ಮುಂಬೈ: ಮಲಾಡ್ ಕೊಳೆಗೇರಿಯಲ್ಲಿ ಅಗ್ನಿ ಅವಘಡ, ಆವರಿಸಿದ ದಟ್ಟ ಹೊಗೆ; ಕೇಳಿ ಬಂತು ಸ್ಫೋಟದ ಸದ್ದು

ಸಂಜೆ 4.52 ರ ಸುಮಾರಿಗೆ ಆನಂದ್ ನಗರದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಮೊದಲ ಕರೆಯನ್ನು ಸ್ವೀಕರಿಸಿದರು, ಇದನ್ನು ಬೃಹನ್‌ಮುಂಬೈ ಮುನಿಪಿಕಲ್ ಕಾರ್ಪೊರೇಷನ್ (ಬಿಎಂಸಿ) ಹಂತ 1 ಎಂದು ಘೋಷಿಸಿತು.

Follow us
ರಶ್ಮಿ ಕಲ್ಲಕಟ್ಟ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 13, 2023 | 6:39 PM

ಮುಂಬೈನ ಮಲಾಡ್ ಪೂರ್ವದ (Malad East)ಕೊಳೆಗೇರಿ (Slum) ಪ್ರದೇಶದಲ್ಲಿ ಎರಡು ಪ್ರಮುಖ ಬೆಂಕಿ ಕಾಣಿಸಿಕೊಂಡಿದ್ದು, ಒಂದನ್ನು ಹಂತ-3 ಎಂದು ಘೋಷಿಸಲಾಗಿದೆ. ಮಲಾಡ್ ಪೂರ್ವದ ಆನಂದ್ ನಗರ ಮತ್ತು ಅಪ್ಪಾಪಾಡಾ ಪ್ರದೇಶಗಳಿಂದ ಹೊಗೆ ಬರುತ್ತಿರುವ ವಿಡಿಯೊಗಳನ್ನು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಸಂಜೆ 4.52 ರ ಸುಮಾರಿಗೆ ಆನಂದ್ ನಗರದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಮೊದಲ ಕರೆಯನ್ನು ಸ್ವೀಕರಿಸಿದರು, ಇದನ್ನು ಬೃಹನ್‌ಮುಂಬೈ ಮುನಿಪಿಕಲ್ ಕಾರ್ಪೊರೇಷನ್ (BMC) ಹಂತ 1 ಎಂದು ಘೋಷಿಸಿತ್ತು. ನಂತರ ಅದನ್ನು 2 ನೇ ಹಂತಕ್ಕೆ ಎಂದು ಹೇಳಿದೆ.

ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿ ಆಗಿಲ್ಲ.

ಇದಕ್ಕಿಂತ ಮುಂಚೆ ಜೋಗೇಶ್ವರಿ (ಪಶ್ಚಿಮ) ದ ರಿಲೀಫ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಎದುರು ಘಾಸ್ ಕಾಂಪೌಂಡ್‌ನಲ್ಲಿರುವ ಪೀಠೋಪಕರಣಗಳ ಗೋಡೌನ್‌ನಲ್ಲಿ ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು.ಜೋಗೇಶ್ವರಿಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿವೆ.

ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, 3 ನೇ ಹಂತದ ಬೆಂಕಿ  ಬೆಳಿಗ್ಗೆ 11.21 ಕ್ಕೆ ವರದಿಯಾಗಿದೆ.

“ಫರ್ನಿಚರ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ” ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Mon, 13 March 23