PM Modi in Kochi ಬಿಜೆಪಿ ಸರ್ಕಾರವಿರುವಲ್ಲಿ ವೇಗದ ಅಭಿವೃದ್ದಿ, ಕೇರಳಕ್ಕೂ ಬೇಕು ಡಬಲ್ ಎಂಜಿನ್ ಸರ್ಕಾರ: ಮೋದಿ

ಎರಡು ದಿನಗಳ ಕೇರಳ ಪ್ರವಾಸಕ್ಕಾಗಿ ಕೊಚ್ಚಿಗೆ ಆಗಮಿಸಿರುವ ಪ್ರಧಾನಿ, ನೆಡುಂಬಶ್ಶೇರಿ ವಿಮಾನ ನಿಲ್ದಾಣದ ಪರಿಸರದಲ್ಲಿ ಬಿಜೆಪಿಯ ಸಭೆಯನ್ನುದ್ದೇಶಿ ಮಾತನಾಡುತ್ತಿದ್ದರು. ಮಲಯಾಳಂನಲ್ಲಿ ಭಾಷಣ ಆರಂಭಿಸಿದ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

PM Modi in Kochi ಬಿಜೆಪಿ ಸರ್ಕಾರವಿರುವಲ್ಲಿ ವೇಗದ ಅಭಿವೃದ್ದಿ, ಕೇರಳಕ್ಕೂ ಬೇಕು ಡಬಲ್ ಎಂಜಿನ್ ಸರ್ಕಾರ: ಮೋದಿ
ಕೊಚ್ಚಿಯಲ್ಲಿ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 01, 2022 | 6:54 PM

ಕೊಚ್ಚಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ವೇಗವಾಗಿದೆ, ಕೇರಳದಲ್ಲೂ (Kerala) ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಇಲ್ಲಿಯೂ ಡಬಲ್ ಎಂಜಿನ್ ಸರ್ಕಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಎರಡು ದಿನಗಳ ಕೇರಳ ಪ್ರವಾಸಕ್ಕಾಗಿ ಕೊಚ್ಚಿಗೆ ಆಗಮಿಸಿರುವ ಪ್ರಧಾನಿ, ನೆಡುಂಬಶ್ಶೇರಿ ವಿಮಾನ ನಿಲ್ದಾಣದ ಪರಿಸರದಲ್ಲಿ ಬಿಜೆಪಿಯ ಸಭೆಯನ್ನುದ್ದೇಶಿ ಮಾತನಾಡುತ್ತಿದ್ದರು. ಮಲಯಾಳಂನಲ್ಲಿ ಭಾಷಣ ಆರಂಭಿಸಿದ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಓಣಂ ಹಬ್ಬದ  ಸಂದರ್ಭದಲ್ಲಿ ಇಲ್ಲಿ ಬರಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಶುಭ ಹಾರೈಕೆಗಳು. ಕೇರಳ ಒಂದು ಸುಂದರ ದೇಶ. ಕೇರಳವು ಸಾಂಸ್ಕೃತಿಕ ಸೌಂದರ್ಯ ಮತ್ತು ನೈಸರ್ಗಿಕ ಸೌಂದರ್ಯದಿಂದ ಆಶೀರ್ವದಿಸಿದ ನಾಡು. ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಕೇರಳದಲ್ಲಿ ಒಂದು ಲಕ್ಷ ಕೋಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಬಡವರ ಮತ್ತು ದಲಿತರ ಅಭ್ಯುದಯವೇ ಗುರಿ. ಕೇರಳದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯೋಜನೆಯಡಿ ಎರಡು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. ಈಗಾಗಲೇ ಒಂದು ಲಕ್ಷ ಮನೆಗಳು ಪೂರ್ಣಗೊಂಡಿವೆ.

ಬಿಜೆಪಿ ರಾಜ್ಯ ಸರ್ಕಾರ ಇರುವಲ್ಲಿ ಅಭಿವೃದ್ಧಿ ವೇಗವಾಗಿ ಆಗುತ್ತದೆ. ಅಂತಹ ರಾಜ್ಯಗಳಲ್ಲಿ ಡಬಲ್ ಎಂಜಿನ್ಮ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕೇರಳದಲ್ಲೂ ಬಿಜೆಪಿ ಸರಕಾರ ಬಂದರೆ ಅಭಿವೃದ್ಧಿಗೆ ಶಕ್ತಿ ತುಂಬಲಿದೆ. ಕೇರಳದ ಜನರು ಬಿಜೆಪಿಯನ್ನು ಭರವಸೆಯಿಂದ ನೋಡುತ್ತಿದ್ದಾರೆ. ನಾವು ಬದಲಾವಣೆ ತರಬಹುದು ಎಂದು ಭಾವಿಸುತ್ತೇವೆ ಎಂದಿದ್ದಾರೆ ಮೋದಿ.

ಕೇರಳದಲ್ಲಿ ಮೋದಿ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದು ಕೊಚ್ಚಿ ಮೆಟ್ರೋ ಮತ್ತು ದಕ್ಷಿಣ ರೈಲ್ವೆಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ. ಬಿಜೆಪಿಯ ಕಾರ್ಯಕ್ರಮದ ನಂತರ ಸಂಜೆ ನೆಡುಂಬಶ್ಶೇರಿ ಸಿಯಾಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೋದಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಎಸ್‌ಎನ್ ಜಂಕ್ಷನ್‌ನಿಂದ ವಡಕ್ಕೆಕೋಟಾವರೆಗಿನ ಕೊಚ್ಚಿ ಮೆಟ್ರೋದ ಹಂತ (ಹಂತ 1ಎ) ಉದ್ಘಾಟನೆ, ಕಾಕ್ಕನಾಡ್ ಇನ್ಫೋಪಾರ್ಕ್‌ವರೆಗೆ ವಿಸ್ತರಿಸುವ ಎರಡನೇ ಹಂತದ ಮೆಟ್ರೋದ ಶಂಕುಸ್ಥಾಪನೆ, ಕುರುಪಂತರ-ಕೊಟ್ಟಾಯಂ-ಚಿಂಗವನಂ ರೈಲುಮಾರ್ಗದ ಉದ್ಘಾಟನೆ, ಕೊಲ್ಲಂ-ಪುನಲೂರ್ ಏಕ ಮಾರ್ಗದ ವಿದ್ಯುದ್ದೀಕರಣದ ಉದ್ಘಾಟನೆ, ವಿಶೇಷ ರೈಲು ಧ್ವಜಾರೋಹಣ, ಎರ್ನಾಕುಲಂ ದಕ್ಷಿಣ, ಉತ್ತರ, ಕೊಲ್ಲಂ ನಿಲ್ದಾಣಗಳ ನವೀಕರಣ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನಂತರ ಪ್ರಧಾನಿಯವರು ಕಾಲಡಿ ಆದಿಶಂಕರ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ವೆಲ್ಲಿಂಗ್ಟನ್ ಐಲ್ಯಾಂಡ್‌ನ ತಾಜ್ ಮಲಬಾರ್ ಹೋಟೆಲ್‌ಗೆ ಆಗಮಿಸುವ ಪ್ರಧಾನಿ, ರಾತ್ರಿ 9 ಗಂಟೆಗೆ ಬಿಜೆಪಿಯ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ವಸತಿ ಕೂಡ ಇದೆ. ಪ್ರಧಾನಮಂತ್ರಿಯವರು ನಾಳೆ ಬೆಳಗ್ಗೆ 9.30ಕ್ಕೆ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಗೆ ಚಾಲನೆ ನೀಡಲಿದ್ದು  ಮಧ್ಯಾಹ್ನ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Published On - 6:11 pm, Thu, 1 September 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ