ಟ್ರಾಫಿಕ್ ನಿಯಮ(Traffic Rules) ವನ್ನು ಉಲ್ಲಂಘಿಸಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಟ್ರಾಫಿಕ್ ಪೊಲೀಸರನ್ನೇ ಕಾರಿನ ಬಾನೆಟ್ ಮೇಲೆ 20 ಕಿ.ಮೀ ಎಳೆದೊಯ್ದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ, ಸಿಗ್ನಲ್ ಜಂಪ್ ಮಾಡಿ ಹೋಗಲು ಯತ್ನಿಸುತ್ತಿದ್ದ ಚಾಲಕನನ್ನು ತಡೆಯಲು ಹೋದ ಟ್ರಾಫಿಕ್ ಪೊಲೀಸರೊಬ್ಬರನ್ನು ಬಾನೆಟ್ ಮೇಲೆ 20 ಕಿ.ಮೀ ದೂರ ಎಳೆದೊಯ್ದಿರುವ ಘಟನೆ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪೊಲೀಸರು ಕಾರು ಚಾಲಕ ನೆರೂಲ್ ನಿವಾಸಿ ಆದಿತ್ಯ ಬೆಮ್ಡೆ (23) ನನ್ನು ಬಂಧಿಸಿದ್ದಾರೆ.
ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಾಫಿಕ್ ಕಾನ್‌ಸ್ಟೆಬಲ್ ಸಿದ್ಧೇಶ್ವರ ಮಾಳಿ (37) ಕಾರಿನ ಮುಂಭಾಗದಲ್ಲಿ ತೀವ್ರವಾಗಿ ಸಿಕ್ಕಿಹಾಕಿಕೊಂಡಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಾಮಾನ್ಯವಾಗಿ ಈ ದೂರವನ್ನು ಕ್ರಮಿಸಲು ಕನಿಷ್ಠ 15-20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪಾಮ್ ಬೀಚ್ ರಸ್ತೆಯ ಹಲವೆಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ.
#WATCH: Car driver drags traffic cop for 20 km between Vashi and Gavan Phata under the influence of marijuana; arrested #navimumbai #Maharashtra #Traffic pic.twitter.com/RHhsRdxuhS
— Free Press Journal (@fpjindia) April 15, 2023
ಕಾನ್ಸ್‌ಟೇಬಲ್ ಸಿದ್ಧೇಶ್ವರ ಮಾಳಿ ಅವರು ಬ್ಲೂ ಡೈಮಂಡ್ ಜಂಕ್ಷನ್‌ನಲ್ಲಿ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕನನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಚಾಲಕ ವೇಗ ಹೆಚ್ಚಿಸಿದ್ದ, ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದರೂ ನಿಲ್ಲಿಸಿದ ವ್ಯಕ್ತಿ ಬರೋಬ್ಬರಿ 20 ಕಿ.ಮೀ ಕಾರು ಚಲಾಯಿಸಿದ್ದಾನೆ.
ಮತ್ತಷ್ಟು ಓದಿ: ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳಾ ಪೊಲೀಸರ ಫೋಟೊ ವೈರಲ್, ಇಲಾಖೆ ಹೇಳಿದ್ದೇನು?
ವಾಶಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಶಶಿಕಾಂತ್ ಚಂಡೇಕರ್ ಮಾತನಾಡಿ, ಚಾಲಕನ ವೈದ್ಯಕೀಯ ಪರೀಕ್ಷೆಯಲ್ಲಿ ಕುಡಿದಿರುವುದು ತಿಳಿದುಬಂದಿದೆ, ಬಂಧಿತ ವ್ಯಕ್ತಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಮತ್ತು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ