾಬ್ ಪೊಲೀಸ್‌ನಲ್ಲಿ ಅಮಾನತು ಆಗಿರುವ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಜನರಲ್ (AIG) ಆಗಿದ್ದಾರೆ

ಮಲ್ವಿಂದರ್ ಸಿಂಗ್ ಅವರು ಹರ್‌ಪ್ರೀತ್ ಸಿಂಗ್​​ ಗೆ ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಮೂರು ಗುಂಡುಗಳನ್ನು ಹಾರಿಸಿದ್ದು ಅವರನ್ನು  ತಕ್ಷಣವೇ ಬಂಧಿಸಲಾಯಿತು. ಸಿಂಗ್ ಹಾರಿಸಿದ ಗುಂಡು ಹರ್‌ಪ್ರೀತ್ ಸಿಂಗ್ ಎದೆಗೆ ನಾಟಿದ್ದು, ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮಲ್ವಿಂದರ್ ಕೈಯಿಂದ ಕೃತ್ಯಕ್ಕೆ ಬಳಸಿದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

ಮಲ್ವಿಂದರ್ ಸಿಂಗ್ ಅವರ ಪುತ್ರಿ ಡಾ.ಅಮಿತೋಜ್ ಕೌರ್ ಮತ್ತು ಹರ್‌ಪ್ರೀತ್ ಸಿಂಗ್ ನಡುವಿನ ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳಿದ್ದು ಈ ವಿಷಯದಲ್ಲಿ ಇದು ನಾಲ್ಕನೇ ಮಧ್ಯಸ್ಥಿಕೆ ವಿಚಾರಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡೂ ಕುಟುಂಬಗಳು ಮಧ್ಯಸ್ಥಿಕೆ ಮಾತುಕತೆಗಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು, ಈ ಸಮಯದಲ್ಲಿ ಮಲ್ವಿಂದರ್ ಸಿಂಗ್ ಅವರು ವಾಶ್ ರೂಂ ಅನ್ನು ಬಳಸಲು ವಿನಂತಿಸಿದ್ದು ದಾರಿ ತೋರಿಸುವಂತೆ ಹರ್‌ಪ್ರೀತ್  ಅವರಿಗೆ ಹೇಳಿದ್ದರು. ಸ್ವಲ್ಪ ಸಮಯದ ನಂತರ, ಅವರು ಪಿಸ್ತೂಲ್ ತೆಗೆದುಕೊಂಡು ಅವರು ಹರ್‌ಪ್ರೀತ್ ಸಿಂಗ್ ಮೇಲೆ ಗುಂಡು ಹಾರಿಸಿದರು.

ಹರ್‌ಪ್ರೀತ್  ಅವರ ಪೋಷಕರು, ಕೆಲವು ವಕೀಲರೊಂದಿಗೆ ಅವರನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆ (PGIMER) ಗೆ ದೌಡಾಯಿಸಿದ್ದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

“2023 ರಿಂದ ಎರಡು ಕುಟುಂಬಗಳ ನಡುವೆ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ. ಮೊಹಾಲಿ ಜಿಲ್ಲೆಯಲ್ಲಿ ಎರಡೂ ಕಡೆಯವರು ಪರಸ್ಪರ ದೂರುವ ಹಿಂದಿನ ದಾವೆಗಳನ್ನು ಹೊಂದಿದ್ದಾರೆ. ಈ ವಿಷಯವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಉಲ್ಲೇಖಿಸಲಾಯಿತು, ಅಲ್ಲಿ ನ್ಯಾಯಾಲಯವು ನೇಮಿಸಿದ ಮಧ್ಯವರ್ತಿಯಿಂದ ಪ್ರಕ್ರಿಯೆಗಳನ್ನು ನಡೆಸಲಾಯಿತು. ಹರ್‌ಪ್ರೀತ್ ಸಿಂಗ್ ಮತ್ತು ಅವರ ಹೆತ್ತವರು ಹಾಜರಿದ್ದರು. ಕೆನಡಾದಲ್ಲಿರುವ ಡಾ ಅಮಿತೋಜ್ ಅವರನ್ನು ತಂದೆ ಮಲ್ವಿಂದರ್ ಸಿಂಗ್ ಅವರು ಪ್ರತಿನಿಧಿಸುತ್ತಿದ್ದರು, ”ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ಪವರ್ ಜಿಹಾದ್; ಔರಂಗಜೇಬ್ ಅಭಿಮಾನಿಗಳ ಕ್ಲಬ್ ಎಂದ ಅಮಿತ್​ ಶಾಗೆ ಉದ್ಧವ್ ಠಾಕ್ರೆ ತಿರುಗೇಟು

ಕಳೆದ ವರ್ಷ ನವೆಂಬರ್‌ನಲ್ಲಿ, ಪಂಜಾಬ್ ವಿಜಿಲೆನ್ಸ್ ಬ್ಯೂರೋ ಪಂಜಾಬ್ ಪೊಲೀಸರ ಮಾನವ ಹಕ್ಕುಗಳ ಸೆಲ್‌ನಲ್ಲಿ ಎಐಜಿಯಾಗಿ ನೇಮಕಗೊಂಡಿದ್ದ ಮಲ್ವಿಂದರ್ ಸಿಂಗ್ ಅವರ ವಿರುದ್ಧ ವಂಚನೆ ಮತ್ತು ಸುಲಿಗೆ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು. ಅಂದಿನಿಂದ ಅವರು ಸೇವೆಯಿಂದ ಹೊರಗುಳಿದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ