ಪಾಕಿಸ್ತಾನಿ ಉಗ್ರ ಕಸಬ್​ನನ್ನು ಜೀವಂತವಾಗಿ ಸೆರೆಹಿಡಿದಿದ್ದ ಪೊಲೀಸರಿಗೆ ಪ್ರಮೋಷನ್

| Updated By: ಸುಷ್ಮಾ ಚಕ್ರೆ

Updated on: Mar 30, 2022 | 8:35 PM

2008ರ ನವೆಂಬರ್ 26ರಂದು ಮುಂಬೈ ಮೇಲಿನ ದಾಳಿಯಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪಾಕಿಸ್ತಾನಿ ಉಗ್ರ ಕಸಬ್​ನನ್ನು ಜೀವಂತವಾಗಿ ಸೆರೆಹಿಡಿದಿದ್ದ ಪೊಲೀಸರಿಗೆ ಪ್ರಮೋಷನ್
ಕಸಬ್
Follow us on

ಮುಂಬೈ: 26/11 ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದ ವೀರ ಪೊಲೀಸ್ ಸಿಬ್ಬಂದಿಗೆ 2008ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗಾಗಲೇ ಈ ಪೊಲೀಸರು ಪದಕಗಳು, ಪ್ರಶಸ್ತಿಗಳು ಮತ್ತು ನಗದು ಬಹುಮಾನಗಳನ್ನು ಪಡೆದಿದ್ದರು. ಆದರೆ ಇದಕ್ಕೂ ಮೊದಲು ಅವರಿಗೆ ಪ್ರಮೋಷನ್ ನೀಡಿರಲಿಲ್ಲ. ಆದ್ದರಿಂದ 2022ರ ಮಾರ್ಚ್ 22ರಂದು ಸರ್ಕಾರದ ಆದೇಶದ ಪ್ರಕಾರ ಅವರಿಗೆ ಬಡ್ತಿ ನೀಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕಸಬ್​ನನ್ನು ಜೀವಂತವಾಗಿ ಸೆರೆಹಿಡಿದಿದ್ದ ಪೊಲೀಸರಿಗೆ ಒಂದು-ಹಂತದ ಬಡ್ತಿ ನೀಡಲು ನಿರ್ಧರಿಸಲಾಗಿದೆ. ಒಂದು ಹಂತದ ಬಡ್ತಿ ಎಂದರೆ ಈ ಅಧಿಕಾರಿಗಳು 2008ರಿಂದ ಅನ್ವಯವಾಗುವಂತೆ ಮುಂದಿನ ಉನ್ನತ ಶ್ರೇಣಿಗಾಗಿ ಬಾಕಿ ಇರುವ ವೇತನಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯುತ್ತಾರೆ.

ಕಸಬ್‌ನನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಒಬ್ಬ ಅಧಿಕಾರಿಯ ಪ್ರಕಾರ, ಕಸಬ್​ನನ್ನು ಹಿಡಿದ ಪೊಲೀಸರಿಗೆ 2 ಲಕ್ಷದಿಂದ 8 ಲಕ್ಷದವರೆಗೆ ಹಣ ನೀಡಲಾಗುತ್ತದೆ. 2008ರ ನವೆಂಬರ್ 26ರಂದು ಮುಂಬೈ ಮೇಲಿನ ದಾಳಿಯಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

26/11ರಂದು ಮುಂಬೈ ಮೇಲೆ ದಾಳಿ ಮಾಡಿದ 10 ಪಾಕಿಸ್ತಾನಿ ಭಯೋತ್ಪಾದಕರ ಪೈಕಿ ಕಸಬ್ ಮಾತ್ರ ಗಿರ್ಗಾಮ್ ಚೌಪಾಟಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಈ ಕಾರ್ಯಾಚರಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ತುಕಾರಾಂ ಓಂಬಾಳೆ ಮೃತಪಟ್ಟಿದ್ದರು. ಕಾನ್ಸ್‌ಟೇಬಲ್‌ಗಳಿಂದ ಹಿಡಿದು ಇನ್ಸ್‌ಪೆಕ್ಟರ್‌ಗಳವರೆಗೆ ಒಟ್ಟು 15 ಪೊಲೀಸರು ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದ ತಂಡದಲ್ಲಿ ಭಾಗವಾಗಿದ್ದರು. ಅವರಲ್ಲಿ ಎಂಟು ಮಂದಿ ನಿವೃತ್ತರಾಗಿದ್ದಾರೆ.

ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಕಸಬ್​ನನ್ನು 2012ರ ನವೆಂಬರ್ 21ರಂದು ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.

ಇದನ್ನೂ ಓದಿ: 26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ

Anti Terrorism Day 2021: ಭಾರತವನ್ನು ನಡುಗಿಸಿದ 3 ಭಯೋತ್ಪಾದಕ ದಾಳಿಗಳು ಯಾವುವು?

Published On - 8:35 pm, Wed, 30 March 22