ಸ್ವಲ್ಪ ತಡವಾಗಿದ್ರು ಪ್ರಾಣ ಹೋಗ್ತಿತ್ತು: ಮುಂಬೈನ ಗಗನಚುಂಬಿ ಕಟ್ಟಡದ 22ನೇ ಮಹಡಿಯ ಪ್ಯಾರಪೆಟ್ನಲ್ಲಿ ಕುಳಿತಿದ್ದ ವೃದ್ಧರ ರಕ್ಷಣೆ
ಮುಂಬೈನ ಕಾಂದಿವಾಲಿ ಹೈರೈಸ್ನ 22ನೇ ಮಹಡಿಯ ಪ್ಯಾರಪೆಟ್ನಲ್ಲಿ ಕುಳಿತಿದ್ದ 70 ವರ್ಷದ ವೃದ್ಧರನ್ನು ರಕ್ಷಿಸಲಾಗಿದೆ. ವೃದ್ಧರು ಮಾನಸಿಕ ಅಸ್ವಸ್ಥರಾಗಿದ್ದರು ಎಂಬುದು ತಿಳಿದುಬಂದಿದೆ.
ಮುಂಬೈನ ಕಾಂದಿವಾಲಿ ಹೈರೈಸ್ನ 22ನೇ ಮಹಡಿಯ ಪ್ಯಾರಪೆಟ್ನಲ್ಲಿ ಕುಳಿತಿದ್ದ 70 ವರ್ಷದ ವೃದ್ಧರನ್ನು ರಕ್ಷಿಸಲಾಗಿದೆ. ವೃದ್ಧರು ಮಾನಸಿಕ ಅಸ್ವಸ್ಥರಾಗಿದ್ದರು ಎಂಬುದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ, ವ್ಯಕ್ತಿ 32 ಅಂತಸ್ತಿನ ಕಟ್ಟಡದ 22 ನೇ ಮಹಡಿಯಲ್ಲಿ ಸುಮಾರು 4 ಅಡಿಗಳಷ್ಟು ಸುರಕ್ಷತಾ ಗೋಡೆಯ ಮೇಲೆ ಹತ್ತಿ 6 ಅಡಿ ಆಳದ ಪ್ಯಾರಪೆಟ್ ಗೋಡೆಯ ಮೇಲೆ ಇವರು ಇಳಿದಿದ್ದರು.
ಸ್ವಲ್ಪ ತಡವಾಗಿದ್ದರೂ ಅವರ ಪ್ರಾಣಕ್ಕೆ ಅಪಾಯವಿತ್ತು. ವೃದ್ಧರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ಯಾರಪೆಟ್ ಗೋಡೆಯ ಮೇಲೆ ಕುಳಿತಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸುರಕ್ಷತಾ ಸರಂಜಾಮು, ಹಗ್ಗ ಮತ್ತು ವಿವಿಧ ಸಾಧನಗಳನ್ನು ಬಳಸಿ ಪ್ಯಾರಪೆಟ್ ಗೋಡೆಯ ಮೇಲೆ ಇಳಿದು ಅವರನ್ನು ರಕ್ಷಿಸಿದ್ದಾರೆ.
ಮತ್ತಷ್ಟು ಓದಿ: Viral Video: ದೋಸೆ ಹಿಟ್ಟಿನಿಂದ ಬೆಕ್ಕಿನ ಚಿತ್ರ ಬಿಡಿಸಿದ ವಿಡಿಯೋ ವೈರಲ್
ಗಗನಚುಂಬಿ ಕಟ್ಟಡದ 22 ನೇ ಮಹಡಿಯಲ್ಲಿರುವ ಆಶ್ರಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದಾರೆ ಎಂದು ಸಂಜೆ 5:15 ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು ಎಂದು ಅವರು ಹೇಳಿದರು. ಅಲ್ಲಿನ ನಿವಾಸಿಗಳು ಬೆಂಕಿ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಆ ಪ್ರದೇಶದ ಮೂಲಕ ಹಾದುಹೋಗಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ