ಮುಂಬೈ: ಮಹಾರಾಷ್ಟ್ರದ ರಾಯಘಡ (Raigad Landslide) ಜಿಲ್ಲೆಯ ಮೂರು ಕಡೆ ಭಾರೀ ಭೂಕುಸಿತ ಸಂಭವಿಸಿದ್ದು, 36 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ (Maharashtra Rain) ಇನ್ನೂ 30 ಜನರು ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿದ್ದ 15 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮಾಹಿತಿ ಪಡೆದಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಭೂಕುಸಿತದಿಂದ ಸಾವನ್ನಪ್ಪಿರುವ 36 ಜನರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ರಾಯಘಡದ ಭೂಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಈ ಶಕ್ತಿಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಈ ದುರಂತದಲ್ಲಿ ಗಾಯಗೊಂಡಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮಹಾರಾಷ್ಟ್ರದ ಪ್ರವಾಹಪೀಡಿತ ಸ್ಥಳಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಕೇಂದ್ರ ಸರ್ಕಾರ ಕಲ್ಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
PM @narendramodi has announced an ex-gratia of Rs. 2 lakh each from PMNRF for the next of kin of those who lost their lives due to a landslide in Raigad, Maharashtra. Rs. 50,000 would be given to the injured.
— PMO India (@PMOIndia) July 23, 2021
ಮಹಾರಾಷ್ಟ್ರದ ರಾಯಘಡದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿಗಳ ಕಚೇರಿ ಘೋಷಿಸಿದೆ. ಹಾಗೇ, ಭೂಕುಸಿತದಲ್ಲಿ ಗಾಯಗೊಂಡಿರುವವರಿಗೆ 50 ಸಾವಿರ ರೂ. ನೀಡುವುದಾಗಿ ಘೋಷಿಸಲಾಗಿದೆ.
#MaharashtraRains #Tamhini #Bhira #Raigad #MaharashtraFloods #MumbaiRains #Mumbai #Sahyadri#MaharashtraFlood
Yesterday evening at base of Tamhini ghat .. near Bhira ..#Kundalika
⏬ pic.twitter.com/8R4M1JOSnJ— RoarWeather ?? (@RoarWeather) July 23, 2021
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ತಗ್ಗು ಪ್ರದೇಶದ ಮತ್ತು ಸೂಕ್ಷ್ಮ ವಲಯದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಭೂಕುಸಿತ ಮತ್ತು ಭಾರೀ ಪ್ರವಾಹದಿಂದ ನೂರಾರು ಜನರು ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ. ರಾಯಘಡದಿಂದ ಹೆಲಿಕಾಪ್ಟರ್ ಮೂಲಕ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇನ್ನೂ ನಾಲ್ಕೈದು ದಿನಗಳ ಭಾರೀ ಮಳೆಯಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
#WATCH Incessant rains damage roads in Mahad of Raigad district in Maharashtra
A total of 36 people have died in the district due to landslides pic.twitter.com/kebygVcPjt
— ANI (@ANI) July 23, 2021
ಇದನ್ನೂ ಓದಿ: Mumbai Rains: ಮಹಾರಾಷ್ಟ್ರದ ರಾಯಘಡದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿ 36 ಜನ ಸಾವು
(Mumbai Rains Live Updates PM Narendra Modi announced Rs 2 lakh each to kin Family who Died in Raigad landslide)
Published On - 5:25 pm, Fri, 23 July 21