ಹೆಲ್ಮೆಟ್​ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳಾ ಪೊಲೀಸರ ಫೋಟೊ ವೈರಲ್, ಇಲಾಖೆ ಹೇಳಿದ್ದೇನು?

ನಿಯಮಗಳು ಎಂಬುದು ಎಲ್ಲರಿಗೂ ಒಂದೇ, ನಿಯಮಗಳನ್ನು ಪಾಲಿಸಿ ಎಂದು ಹೇಳಬೇಕಾದವರೇ ಉಲ್ಲಂಘಿಸಿದರೆ ಹೇಗೆ?. ಹೆಲ್ಮೆಟ್​ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮುಂಬೈ ಮಹಿಳಾ ಪೊಲೀಸರಿಬ್ಬರ ಚಿತ್ರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಲ್ಮೆಟ್​ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳಾ ಪೊಲೀಸರ ಫೋಟೊ ವೈರಲ್, ಇಲಾಖೆ ಹೇಳಿದ್ದೇನು?
ಮುಂಬೈ ಪೊಲೀಸ್
Follow us
ನಯನಾ ರಾಜೀವ್
|

Updated on: Apr 11, 2023 | 12:30 PM

ನಿಯಮಗಳು ಎಂಬುದು ಎಲ್ಲರಿಗೂ ಒಂದೇ, ನಿಯಮಗಳನ್ನು ಪಾಲಿಸಿ ಎಂದು ಹೇಳಬೇಕಾದವರೇ ಉಲ್ಲಂಘಿಸಿದರೆ ಹೇಗೆ?. ಹೆಲ್ಮೆಟ್​ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮುಂಬೈ ಮಹಿಳಾ ಪೊಲೀಸರಿಬ್ಬರ ಚಿತ್ರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳಲಾಗಿದೆ, ನಾವು ಕೂಡ ಹೀಗೆ ಪ್ರಯಾಣಿಸಿದರೆ ನೀವು ದಂಡ ಹಾಕುತ್ತೀರಿ, ಇದು ಸಂಚಾರ ನಿಯಮ ಉಲ್ಲಂಘನೆಯಲ್ಲವೇ ಎಂದು ರಾಹುಲ್ ಬರ್ಮನ್ ಎಂಬುವವರು ಪ್ರಶ್ನಿಸಿದ್ದಾರೆ.

ಶಾಂತಿ ಕಾಪಾಡಲು ದೇಶದ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಪರಾಧ ನಿಯಂತ್ರಣದ ಜತೆಗೆ ಟ್ರಾಫಿಕ್ ನಿಯಂತ್ರಣದಲ್ಲಿಡಲು ಪೊಲೀಸ್ ಇಲಾಖೆಯ ಟ್ರಾಫಿಕ್ ಪೊಲೀಸ್ ವಿಭಾಗ ಹಲವು ನಿಯಮಗಳನ್ನು ರೂಪಿಸಿ, ಪಾಲಿಸದಿದ್ದರೆ ಚಲನ್ ಕೂಡ ನೀಡುತ್ತಿದೆ. ಸದ್ಯ ಜನಸಾಮಾನ್ಯರು ಸಂಚಾರಿ ನಿಯಮ ಪಾಲಿಸಬೇಕಾದ ಅನಿವಾರ್ಯತೆ ಅನಿವಾರ್ಯತೆ ಇದೆ, ಅದೇ ಸಮಯದಲ್ಲಿ, ಪೊಲೀಸ್ ಇಲಾಖೆಯವರೇ ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.

ಮತ್ತಷ್ಟು ಓದಿ: Video Viral: ಪುಟ್ಟ ಸಹಾಯದ ಮೂಲಕ ಟ್ರಾಫಿಕ್ ಪೊಲೀಸರ ಮುಖದಲ್ಲಿ ನಗು ಮೂಡಿಸಿದ ವ್ಯಕ್ತಿ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ತಮ್ಮ ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ, ಅದರ ನಂತರ ಈ ಚಿತ್ರವು ಹೆಚ್ಚು ವೈರಲ್ ಆಗುತ್ತಿದೆ. ಚಿತ್ರವನ್ನು ಮಹಾರಾಷ್ಟ್ರದ ಬಗ್ಗೆ ಹೇಳಲಾಗುತ್ತಿದೆ. ಇದರಲ್ಲಿ ಮುಂಬೈ ಪೊಲೀಸ್‌ನ ಮಹಿಳಾ ಪೊಲೀಸ್ ಪೇದೆಯೊಬ್ಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.

ಬಳಕೆದಾರರು ಮುಂಬೈ ಪೊಲೀಸರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಮುಂಬೈ ಪೊಲೀಸ್ @MumbaiPolice ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದು, @DrRudrayadav01 ನಾವು ಈ ವಿಚಾರವನ್ನು ಟ್ರಾಫಿಕ್ ಪೊಲೀಸರಿಗೆ ವರ್ಗಾಯಿಸುತ್ತೇವೆ ಎಂದಷ್ಟೇ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ