ಮುಂಬೈ: ರಾಜ್ ಠಾಕ್ರೆ ಅವರ ಪಕ್ಷವಾದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಮುಖಂಡರೊಬ್ಬರು ಮುಂಬೈನ ಕಾಮಾಟಿಪುರದ ಪ್ರಕಾಶ್ ದೇವಿ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿ ತಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗಸ್ಟ್ 28, 2022 ರಂದು ಮಹಿಳೆಯ ಔಷಧಿ ಅಂಗಡಿಯ ಮುಂದೆ ಪ್ರಚಾರದ ಬ್ಯಾನರ್‌ಗಳಿಗೆ ಒಪ್ಪಿಗೆಯಿಲ್ಲದೆ ಇರಿಸಿದ್ದಕ್ಕಾಗಿಈ ಘಟನೆ ನಡೆದಿದೆ. ಹಲ್ಲೆ ನಡೆಸಿರುವ ವ್ಯಕ್ತಿ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ಎಂದು ಹೇಳಲಾಗುತ್ತದೆ. ವಿಡಿಯೊದಲ್ಲಿ, ಕೆಲವರು ವಿನೋದ್ ಅರ್ಗೈಲ್ ಎಂಬ ವ್ಯಕ್ತಿಯನ್ನು ಹಿಡಿದೆಳೆಯುತ್ತಿದ್ದರೂ ಆತ ಮಹಿಳೆ ಮೇಲೆ ಹಲ್ಲೆ ನಡೆಸಿ ತಳ್ಳುತ್ತಿರುವುದು ಕಾಣುತ್ತದೆ. ಹೀಗೆ ತಳ್ಳಿದಾಗ ಆಕೆ ಬೀದಿಯಲ್ಲಿ ಬೀಳುತ್ತಾಳೆ. ಆದರೆ ದಾರಿಹೋಕರು ಯಾರೂ ಇದರ ಮಧ್ಯಪ್ರವೇಶ ಮಾಡುತ್ತಿಲ್ಲ
#WATCH | A video went viral showing a man hitting & pushing a woman in Kamathipura, Mumbai on Aug 28, allegedly over installing a bamboo stick (for an ad) in front of woman’s shop without consent. A non-cognizable offence lodged at Nagpada PS:Mumbai Police
(Note:Strong language) pic.twitter.com/9PinhzGuyj
— ANI (@ANI) September 1, 2022
ಆರ್ಗೈಲ್ ನಿಂದನೀಯ ಭಾಷೆಯನ್ನು ಬಳಸುವುದನ್ನು ಸಹ ಕೇಳಲಾಗುತ್ತದೆ. ಆಗಸ್ಟ್ 31, 2022 ರಂದು ಆರ್ಗೈಲ್ ವಿರುದ್ಧ ನಾನ್ ಕಾಗ್ನಿಸಬಲ್ ಅಪರಾಧ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿರುವ ಪ್ರಕಾಶ್ ದೇವಿ ಎಂಬ ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಂಎನ್ಎಸ್ ನಾಯಕ ಕೇಶವ್ ಮುಲೆ, “ವಿನೋದ್ ಅರ್ಗೈಲ್ ಅವರನ್ನು ಚಿತ್ರಿಸುವ ವೈರಲ್ ವಿಡಿಯೊ ಪೂರ್ಣಗೊಂಡಿಲ್ಲ. ನಾವು ಅದನ್ನು ಬೆಂಬಲಿಸುವುದಿಲ್ಲ. ಎಂಎನ್ಎಸ್ ಮಹಿಳೆಯರನ್ನು ಗೌರವಿಸುತ್ತದೆ .ಆದರೆ ಆ ಮಹಿಳೆ ನಮ್ಮ ಪಕ್ಷದ ಬ್ಯಾನರ್ ಅನ್ನು ಕಿತ್ತೆಸೆದು ನಮ್ಮ ಪಕ್ಷದ ಕಾರ್ಯಕರ್ತರನ್ನು ನಿಂದಿಸಿದ್ದಾರೆ, ಅದನ್ನು ಎಡಿಟ್ ಮಾಡಲಾಗಿಗೆ. ವಿನೋದ್ ಅರ್ಗೈಲ್ ಅವರಿಗೂ ಬೇಗನೆ ಸಿಟ್ಟು ಬರುತ್ತದೆ ನಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದಿದ್ದಾರೆ.
Published On - 9:27 pm, Thu, 1 September 22