Madhya Pradesh: ಮದುವೆ ಮೆರವಣಿಗೆಯಲ್ಲಿ ಡ್ರೈವಿಂಗ್ ಬಾರದವನಿಗೆ ಜೀಪ್​ನ ಕೀ ಕೊಟ್ಟ ವ್ಯಕ್ತಿ, ದುರಂತವೇ ನಡೆದುಹೋಯ್ತು

ಖುಷಿ ಖುಷಿಯಿಂದ ಇರಬೇಕಿದ್ದ ಮದುವೆ ಮನೆಯು ಕ್ಷಣದಲ್ಲೇ ಸ್ಮಶಾನವಾಗಿ ಹೋಯಿತು, ವ್ಯಕ್ತಿಯೊಬ್ಬನ ಅಜಾಗರೂಕತೆಯಿಂದ ಇಬ್ಬರ ಪ್ರಾಣವೇ ಹೋಯ್ತು

Madhya Pradesh: ಮದುವೆ ಮೆರವಣಿಗೆಯಲ್ಲಿ ಡ್ರೈವಿಂಗ್ ಬಾರದವನಿಗೆ ಜೀಪ್​ನ ಕೀ ಕೊಟ್ಟ ವ್ಯಕ್ತಿ, ದುರಂತವೇ ನಡೆದುಹೋಯ್ತು
ಪೊಲೀಸ್ ವಾಹನImage Credit source: NDTV
Follow us
ನಯನಾ ರಾಜೀವ್
|

Updated on: Feb 24, 2023 | 8:22 AM

ಖುಷಿ ಖುಷಿಯಿಂದ ಇರಬೇಕಿದ್ದ ಮದುವೆ ಮನೆಯು ಕ್ಷಣದಲ್ಲೇ ಸ್ಮಶಾನವಾಗಿ ಹೋಯಿತು, ವ್ಯಕ್ತಿಯೊಬ್ಬನ ಅಜಾಗರೂಕತೆಯಿಂದ ಇಬ್ಬರ ಪ್ರಾಣವೇ ಹೋಯ್ತು. ಅಂದು ಮದುವೆಯ ದಿಬ್ಬಣ ತೆರಳುತ್ತಿತ್ತು, ರಸ್ತೆಯಲ್ಲಿ 30-40 ಮಂದಿ ಹಾಡುತ್ತಾ, ಕುಣಿಯುತ್ತಾ, ಒಬ್ಬರೊನ್ನಬ್ಬರು ಕಾಲು ಎಳೆಯುತ್ತಾ ಸಂತಸದಿಂದಿದ್ದ ಕ್ಷಣ. ಜೀಪ್​ನ ಚಾಲಕನೊಬ್ಬ ತಾನೂ ಆ ಮೆರವಣಿಗೆಯಲ್ಲಿ ಎಂಜಾಯ್ ಮಾಡಬೇಕೆಂದು ಹೇಳಿ ಚಾಲನೆಯೇ ಬಾರದ ವ್ಯಕ್ತಿಯ ಕೈಗೆ ಜೀಪ್​ನ ಕೀ ಕೊಟ್ಟು ತಾನು ಡ್ಯಾನ್ಸ್ ಮಾಡಲು ತೆರಳಿದ.

ಆತ ಸ್ವಲ್ಪ ದೂರದವರೆಗೆ ನಿಧಾನವಾಗಿ ಜೀಪ್ ಚಲಾಯಿಸಿದ್ದಾನೆ, ನಂತರ ವೇಗ ಹೆಚ್ಚಾಗಿ ಅದು ಹತ್ತಾರು ಜನರ ಮೇಲೆ ಹತ್ತಿತ್ತು. ಬಳಿಕ ಇಬ್ಬರು ಮೃತಪಟ್ಟಿದ್ದು 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ, ಆ ಚಾಲಕನ ಅಜಾಗರೂಕತೆಯಿಂದ ಎರಡು ಮುಗ್ದ ಜೀವಗಳು ಬಲಿಯಾಗಿವೆ. ಗಾಯಗೊಂಡಿರುವ ಇತರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್​ಗೆ ಕಳುಹಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಸಮಯದಲ್ಲಿ ಜೀಪ್​ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ