ಕೆಳಗೆ ಭಾಗೀರಥಿ ನದಿ, ಮೇಲ್ಗಡೆ ರಸ್ತೆ, ನಡುವಲ್ಲಿ ಮರದ ಮೇಲೆ ನೇತಾಡಿದ ಬಸ್, ಮೂವರು ಸಾವು, 26 ಮಂದಿಗೆ ಗಂಭೀರ ಗಾಯ
ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಕಂದಕದತ್ತ ಹಾರಿದ ಪರಿಣಾಮ ಬಸ್ ಮರದಲ್ಲಿ ಸಿಕ್ಕಿಹಾಕಿಕೊಂಡಿರುವ ಘಟನೆ ಉತ್ತರ ಕಾಶಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಂದೊಮ್ಮೆ ಬಸ್ ಭಾಗೀರಥಿ ನದಿಗೆ ಬಿದ್ದಿದ್ದರೆ ಮತ್ತಷ್ಟು ಮಂದಿ ಸಾಯುವ ಸಾಧ್ಯತೆ ಇತ್ತು.
ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಗಂಗ್ನಾನಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕದತ್ತ ಹಾರಿದ್ದು, ಮರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 26 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಗಂಗ್ನಾನಿಯಿಂದ 50 ಕಿಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ, ಕ್ರ್ಯಾಶ್ ಬ್ಯಾರಿಯರ್ ಮುರಿದು, ಕಮರಿಗೆ ಉರುಳಿ ಕೆಳಗೆ ಬೀಳುವ ಮುನ್ನವೇ ಮರದ ಮೇಲೆ ಸಿಲುಕಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮರದಲ್ಲಿ ಸಿಲುಕಿ ಭಾಗೀರಥಿ ನದಿಗೆ ಬೀಳದ ಕಾರಣ ಬಹಳಷ್ಟು ಜೀವಗಳನ್ನು ಉಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಾಲಕ ಮತ್ತು ಅವರ ಸಹಾಯಕ ಸೇರಿದಂತೆ 29 ಜನರೊಂದಿಗೆ ಬಸ್ ಗಂಗೋತ್ರಿಯಿಂದ ಉತ್ತರಕಾಶಿ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ರಕ್ಷಣಾ ಮತ್ತು ಪರಿಹಾರ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು.
ಅಧಿಕಾರಿಯ ಪ್ರಕಾರ, ಗಾಯಾಳುಗಳನ್ನು ಬಸ್‌ನಿಂದ ಕಿಟಕಿಗಳ ಮೂಲಕ ಹೊರಗೆ ತಂದು ಉತ್ತರಕಾಶಿ ಜಿಲ್ಲಾ ಆಸ್ಪತ್ರೆ ಮತ್ತು ಭಟವಾಡಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಗಾಯಗೊಂಡ 26 ಮಂದಿಯಲ್ಲಿ 12 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಿಷಿಕೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ರಾಜಸ್ಥಾನದಲ್ಲಿ ಭೀಕರ ಅಪಘಾತ; ಟ್ರಕ್ಗೆ ಬಸ್ ಡಿಕ್ಕಿ ಹೊಡೆದು ಐವರು ಸಾವು, 12 ಜನರ ಸ್ಥಿತಿ ಗಂಭೀರ
ಮೃತರನ್ನು ಹಲ್ದ್ವಾನಿ ನಿವಾಸಿಗಳಾದ ದೀಪಾ ವರ್ಸಾಲಿಯಾ (55) ಮತ್ತು ಮೀನಾ ರೆಕ್ವಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರದ ನೀಮಾ ಕೇದಾ (57) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಭಕ್ತರು ಉತ್ತರಾಖಂಡದ ರುದ್ರಪುರ, ಹಲ್ದ್ವಾನಿ ಮತ್ತು ಲಾಲ್ಕುವಾನ್‌ನವರಾಗಿದ್ದರೆ, ಇತರ ನಾಲ್ವರು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವರು ಮತ್ತು ಒಬ್ಬರು ಬುಲಂದ್‌ಶಹರ್‌ನವರು.
ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಗಾಯಾಳುಗಳೊಂದಿಗೆ ಮಾತನಾಡಿ, ಅಪಘಾತಕ್ಕೆ ಬ್ರೇಕ್ ವೈಫಲ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.
2010 ರಲ್ಲಿ ಇದೇ ಸ್ಥಳದಲ್ಲಿ ಟ್ರಕ್ ಕಮರಿಗೆ ಬಿದ್ದು 27 ಕನ್ವಾರಿಯಾಗಳು ಸಾವನ್ನಪ್ಪಿದ್ದರೆ, 2023 ರಲ್ಲಿ ಇಲ್ಲಿ ಬಸ್ ಅಪಘಾತದಲ್ಲಿ ಏಳು ಯಾತ್ರಿಕರು ಸಾವನ್ನಪ್ಪಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ