ಚಂಡೀಗಢದ ಮೆಂಟಲ್ ಆಸ್ಪತ್ರೆಗೆ ಬಾಂಬ್ ಬೆದರಿಕೆ
ಚಂಡೀಗಢದ ಮಾನಸಿಕ ಆರೋಗ್ಯ ಆಸ್ಪತ್ರೆಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿದ್ದಾರೆ. ಕೂಡಲೇ ರೋಗಿಗಳನ್ನು ಬೇರೆಡೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅದೇ ಇಮೇಲ್ ಅನ್ನು ದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ(Bomb Threat)ಗಳು ಹೆಚ್ಚಾಗುತ್ತಿವೆ, ಶಾಲೆ, ಆಸ್ಪತ್ರೆಗಳು, ವಿಮಾನಗಳಿಗೆ ಹೆಚ್ಚಿನ ಬೆದರಿಕೆಗಳು ಬಂದಿವೆ. ಇದೀಗ ಚಂಡೀಗಢದ ಮಾನಸಿಕ ಆಸ್ಪತ್ರೆ(ಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿ ಮಾಡಿದೆ. ಕೂಡಲೇ ರೋಗಿಗಳನ್ನು ಬೇರೆಡೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಅದೇ ಇಮೇಲ್ ಅನ್ನು ದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇ-ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯ ಬಗ್ಗೆ ನಮಗೆ ಆಸ್ಪತ್ರೆಯಿಂದ ಮಾಹಿತಿ ಬಂದಿದೆ, ತಪಾಸಣೆ ವೇಳೆ ಏನೂ ದೊರೆತಿಲ್ಲ, ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ಆಸ್ಪತ್ರೆ ತೆರೆಯಲಾಗುವುದು ಎಂದು ಡಿಎಸ್ಪಿ ದಲ್ಬೀರ್ ಸಿಂಗ್ ತಿಳಿಸಿದ್ದಾರೆ.
ಚಂಡೀಗಢದ ಸೆಕ್ಟರ್ 32 ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಯ ಉಪ ವೈದ್ಯಕೀಯ ಅಧೀಕ್ಷಕಿ ಡಾ ಅಪರಾಜಿತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಗೆ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳು, ವೈದ್ಯರು ಮತ್ತು ಇತರ ಉದ್ಯೋಗಿಗಳು ಸೇರಿದಂತೆ ಸುಮಾರು 100 ಜನರು ಇದ್ದರು ಎಂದು ಅವರು ಹೇಳಿದರು.
ನಮಗೆ ಇ-ಮೇಲ್ ಬಂದಿದೆ, ನಮ್ಮ ಕೇಂದ್ರದ ಜೊತೆಗೆ, ದೇಶದ ಅನೇಕ ಮನೋವೈದ್ಯಕೀಯ ಆಸ್ಪತ್ರೆಗಳಿಗೆ ಇಮೇಲ್ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿ ಬಾಂಬ್ ಇದೆ ಎಂದು ಬರೆಯಲಾಗಿದೆ ಎಂದು ವೈದ್ಯರು ಹೇಳಿದರು. ನಾವು ಪೊಲೀಸರಿಗೆ ಇಮೇಲ್ ಅನ್ನು ಫಾರ್ವರ್ಡ್ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ಬಾಂಬ್ ಇದೆ ಮತ್ತು ಎಲ್ಲರೂ ಸಾಯುತ್ತಾರೆ ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Wed, 12 June 24