ಮುಂಬೈ: ಇಬ್ಬರು ಉದ್ಯಮಿಗಳ ಹತ್ಯೆ: ಸುಪಾರಿ ಕೊಟ್ಟವನೂ ಕೊಲೆಯಾಗಿದ್ದು ಹೇಗೆ?
ಮುಂಬೈನಲ್ಲಿ ನಡೆದಿರುವ ಇಬ್ಬರು ಉದ್ಯಮಿಗಳ ಹತ್ಯೆಗೆ ಟ್ವಿಸ್ಟ್ ಸಿಕ್ಕಿದೆ. ಒಬ್ಬ ಉದ್ಯಮಿ ಮತ್ತೊಬ್ಬ ಉದ್ಯಮಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ, ಆದರೆ ಸುಪಾರಿ ಕೊಟ್ಟಿದ್ದ ಬಿಲ್ಡರ್ ಹಂತಕನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದ ಮೊತ್ತದ ಹಣವನ್ನು ಕೊಡಲು ನಿರಾಕರಿಸಿದ ಕಾರಣ ಮತ್ತೊಬ್ಬ ಉದ್ಯಮಿಯನ್ನು ಹಂತಕ ಹತ್ಯೆ ಮಾಡಿದ್ದಾನೆ.
ಮುಂಬೈನಲ್ಲಿ ಇಬ್ಬರು ಉದ್ಯಮಿಗಳ ಹತ್ಯೆ ನಡೆದಿದೆ. ಆಗಸ್ಟ್ 21ರಂದು ಮುಂಬೈನ ಇಬ್ಬರು ಬಿಲ್ಡರ್ಗಳು ನಾಪತ್ತೆಯಾಗಿದ್ದರು. ಇದೀಗ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಓರ್ವ ಬಿಲ್ಡರ್ ಸಾವನ್ನಪ್ಪಿದ್ದು ಸಹಜ ಆದರೆ ಅವರ ಕೊಲೆಗೆ ಸುಪಾರಿ ಕೊಟ್ಟವರೂ ಸತ್ತಿದ್ಹೇಗೆ ಎನ್ನುವ ವಿಚಾರ ಇಲ್ಲಿದೆ.
ಒಬ್ಬ ಉದ್ಯಮಿ ಮತ್ತೊಬ್ಬ ಉದ್ಯಮಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ, ಆದರೆ ಸುಪಾರಿ ಕೊಟ್ಟಿದ್ದ ಬಿಲ್ಡರ್ ಹಂತಕನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದ ಮೊತ್ತದ ಹಣವನ್ನು ಕೊಡಲು ನಿರಾಕರಿಸಿದ ಕಾರಣ ಮತ್ತೊಬ್ಬ ಉದ್ಯಮಿಯನ್ನು ಹಂತಕ ಹತ್ಯೆ ಮಾಡಿದ್ದಾನೆ.
ಸುಮಿತ್ ಜೈನ್ ಹಾಗೂ ಅಮೀರ್ ಖಂಜಾದಾ ನಡುವೆ ಜಮೀನು ವಿಚಾರದಲ್ಲಿ ವೈಷಮ್ಯ ಉಂಟಾಗಿತ್ತು, ಅವರಿಬ್ಬರೂ ಆಗಸ್ಟ್ 21ರಿಂದ ನಾಪತ್ತೆಯಾಗಿದ್ದರು. ಮರುದಿನ ಖಲಾಪುರ್ನ ಮುಂಬೈ-ಪುಣೆ ಎಕ್ಸ್ಪ್ರೆಸ್ವೇನಲ್ಲಿ ಅಮೀರ್ ಖಾಂಜಾದಾ ಮೃತದೇಹ ಅವರ ಕಾರಿನಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿ ಗುಂಡೇಟಿನ ಗುರುತುಗಳಿದ್ದವು. ಎರಡು ಗುಂಡುಗಳು, ಚಪ್ಪಲಿ ಹಾಗೂ ಕ್ಯಾಪ್ ಪತ್ತೆಯಾಗಿತ್ತು.
ಮತ್ತಷ್ಟು ಓದಿ: ತುಮಕೂರು: ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ
ಸುಮಿತ್ ಜೈನ್ ದೇಹ ಮರುದಿನ ಪೆನ್ ಖೋಪೋಲಿ ಹೆದ್ದಾರಿಯ ಕರ್ನಾಲಾ ಪಕ್ಷಿಧಾಮದ ಬಳಿ ಪತ್ತೆಯಾಗಿತ್ತು. ಸುಮಿತ್ ಜೈನ್ ಮೊಣಕಾಲಿನ ಮೇಲೆ ಗುಂಡು ತಗುಲಿತ್ತು ಇನ್ನೊಂದು ಕಾಲಿಗೆ ಇರಿಯಲಾಗಿತ್ತು. ಸುಮಿತ್ ಜೈನ್ ಹಾಗೂ ನಖಾಡೆ ಅಮೀರ್ ಖಾಂಜಾದಾರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಮೂರೂವರೆ ಕೋಟಿ ಮೌಲ್ಯದ ನಿವೇಶನ ಮಾರಾಟ ಪ್ರಕರಣದಲ್ಲಿ ಜೈನ್ ಮತ್ತು ಖಂಜಾದಾ ನಡುವೆ ಜಗಳ ನಡೆದಿತ್ತು.
ಈ ಜಮೀನು ಮಾರಾಟದಿಂದ ನನಗೆ 60 ಲಕ್ಷ ಕಮಿಷನ್ ಬಂದಿದೆ, ಅದರಲ್ಲಿ ನನಗೆ ಪಾಲು ಬೇಕು ಎಂದು ಖಾನಜಾದ ಒತ್ತಾಯಿಸಿದ್ದ. ಅಮೀರ್ನನ್ನು ಕೊಲೆ ಮಾಡಿದರೆ 50 ಲಕ್ಷ ರೂ ಕೊಡುತ್ತೇನೆ ಎಂದು ಅಡ್ವಾನ್ಸ್ ಆಗಿ 1.50 ಲಕ್ಷ ರೂ. ಕೊಟ್ಟಿದ್ದರು. ಕೆಲಸ ಪೂರ್ಣವಾದ ಮೇಲೆ ಮೂರೂವರೆ ಲಕ್ಷ ರೂ. ಕೊಟ್ಟಿದ್ದರು. ಅದಕ್ಕ ಕೋಪಗೊಂಡಿದ್ದ, 50 ಲಕ್ಷ ಕೊಡಲು ಸಾಧ್ಯವಿಲ್ಲ 25 ಲಕ್ಷ ಕೊಡುವುದಾಗಿ ಹೇಳಿದ್ದ.
ಆದರೆ ಸುಮೀತ್ ಜೈನ್ ಅವರು ಯೋಜಿಸಿದಂತೆ ಹಂತಕರಿಗೆ 50 ಲಕ್ಷ ನೀಡಲು ಸಾಧ್ಯವಿಲ್ಲ, ಬದಲಿಗೆ 25 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಹಂತಕರ ಸುಮಿತ್ ಜೈನ್ ಅವರ ಇನ್ನೊಂದು ಕಾಲಿಗೆ ಗುಂಡು ಹಾರಿಸಿ ಪಕ್ಷಿಧಾಮದ ಬಳಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಹೆಚ್ಚುವರಿ ರಕ್ತಸ್ರಾವದಿಂದ ಸುಮಿತ್ ಜೈನ್ ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ ಐವರು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ವಿಠ್ಠಲ್ ನಖಾಡೆ (43), ಜೈಸಿಂಗ್ ಅಲಿಯಾಸ್ ರಾಜ ಮುದಲಿಯಾರ್ (38), ಆನಂದ್ ಅಲಿಯಾಸ್ ಅಂದ್ರಿ ಕುಂಜ್ (39), ವೀರೇಂದ್ರ ಅಲಿಯಾಸ್ ಗೋರಿಯಾ ಕದಮ್ (24) ಮತ್ತು ಅಂಕುಶ್ ಅಲಿಯಾಸ್ ಅಂಕಿ ಸೀತಾಪುರೆ (35) ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ