ಹ್ಯಾಂಡ್​​ರೈಟಿಂಗ್ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿಯ ಕೈ ಸುಟ್ಟ ಶಿಕ್ಷಕಿ

ಟ್ಯೂಷನ್ ಶಿಕ್ಷಕಿಯೊಬ್ಬರು ಮೂರನೇ ತರಗತಿ ವಿದ್ಯಾರ್ಥಿಯ ಕೈ ಸುಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮಲಾಡ್​ ಪ್ರದೇಶದ ಖಾಸಗಿ ಟ್ಯೂಷನ್​ ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ಎಂಟು ವರ್ಷದ ಬಾಲಕನ ಕೈಯನ್ನು ಸುಟ್ಟು ಹಾಕಿರುವ ಆರೋಪದ ಮೇಲೆ ಶಿಕ್ಷಕಿಯನ್ನು ಬಂಧಿಸಲಾಗಿದೆ.ಮುಂಬೈನ ಮಲಾಡ್​ ಪ್ರದೇಶದ ಖಾಸಗಿ ಟ್ಯೂಷನ್​ ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದ್ದಾರೆ.

ಹ್ಯಾಂಡ್​​ರೈಟಿಂಗ್ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿಯ ಕೈ ಸುಟ್ಟ ಶಿಕ್ಷಕಿ
ವಿದ್ಯಾರ್ಥಿ
Image Credit source: Republicworld.com

Updated on: Jul 31, 2025 | 10:49 AM

ಮುಂಬೈ, ಜುಲೈ 31: ಮಕ್ಕಳನ್ನು ತಿದ್ದಿ ತೀಡಬೇಕಾದ ಶಿಕ್ಷಕರೇ ಇಷ್ಟು ಕ್ರೂರಿಗಳಾದರೆ ಹೇಗೆ? ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿ ಇರುವುದಿಲ್ಲ, ಹಾಗೆಯೇ ಬರವಣಿಗೆ ಕೂಡ ಭಿನ್ನವಾಗಿರುತ್ತದೆ. ಅವರನ್ನು ತಿದ್ದುವುದಕ್ಕಾಗಿಯೇ ಶಿಕ್ಷಕರು ಇರುವುದು. ಆದರೆ ಹ್ಯಾಂಡ್​​ರೈಟಿಂಗ್ ಚೆನ್ನಾಗಿಲ್ಲವೆಂದು ವಿದ್ಯಾರ್ಥಿ(Student)ಯ ಕೈ ಸುಟ್ಟಿರುವ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಮುಂಬೈನ ಮಲಾಡ್​ ಪ್ರದೇಶದ ಖಾಸಗಿ ಟ್ಯೂಷನ್​ ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ಎಂಟು ವರ್ಷದ ಬಾಲಕನ ಕೈಯನ್ನು ಸುಟ್ಟು ಹಾಕಿರುವ ಆರೋಪದ ಮೇಲೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ರಾಜಶ್ರೀ ರಾಥೋಡ್ ಎಂದು ಗುರುತಿಸಲಾಗಿದ್ದು, ಮೇಣದಬತ್ತಿಯಿಂದ ಬಾಲಕನ ಕೈ ಸುಟ್ಟಿದ್ದಾಳೆ. ಇದರಿಂದ ಅಂಗೈ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಕೈತುಂಬಾ ಗುಳ್ಳೆಗಳು ಬಂದಿವೆ.
ಪೊಲೀಸ್ ಮೂಲಗಳ ಪ್ರಕಾರ, ಗೋರೆಗಾಂವ್​ನ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ಮಲಾಡ್​ನ ಜೆಪಿ ಡೆಕ್ಸ್​ ಕಟ್ಟಡದಲ್ಲಿರುವ ಶಿಕ್ಷಕರ ಮನೆಗೆ ಟ್ಯೂಷನ್​​ಗೆಂದು ಹೋಗುತ್ತಿದ್ದ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಘಟನೆ ನಡೆದ ದಿನ, ಅವನ ಸಹೋದರಿ ಅವನನ್ನು ತರಗತಿಗೆ ಬಿಟ್ಟಿದ್ದಳು. ನಂತರ ಸಂಜೆ, ಶಿಕ್ಷಕಿ ಆತನ ಸಹೋದರಿಗೆ ಕರೆ ಮಾಡಿ ಕರೆದುಕೊಂಡು ಹೋಗಲು ಹೇಳಿದ್ದ. ಆಕೆ ಬಂದಾಗ, ತನ್ನ ತಮ್ಮ ಕಣ್ಣೀರು ಹಾಕುವುದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ, ಬಾಲಕನ ಬಲಗೈ ಸುಟ್ಟಿರುವುದನ್ನು ಗಮನಿಸಿದ್ದಾಳೆ.

ಶಿಕ್ಷಕಿಯನ್ನು ಪ್ರಶ್ನಿಸಿದಾಗ, ರಾಜಶ್ರೀ ಏನೂ ಆಗಿಲ್ಲ ಎಂದಿದ್ದಾರೆ.ಮನೆಗೆ ಹಿಂದಿರುಗಿದ ನಂತರ ಬಾಲಕ ನಡೆದಿರುವ ವಿಚಾರವನ್ನು ಹೇಳಿಕೊಂಡಿದ್ದಾನೆ. ಆಘಾತ ಮತ್ತು ದುಃಖದಿಂದ ಬಾಲಕನ ತಂದೆ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಕುರಾರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದರು.

ಅಪ್ರಾಪ್ತ ವಯಸ್ಕನ ಮೇಲೆ ದೈಹಿಕ ಮತ್ತು ಮಾನಸಿಕ ಕ್ರೌರ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಪ್ರಾಥಮಿಕ ವಿಚಾರಣೆಯ ನಂತರ, ಆರೋಪಿಯನ್ನು ಬಂಧಿಸಲಾಗಿದೆ.

ಮುಂಬೈ ಪೊಲೀಸರು ಬಂಧನವನ್ನು ದೃಢಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಪ್ರಕರಣವು ನಗರದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೋಷಕರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಮತ್ತು ಖಾಸಗಿ ಬೋಧಕರು ಮತ್ತು ಬೋಧನಾ ಕೇಂದ್ರಗಳ ಉತ್ತಮ ನಿಯಂತ್ರಣಕ್ಕಾಗಿ ಒತ್ತಾಯಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:48 am, Thu, 31 July 25