ಶಾಲಾ ಬಸ್ ಚಲಿಸುತ್ತಿರುವಾಗಲೇ ಹೃದಯಘಾತ: ಚಾಲಕನ ಸಮಯಪ್ರಜ್ಞೆಯಿಂದ ಉಳಿತು ವಿದ್ಯಾರ್ಥಿಗಳ ಜೀವ
ಬ್ರಹ್ಮಾವರದ ಖಾಸಗಿ ಶಾಲೆಯಿಂದ ಹೊರಟ ಶಾಲಾ ಬಸ್ ದಾರಿ ಮಧ್ಯೆ ಚಾಲಕ ಮೇಲ್ವಿನ್ಗೆ ಹೃದಯಾಘಾತ ಕಾಣಿಸಿಕೊಂಡಿದೆ. ಈ ವೇಳೆ ತಮ್ಮ ಸಮಯ ಪ್ರಜ್ಞೆಯಿಂದ ಎದುರಲ್ಲಿದ್ದ ಮರವನ್ನು ತಪ್ಪಿಸಿ ರಸ್ತೆಯ ಬದಿಗೆ ಬಸ್ಸನ್ನು ಕೊಂಡೊಯ್ದಿದ್ದಾರೆ. ಇದರಿಂದ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉಡುಪಿ, ಜೂನ್ 5: ಚಲಿಸುತ್ತಿದ್ದ ಶಾಲಾ ಬಸ್ (School bus) ಚಾಲಕನಿಗೆ ಹೃದಯಾಘಾತವಾದರೂ (heart attack) ಆತನ ಸಮಯ ಪ್ರಜ್ಞೆಯಿಂದ ಬಸ್ನ್ನು ರಸ್ತೆ ಬದಿಗೆ ಕೊಂಡೊಯ್ಯುವ ಮೂಲಕ ಸಾವಿನ ದವಡೆಯಿಂದ ವಿದ್ಯಾರ್ಥಿಗಳನ್ನು ಪಾರುಮಾಡಿದ್ದಾರೆ. ಬಸ್ನಲ್ಲಿದ್ದ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಉಡುಪಿ ನಗರದ ಹೊರವಲಯದ ಪರಂಪಳ್ಳಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕರ್ಜೆ ನಿವಾಸಿ ಮೇಲ್ವಿನ್ ಹೃದಯಾಘಾತಕ್ಕೊಳಗಾದ ಚಾಲಕ. ಸದ್ಯ ಅವರನ್ನು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬ್ರಹ್ಮಾವರದ ಖಾಸಗಿ ಶಾಲೆಯಿಂದ ಹೊರಟ ಶಾಲಾ ಬಸ್ ದಾರಿ ಮಧ್ಯೆ ಚಾಲಕ ಮೇಲ್ವಿನ್ಗೆ ಹೃದಯಾಘಾತ ಕಾಣಿಸಿಕೊಂಡಿದೆ. ಈ ವೇಳೆ ತಮ್ಮ ಸಮಯ ಪ್ರಜ್ಞೆಯಿಂದ ಎದುರಲ್ಲಿದ್ದ ಮರವನ್ನು ತಪ್ಪಿಸಿ ರಸ್ತೆಯ ಬದಿಗೆ ಬಸ್ಸನ್ನು ಕೊಂಡೊಯ್ದಿದ್ದಾರೆ. ಇದರಿಂದ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕ್ ಫೇಲ್ ಆಗಿ ಫ್ಲಾಟ್ ಫಾರಂಗೆ ನುಗ್ಗಿದ ಬಸ್: ಪ್ರಯಾಣಿಕರಿಗೆ ಗಾಯ
ಗದಗ: ಬ್ರೇಕ್ ಫೇಲ್ ಆಗಿ ಫ್ಲಾಟ್ ಫಾರಂಗೆ ಬಸ್ ನುಗ್ಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಫ್ಲಾಟ್ ಫಾರಂನಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ನಿಲ್ದಾಣದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ನಿಂತುಕೊಂಡಿದೆ.
ಇದನ್ನೂ ಓದಿ: ಕಳ್ಳತನ ಆರೋಪ ಹೊರಿಸಿದ್ದಕ್ಕೆ ಸೆಲ್ಫಿ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ
ಏಕಾಏಕಿ ಬಸ್ ನಿಲ್ದಾಣದ ಪ್ಲಾಟಫಾರಂಗೆ ನುಗ್ಗಿದ್ದರಿಂದ ಕೆಲಕಾಲ ಆತಂಕ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೊಳೆತ ಸ್ಥಿತಿಯಲ್ಲಿ ಜೋಡಿಗಳಿಬ್ಬರ ಮೃತದೇಹ ಪತ್ತೆ
ಬೆಂಗಳೂರು: ಜೋಡಿಗಳಿಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ನಡೆದಿದೆ. ಬಿಜಾಪುರ ಮೂಲದ ಲಕ್ಕಮ್ಮ ಮತ್ತು ಜಿಗಣಿ ಬಳಿಯ ಹುಲ್ಲಹಳ್ಳಿ ಗ್ರಾಮದ ಪ್ರಭು ಮೃತರು. ಕಳೆದ ಮೂರು ದಿನಗಳ ಹಿಂದೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಉತ್ತರಾಖಂಡ್ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಜನ ಸಾವು: ಮೃತರ ಗುರುತು ಪತ್ತೆ
ಡ್ರೈವರ್ ಕೆಲಸ ಮಾಡುತ್ತಿದ್ದ ಪ್ರಭು ಮತ್ತು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ಇಬ್ಬರಿಗೂ ಕಳೆದ ಕೆಲ ವರ್ಷಗಳ ಹಿಂದೆ ಒಬ್ಬರಿಗೊಬ್ಬರು ಪರಿಚಿಯವಾಗಿತ್ತು. ಬಳಿಕ ಇಬ್ಬರು ವಿಶ್ವನಾಥ್ ಎಂಬುವರ ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ವಾಸವಾಗಿದ್ದರು. ಆದ್ರೆ ಕಳೆದ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಮನೆಯಲ್ಲಿ ಕೆಟ್ಟ ದುರ್ವಾಸನೆ ಬರುತ್ತಿರುವುದನ್ನ ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ಪಟ್ಟು ಮೂರ್ನಾಲ್ಕು ದಿನಗಳಾಗಿದ್ದು ಇಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.