Supreme Court; ಆರ್‌ಎಸ್‌ಎಸ್ ಮೆರವಣಿಗೆ ವಿರುದ್ಧ ಸ್ಟಾಲಿನ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ
ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ (RSS) ಮೆರವಣಿಗೆ ನಡೆಸಲು ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸ್ಟಾಲಿನ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ದೆಹಲಿ: ತಮಿಳುನಾಡಿನಲ್ಲಿ (Tamil Nadu) ಆರ್‌ಎಸ್‌ಎಸ್ (RSS) ಮೆರವಣಿಗೆ ನಡೆಸಲು ಅವಕಾಶ ನೀಡಿದ ಮದ್ರಾಸ್ ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಸ್ಟಾಲಿನ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಏ.11) ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ವಿ ರಾಮಸುಬ್ರಹ್ಮಣ್ಯಂ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಪೀಠ ಈ ತೀರ್ಪು ಪ್ರಕಟಿಸಿದೆ. ಫೆಬ್ರವರಿ 10ರಂದು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು, ಪ್ರಜಾಪ್ರಭುತ್ವದಲ್ಲಿ ಮೆರವಣಿಗಳಿಗೆ ಅವಕಾಶ ಇದೆ. ಈಗಾಗಲೇ ನಿಗದಿಪಡಿಸಿದ ದಿನಾಂಕದಂದೇ ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ತಾನು ಆಯ್ಕೆ ಮಾಡಿಕೊಂಡ ಮಾರ್ಗದಲ್ಲೇ ಮೆರವಣಿಗೆಯನ್ನು ಮಾಡಲು ಅನುಮತಿ ನೀಡಿತು. ಎರಡೂ ಕಡೆಯ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠವು ನಾವು ಈ ಬಗ್ಗೆ ಚರ್ಚಿಸಿ ಆದೇಶಗಳನ್ನು ನೀಡುತ್ತೇವೆ ಎಂದು ಹೇಳಿತ್ತು. ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಶಾಂತಿಯುತವಾದ ಪ್ರದೇಶದಲ್ಲಿ ಮೆರವಣಿಗೆ ಮಾಡಲು ನಮ್ಮಿಂದ ಯಾವುದೇ ವಿರೋಧ ಇಲ್ಲ. ಆದರೆ PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಬಾಂಬ್ ಸ್ಫೋಟಗಳಿಂದ ಪ್ರಭಾವಿತವಾಗಿರುವ ಕೆಲವು ನಿರ್ಬಂಧ ಇರುವ ಪ್ರದೇಶಗಳಲ್ಲಿ ಮೆರವಣಿಗೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮೆರವಣಿಗೆಯನ್ನು ನಡೆಸಲು ಎಲ್ಲರಿಗೂ ಹಕ್ಕಿಲ್ಲ ಮತ್ತು ಇದು ಸಂವಿಧಾನದ ಭಾಗ III ರಲ್ಲಿ ವಿವಿಧ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ, ಎಲ್ಲಿ ಬೇಕಾದರೂ ಮೆರವಣಿಗೆ ನಡೆಸಬಹುದು ಮತ್ತು ಸ್ವಲ್ಪ ಸಮತೋಲನ ಬೇಕು ಎಂಬ ನಿರ್ದೇಶನ ಹೇಗೆ ಬರುತ್ತದೆ ಎಂದು ರೋಹಟಗಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಮೆರವಣಿಗೆಗಳು ಸಾರ್ವಜನಿಕವಾಗಿ ಸೇರುವ ಉದ್ದೇಶವಾಗಿದೆ. ಇದು ಸಂಘಟನೆಗೆ ಮಾತ್ರವಲ್ಲ ಸಾವರ್ಜನಿಕವಾಗಿ ನಡೆಸುತ್ತಿರುವುದು ಹಾಗೂ ಶಾಂತಿಯುತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರವು ಎತ್ತಿ ಹಿಡಿದಿರುವ ಹಿಂಸಾಚಾರದ ಘಟನೆಗಳು ಪಿಎಫ್‌ಐ ನಿಷೇಧಕ್ಕೂ ಮುನ್ನವೇ ಈ ಮೆರವಣಿಗೆ ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಸಮಂಜಸವಾದ ನಿರ್ಬಂಧ ಮತ್ತು ಸಾರ್ವಜನಿಕ ಸುವ್ಯವಸ್ಥೆ ಯಾವುದು ಎಂಬ ಪ್ರಶ್ನೆಯೇ ಈ ಸಮಸ್ಯೆಯ ತಿರುಳಾಗಿದೆ ಎಂದರು. ನಾವು ಒಂದು ದೇಶವಾಗಿ 19ನೇ ವಿಧಿಗೆ ಸ್ವಲ್ಪ ಪ್ರಾಮುಖ್ಯತೆಯನ್ನು ನೀಡುತ್ತೇವೆ, ಏಕೆಂದರೆ ಇದು ಮೆರವಣಿಗೆ ನಡೆಸಿದವರು ಕಲ್ಪಿಸಿಕೊಂಡ ಮತ್ತು ಕಲ್ಪಿಸಿದ ದೇಶವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಮಂಜಸವಲ್ಲದ ನಿರ್ಬಂಧಗಳನ್ನು ಮಾಡಿದೆ, ಒಂದು ಸರ್ಕಾರ ಈ ಮಟ್ಟಕ್ಕೆ ಇಳಿಯುವುದು ಸರಿಯೇ, ಎಂದು ಗುರುಸ್ವಾಮಿ ವಾದ ಮಂಡಿಸಿ ವರದಿಯ ಮೂಲಕ ತಿಳಿಸಿರುವಂತೆ ರಾಜ್ಯ ಸರ್ಕಾರವು ಆರ್‌ಎಸ್‌ಎಸ್ ಮೆರವಣಿಗೆಗಳನ್ನು ಸುತ್ತುವರಿದ ಮೈದಾನದಲ್ಲಿ ಮಾತ್ರ ಮಾಡಬೇಕು ಎಂದು ಹೇಳಿದೆ.
ಇದನ್ನೂ ಓದಿ: Alappuzha Murder ಕೇರಳದ ಆಲಪ್ಪುಳದಲ್ಲಿ ಎಸ್‌ಡಿಪಿಐ ಮುಖಂಡನ ಹತ್ಯೆ; ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರ ಬಂಧನ
ಹೈಕೋರ್ಟಿನ ವಿಭಾಗೀಯ ಪೀಠವು ನವೆಂಬರ್ 4, 2022 ರಂದು ಹೊರಡಿಸಿದ ಏಕ ಪೀಠದ ಆದೇಶವನ್ನು ರದ್ದುಗೊಳಿಸಿತು, ಉದ್ದೇಶಿತ ಮಾರ್ಗದಲ್ಲಿ ಮೆರವಣಿಗೆಗೆ ಷರತ್ತುಗಳನ್ನು ವಿಧಿಸಿ ಆರ್‌ಎಸ್‌ಎಸ್ ಮೆರವಣಿಗೆಯನ್ನು ಒಳಾಂಗಣ ಅಥವಾ ಸುತ್ತುವರಿದ ಜಾಗದಲ್ಲಿ ನಡೆಸುವಂತೆ ಕೇಳಿದೆ. ವಿಭಾಗೀಯ ಪೀಠವು ಸೆಪ್ಟೆಂಬರ್ 22, 2022 ರ ಆದೇಶದ ಪ್ರಕಾರ, ಇದು ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಿ ಆರ್‌ಎಸ್‌ಎಸ್ ಮನವಿಯನ್ನು ಪರಿಗಣಿಸಿ ಅದಕ್ಕೆ ಅನುಮತಿ ನೀಡುವಂತೆ ತಮಿಳುನಾಡು ಪೊಲೀಸರಿಗೆ ನಿರ್ದೇಶಿಸಿದೆ.
ವಿಭಾಗೀಯ ಪೀಠವು ಆರ್‌ಎಸ್‌ಎಸ್‌ಗೆ ಶಾಂತಿಯುತ ಮೆರವಣಿಗೆ ನಡೆಸಲು ರಾಜ್ಯ ಅಧಿಕಾರಿಗಳಿಗೆ ತಿಳಿಸಲು ನಿರ್ದೇಶಿಸಿದೆ ಮತ್ತು ಇದರ ಜೊತೆಗೆ ಮೂರು ದಿನಾಂಕದಲ್ಲಿ ಒಂದಕ್ಕೆ ಅನುಮತಿ ನೀಡುವಂತೆ ರಾಜ್ಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ವ್ಯವಸ್ಥೆಯ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ವಿಭಾಗೀಯ ಪೀಠವು RSSಗೆ ನಿರ್ದೇಶನ ನೀಡಿತು ಮತ್ತು ಮೆರವಣಿಗೆಯ ಸಮಯದಲ್ಲಿ ಯಾವುದೇ ಪ್ರಚೋದನೆಯುತ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಮತ್ತು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ, ಮೆರವಣಿಗೆ ಮತ್ತು ಸಭೆಯನ್ನು ಮಾಡುವಾಗ ಸಂಚಾರ ವ್ಯವಸ್ಥೆ ಬಗ್ಗೆಯು ಗಮನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
Published On - 11:40 am, Tue, 11 April 23