ತುಮಕೂರು: ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ
ಯುವಕನ ಹಿಂಸೆಗೆ ಬೇಸತ್ತ ಮಂಗಳಮುಖಿ ಆತನ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಮಂಗಳಮುಖಿಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಯುವಕನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ತುಮಕೂರು, ಆಗಸ್ಟ್.29: ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದು ಯುವಕ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ. ಹನೀಷಾ ಎಂಬ 21 ವರ್ಷದ ಮಂಗಳಮುಖಿಗೆ ಮಂಡ್ಯದ ಆದಿಲ್ ಎಂಬ 23 ವರ್ಷದ ಯುವಕ ಚಾಕುವಿನಿಂದ ಇರಿದಿದ್ದಾನೆ.
ಹನೀಷಾ ಹಾಗೂ ಆದಿಲ್ ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಹನೀಷಾ ಆಗಾಗ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಳು. ಇದನ್ನು ಸಹಿಸದ ಆದಿಲ್, ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತು ಪ್ರೇಮ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಆದಿಲ್ ಚಾಕುವಿನಿಂದ ಇರಿದಿದ್ದಾನೆ. ಇನ್ನು ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Mysuru Dasara 2024: ದಸರಾ ಆನೆಗಳಿಗೆ ಪೌಷ್ಠಿಕ ಆಹಾರ, ಒಂದು ಬಾರಿಗೆ ಇವು ತಿನ್ನೋದೆಷ್ಟು ಗೊತ್ತಾ?
ಶೀಲ ಶಂಕೆ; ಹೆಂಡತಿಯನ್ನು ಚೇರ್ಗೆ ಕಟ್ಟಿಹಾಕಿ ಕತ್ತು ಕೊಯ್ದ ಗಂಡ
ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ನವ್ಯ ಹಾಘೂ ಚಿಕ್ಕಬಳ್ಳಾಪುರ ಮೂಲದ ಕ್ಯಾಬ್ ಚಾಲಕ ಕಿರಣ್ 3 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ವಾಸವಾಗಿದ್ರು. ವೃತ್ತಿಯಲ್ಲಿ ಈಕೆ ಕೊರಿಯೋಗ್ರಾಫರ್ ಆಗಿದ್ದು, ವಿವಿಧ ಖಾಸಗಿ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡ್ತಿದ್ದಳು. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದ್ರೆ ಪತಿ ಕಿರಣ್ಗೆ ಆಕೆ ಮೇಲೆ ಇತ್ತೀಚೆಗೆ ಸಂಶಯ ಶುರುವಾಗಿತ್ತು. ಇದೇ ಸಂಶಯದ ಭೂತ ಆಕೆಯ ಹತ್ಯೆಗೆ ಕಾರಣವಾಗಿದೆ.
ವಿಚಿತ್ರ ಅಂದ್ರೆ ನವ್ಯಳನ್ನು ಪತಿ ಕಿರಣ್ ಕತ್ತು ಕೊಯ್ದು ಕೊಲೆ ಮಾಡಿದ್ರು, ನವ್ಯ ಪಕ್ಕದಲ್ಲಿ ಮಲಗಿದ್ದ ಆಕೆಯ ಸ್ನೇಹಿತೆ ಐಶ್ವರ್ಯಗೆ ಎಚ್ಚರವೇ ಇರಲಿಲ್ಲ. ಕಂಠಪೂರ್ತಿ ಬಿಯರ್‌ಸೇವಿಸಿ ಗಾಢ ನಿದ್ದೆಗೆ ಜಾರಿದ್ದಳು, ಕೊಲೆ ಬಳಿಕ ಆರೋಪಿ ಕಿರಣ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಬೆಳಗ್ಗೆ ಪೊಲೀಸರು ಬಂದು ಎಬ್ಬಿಸಿದಾಗಲೇ ಐಶ್ವರ್ಯಗೆ ಕೃತ್ಯ ಗೊತ್ತಾಗಿದ್ಯಂತೆ. ಇನ್ನು ಈ ಘಟನೆಯಿಂದ ನೆರೆಹೊರೆಯ ಮನೆಯವರು ಬೆಚ್ಚಿಬಿದ್ದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ