ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: 22 ಕೊವಿಡ್ ರೋಗಿಗಳ ದುರ್ಮರಣ

| Updated By: shruti hegde

Updated on: Apr 21, 2021 | 3:32 PM

ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ರೋಗಿಗಳು ವೆಂಟಿಲೇಟರ್​ನ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 22 ರೋಗಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ರೋಗಿಗಳು ಕೊವಿಡ್ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಎನ್​ಡಿಟಿವಿ ಜಾಲತಾಣ ವರದಿ ಮಾಡಿದೆ. 

ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: 22 ಕೊವಿಡ್ ರೋಗಿಗಳ ದುರ್ಮರಣ
ಆಸ್ಪತ್ರೆಯ ದೃಶ್ಯ
Follow us on

ಮುಂಬೈ: ಮಹಾರಾಷ್ಟ್ರದ ನಾಸಿಕ್​ನ ಝಾಕಿತ್ ಹುಸೇನ್ ಆಸ್ಪತ್ರೆಯ ಹೊರಭಾಗದಲ್ಲಿ ಆಕ್ಸಿಜನ್ ಟ್ಯಾಂಕರ್​ ಸೋರಿಕೆಯಾಗಿ ಅರ್ಧ ಘಂಟೆಗಳ ಕಾಲ ಆಮ್ಲಜನಕ ಸರಬರಾಜು ನಿಂತ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದ  22 ರೋಗಿಗಳು ಮೃತಪಟ್ಟ ಘಟನೆ ಇಂದು ನಡೆದಿದೆ. ಆಮ್ಲಜನಕದ ಸರಬರಾಜು ನಿಲುಗಡೆಯಾದ ಕಾರಣ ರೋಗಿಗಳ ಸಂಬಂಧಿಕರು ಕಂಗಾಲಾದರು. ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ರೋಗಿಗಳು ವೆಂಟಿಲೇಟರ್​ನ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ 22 ರೋಗಿಗಳು ಮೃತಪಟ್ಟಿದ್ದಾರೆ. ಮೃತಪಟ್ಟ ರೋಗಿಗಳು ಕೊವಿಡ್ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದರು.  

ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ರಾಜೇಶ್ ಟೋಪೆ ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಈ ದುರ್ಘಟನೆಯನ್ನು ಮಹಾರಾಷ್ಟ್ರ ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗುವುದು’ ಎಂದು ತಿಳಿಸಿದ್ದಾರೆ.

ಟ್ಯಾಂಕರ್​ನಿಂದ ಸೋರಿಕೆಯಾದ ಆಮ್ಲಜನಕ ಸುತ್ತಮುತ್ತಲಿನ ವಾತಾವರಣದಲ್ಲಿ ಹರಡರುವುದನ್ನು ಕಂಡು ಆಸ್ಪತ್ರೆಯ ಸುತ್ತ ನೆರೆದಿದ್ದ ಜನರು, ರೋಗಿಗಳ ಸಂಬಂಧಿಕರು ಗಾಬರಿಗೊಳಗಾದರು. ನೀರು ಚಿಮುಕಿಸಿ ಆಮ್ಲಜನಕ ಸೋರಿಕೆಯನ್ನು ತಡೆಯಲು ಪ್ರಯತ್ನಿಸಿದರು. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಈ ಘಟನೆ ನಡೆದ ನಂತರ ಆಮ್ಲಜನಕದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ 31 ರೋಗಿಗಳನ್ನು ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.  ಎನ್​ಸಿಪಿ ಪಕ್ಷ ಮುಖಂಡ ಮಜೀದ್ ಮೆಮನ್, ಈ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ, ಘಟನೆಯಲ್ಲಿ ಮೃತಪಟ್ಟವರ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ದಿನಕ್ಕೆ 700 ಟನ್ ಆಮ್ಲಜನಕ ಪೂರೈಸುವ ರಿಲಯನ್ಸ್​ನಿಂದ 70 ಸಾವಿರಕ್ಕೂ ಹೆಚ್ಚು ಜೀವ ರಕ್ಷಣೆ

JSW steel: ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕ ಪೂರೈಕೆಗೆ ಜೆಎಸ್‌ಡಬ್ಲ್ಯೂ ಸ್ಟೀಲ್ ಸಮ್ಮತಿ

Published On - 3:14 pm, Wed, 21 April 21