AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ 10ನೇ ಮಹಡಿಯಿಂದ ಜಿಗಿದ ಮಹಿಳೆಯ ಜೀವ ಕಾಪಾಡಿತು ಮರದ ಕೊಂಬೆ!

ಮುಂಬೈನ ಭಾಂಡೂಪ್ ಉಪನಗರದಲ್ಲಿ ಬುಧವಾರ ಬೆಳಿಗ್ಗೆ ಕಟ್ಟಡವೊಂದರ 10ನೇ ಮಹಡಿಯಿಂದ ಜಿಗಿದಿದ್ದ 26 ವರ್ಷದ ಮಹಿಳೆಯೊಬ್ಬರು ಮರದ ಮೇಲೆ ಬಿದ್ದು, ರೆಂಬೆಯಲ್ಲಿ ನೇತಾಡಿದ್ದಾರೆ. ಮುಂಬೈನ ಅಗ್ನಿಶಾಮಕ ದಳದ ಸಿಬ್ಬಂದಿ ಆಕೆಯನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ್ದಾರೆ. ಪ್ರತೀಕ್ಷಾ ಹಿವ್ರಾಳೆ ಎಂಬ ಈ ಮಹಿಳೆ, ಲೇಕ್ ರೋಡ್‌ನಲ್ಲಿರುವ ಸನ್‌ಶೈನ್ ಕಟ್ಟಡದ ಫ್ಲ್ಯಾಟ್ ಒಂದರ ಕಿಟಕಿಯಿಂದ ಜಿಗಿದಿದ್ದರು ಎನ್ನಲಾಗಿದೆ. ಅವರು ನೇರವಾಗಿ ನೆಲಕ್ಕೆ ಬೀಳುವ ಬದಲಿಗೆ, ಹತ್ತಿರದಲ್ಲಿದ್ದ ಮರದ ಮೇಲೆ ಬಿದ್ದಿದ್ದರಿಂದ ನೆಲದಿಂದ ಸುಮಾರು 25 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು.

ಮುಂಬೈನಲ್ಲಿ 10ನೇ ಮಹಡಿಯಿಂದ ಜಿಗಿದ ಮಹಿಳೆಯ ಜೀವ ಕಾಪಾಡಿತು ಮರದ ಕೊಂಬೆ!
Mumbai Woman JumpImage Credit source: x
ಸುಷ್ಮಾ ಚಕ್ರೆ
|

Updated on: Aug 27, 2026 | 3:27 PM

Share

ಮುಂಬೈ, ಆಗಸ್ಟ್ 27: ಮುಂಬೈನ (Mumbai) ಎತ್ತರದ ಕಟ್ಟಡವೊಂದರ 10ನೇ ಮಹಡಿಯಿಂದ ಕೆಳಗೆ ಜಿಗಿದ ಮಹಿಳೆಯೊಬ್ಬರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕೆಳಗೆ ಬೀಳುವಾಗ ದಟ್ಟವಾದ ಮರದ ಕೊಂಬೆಗಳ ಮೇಲೆ ಬಿದ್ದಿದ್ದರಿಂದ ಅವರ ಜೀವ ಉಳಿದಿದೆ. ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇದರಿಂದಾಗಿ ನೇರವಾಗಿ ನೆಲಕ್ಕೆ ಬೀಳುವುದು ತಪ್ಪಿ, ಭಾರಿ ಅನಾಹುತವೊಂದು ತಪ್ಪಿದೆ.

ಆ ಮಹಿಳೆ ಮರದ ಕೊಂಬೆಯಲ್ಲಿ ಸಿಲುಕಿಕೊಂಡಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಹುಕ್ ಏಣಿಯನ್ನು ಬಳಸಿ ಆಕೆಯನ್ನು ಮರದಿಂದ ಸುರಕ್ಷಿತವಾಗಿ ಕೆಳಗಿಳಿಸಿದರು. ನಂತರ ಅವರನ್ನು ಆ್ಯಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಎಡಕಾಲಿಗೆ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಅವರನ್ನು ಸಿಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಫರೀದಾಬಾದ್‌ನಲ್ಲಿ ಭೀಕರ ಕೃತ್ಯ; ಪತಿಯ ಕೊಲೆ ಮಾಡಿ ಮನೆ ಬಳಿ ಹೂತುಹಾಕಿದ ಹೆಂಡತಿ-ಪ್ರಿಯಕರ!

ಈ ಘಟನೆಯ ಕುರಿತು ವರದಿ ಮಾಡಿರುವ ‘ಇಂಡಿಯಾ ಟುಡೇ’, ಈ ಘಟನೆ ಭಾಂಡೂಪ್ ವೆಸ್ಟ್‌ನ ತುಳಶೇಟ್‌ಪಡಾದಲ್ಲಿರುವ ಸನ್‌ಶೈನ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ ಎಂದು ತಿಳಿಸಿದೆ. ರಕ್ಷಿಸಿದ ತಕ್ಷಣವೇ ಮಹಿಳೆಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ದೋಖಾ: ಕೇರಳದಲ್ಲಿ ಸಿಕ್ಕಿಬಿದ್ರು ತಾಯಿ, ಮಗ!

ಆ ಮಹಿಳೆಗೆ ಸುಮಾರು 4 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಪೊಲೀಸರಿಗೆ ಇದುವರೆಗೆ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಘಟನೆಯ ಕುರಿತು ಮಹಿಳೆಯ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಆ ಮಹಿಳೆ 10ನೇ ಮಹಡಿಯಿಂದ ಜಿಗಿಯಲು ನಿಜವಾದ ಕಾರಣವೇನು? ಎಂಬುದರ ಕುರಿತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us