ತಾನು ಕಳ್ಳತನ ಮಾಡಿರುವ ಮನೆ ಪ್ರಸಿದ್ಧ ಕವಿಯೊಬ್ಬರಿಗೆ ಸೇರಿದ್ದು ಎಂಬುದನ್ನು ಅರಿತ ಕಳ್ಳನೊಬ್ಬ ಕ್ಷಮೆ ಕೋರಿ ಕದ್ದಿರುವ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
2010 ರಲ್ಲಿ 84 ನೇ ವಯಸ್ಸಿನಲ್ಲಿ ನಿಧನರಾದ ಖ್ಯಾತ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ನಾರಾಯಣ ಸುರ್ವೆ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.
ಮಗಳು ಸುಜಾತಾ ಮತ್ತು ಅವರ ಪತಿ ಗಣೇಶ್ ಘರೆ ಅವರು ಈಗ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನೇರಲ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ ಆದರೆ ವಿರಾರ್‌ನಲ್ಲಿರುವ ತಮ್ಮ ಮಗನನ್ನು ಭೇಟಿ ಮಾಡಲು ಸುಮಾರು 10 ದಿನಗಳ ಕಾಲ ಹೊರಗೆ ಹೋಗಿದ್ದರು.
ಇದೇ ವೇಳೆ ಮನೆಗೆ ನುಗ್ಗಿದ ಕಳ್ಳ ಎಲ್ ಇಡಿ ಟಿವಿ ಸೆಟ್ ಸೇರಿದಂತೆ ಕೆಲ ವಸ್ತುಗಳನ್ನು ಕದ್ದೊಯ್ದಿದ್ದಾನೆ. ಮರುದಿನ ಇನ್ನೂ ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ಹಿಂತಿರುಗಿದಾಗ, ಆತ ಕೋಣೆಯಲ್ಲಿ ಸುರ್ವೆ ಅವರ ಫೋಟೋ ಮತ್ತು ಸ್ಮರಣಿಕೆಗಳನ್ನು ಗಮನಿಸಿದ್ದಾನೆ.
ಮತ್ತಷ್ಟು ಓದಿ: ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು
ಬಳಿಕ ಆತ ಪಶ್ಚಾತಾಪ ಪಟ್ಟಿದ್ದಾನೆ, ತಾನು ತೆಗೆದುಕೊಂಡು ಹೋಗಿದ್ದ ಎಲ್ಲಾ ವಸ್ತುಗಳನ್ನು ವಾಪಸ್ ತಂದು ಇರಿಸಿದ್ದಷ್ಟೇ ಅಲ್ಲದೆ ಕ್ಷಮಾಪಣಾ ಪತ್ರವನ್ನು ಕೂಡ ಅಲ್ಲಿರಿಸಿ ಹೋಗಿದ್ದಾನೆ.
ಸುಜಾತಾ ಮತ್ತು ಅವರ ಪತಿ ಭಾನುವಾರ ವಿರಾರ್‌ನಿಂದ ಹಿಂದಿರುಗಿದಾಗ ಚೀಟಿ ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಟಿವಿ ಮೇಲೆ ಕಂಡುಬಂದ ಬೆರಳಚ್ಚು ಮತ್ತು ಇತರ ಆಧಾರದ ಮೇಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸರ್ವೆ ಅವರು 16 ಆಗಸ್ಟ್ 2010 ರಂದು ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನಲ್ಲಿ ಜನಿಸಿದ ಸರ್ವೆಯ ಕವಿತೆಗಳು ತಳಮಟ್ಟದ ಕಾರ್ಮಿಕ ವರ್ಗದ ಹೋರಾಟಗಳಿಗೆ ಧ್ವನಿಯಾಗಿದ್ದರು. ಮುಂಬೈನ ಬೀದಿಗಳಲ್ಲಿ ಅನಾಥವಾಗಿ ಬೆಳೆದ, ಕವಿಯಾಗುವ ಮೊದಲು, ಸರ್ವೆ ಮನೆ ಮತ್ತು ಹೋಟೆಲ್‌ಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಹಾಲು ಮಾರಾಟವನ್ನೂ ಮಾಡುತ್ತಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Wed, 17 July 24