Mumbai: ಮುಂಬೈನ ಬೈಕುಲ್ಲಾ ಜೈಲಿನ ಹೊರಗಡೆ ಗುಂಡು ಹಾರಿಸಿಕೊಂಡು ಪೊಲೀಸ್ ಕಾನ್​ಸ್ಟೆಬಲ್ ಆತ್ಮಹತ್ಯೆ

ಕರ್ತವ್ಯ ನಿರತ ಪೊಲೀಸ್ ಕಾನ್​ಸ್ಟೆಬಲ್​ ಗುರುವಾರ ತಡರಾತ್ರಿ ಮುಂಬೈನ ಬೈಕುಲ್ಲಾ ಜೈಲಿನ ಹೊರಗೆ ಸ್ವಯಂ-ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್) ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Mumbai: ಮುಂಬೈನ ಬೈಕುಲ್ಲಾ ಜೈಲಿನ ಹೊರಗಡೆ ಗುಂಡು ಹಾರಿಸಿಕೊಂಡು ಪೊಲೀಸ್ ಕಾನ್​ಸ್ಟೆಬಲ್ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Image Credit source: India Today

Updated on: Feb 24, 2023 | 9:28 AM

ಕರ್ತವ್ಯ ನಿರತ ಪೊಲೀಸ್ ಕಾನ್​ಸ್ಟೆಬಲ್​ ಗುರುವಾರ ತಡರಾತ್ರಿ ಮುಂಬೈನ ಬೈಕುಲ್ಲಾ ಜೈಲಿನ ಹೊರಗೆ ಸ್ವಯಂ-ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್) ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾನ್‌ಸ್ಟೆಬಲ್ ಶ್ಯಾಮ್ ವಾರ್ಘಡೆ ಬೈಕುಲ್ಲಾ ಮಹಿಳಾ ಕಾರಾಗೃಹದ ಹೊರಗೆ ಕಾವಲುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅವರು ತಾಡಿಯೊ ಸ್ಥಳೀಯ ಆರ್ಮ್ ಯುನಿಟ್-2 ನೊಂದಿಗೆ ಸಂಬಂಧ ಹೊಂದಿದ್ದರು. ಕಾನ್‌ಸ್ಟೆಬಲ್‌ರನ್ನು ಚಿಕಿತ್ಸೆಗಾಗಿ ನಾಯರ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.

ಮತ್ತಷ್ಟು ಓದಿ: ಹೆಂಡತಿ ಕೋಪಗೊಂಡಿದ್ದಾಳೆ; ರಜೆ ಕೇಳುವಲ್ಲಿ ಪ್ರಮಾಣಿಕತೆ ಮೆರೆದ ನವವಿವಾಹಿತ ಕಾನ್ಸ್​ಟೇಬಲ್​

ಪೊಲೀಸರು ವರದಿಯನ್ನು (ಎಡಿಆರ್) ದಾಖಲಿಸಿಕೊಂಡಿದ್ದಾರೆ ಮತ್ತು ಮುಂಬೈನ ನಾಗ್ಪಾಡಾ ಪೊಲೀಸ್ ಠಾಣೆ ಘಟನೆಯ ತನಿಖೆ ನಡೆಸುತ್ತಿದೆ.
ಆದರೆ ಗುಂಡು ಹಾರಿಸಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ.

 

ಮೈಸೂರಿನಲ್ಲಿ ಮಹಿಳಾ ಕಾನ್​ಸ್ಟೆಬಲ್ ಆತ್ಮಹತ್ಯೆ

ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ (Lady Constable) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್​ಆರ್​​ಪಿ ವಸತಿಗೃಹದ ಮನೆಯಲ್ಲಿ ಬುಧವಾರ  ನಡೆದಿದೆ. ಮೃತಪಟ್ಟವರನ್ನು ಲೇಡಿ ಕಾನ್ಸ್ಟೇಬಲ್ 32 ವರ್ಷದ ಗೀತಾ ಎಂದು ಗುರುತಿಸಲಾಗಿದೆ.

ಗೀತಾ, ನಜರಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದರು. ಮೊನ್ನೆ ಅನಾರೋಗ್ಯದ ಕಾರಣ ನೀಡಿ ಕೆಲಸದಿಂದ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ಪತಿಯನ್ನು, ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದರು. ಪತಿ ಹೋಗಿ ಪತ್ನಿ ಗೀತಾಗೆ ಫೋನ್ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ