ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪಕ್ಷದ ನಾಯಕನಿಂದ ಮಹಿಳೆ ಮೇಲೆ ಹಲ್ಲೆ, ವಿಡಿಯೊ ವೈರಲ್

ಹಲ್ಲೆ ನಡೆಸಿರುವ ವ್ಯಕ್ತಿ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ  ನಾಯಕ ಎಂದು ಹೇಳಲಾಗುತ್ತದೆ. ವಿಡಿಯೊದಲ್ಲಿ, ಕೆಲವರು ವಿನೋದ್ ಅರ್ಗೈಲ್ ಎಂಬ ವ್ಯಕ್ತಿಯನ್ನು ಹಿಡಿದೆಳೆಯುತ್ತಿದ್ದರೂ...

ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪಕ್ಷದ ನಾಯಕನಿಂದ ಮಹಿಳೆ ಮೇಲೆ ಹಲ್ಲೆ, ವಿಡಿಯೊ ವೈರಲ್
ಮಹಿಳೆ ಮೇಲೆ ಹಲ್ಲೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 01, 2022 | 9:30 PM

ಮುಂಬೈ: ರಾಜ್ ಠಾಕ್ರೆ ಅವರ ಪಕ್ಷವಾದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಮುಖಂಡರೊಬ್ಬರು ಮುಂಬೈನ ಕಾಮಾಟಿಪುರದ ಪ್ರಕಾಶ್ ದೇವಿ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿ ತಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗಸ್ಟ್ 28, 2022 ರಂದು ಮಹಿಳೆಯ ಔಷಧಿ ಅಂಗಡಿಯ ಮುಂದೆ ಪ್ರಚಾರದ ಬ್ಯಾನರ್‌ಗಳಿಗೆ ಒಪ್ಪಿಗೆಯಿಲ್ಲದೆ ಇರಿಸಿದ್ದಕ್ಕಾಗಿಈ ಘಟನೆ ನಡೆದಿದೆ. ಹಲ್ಲೆ ನಡೆಸಿರುವ ವ್ಯಕ್ತಿ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ  ನಾಯಕ ಎಂದು ಹೇಳಲಾಗುತ್ತದೆ. ವಿಡಿಯೊದಲ್ಲಿ, ಕೆಲವರು ವಿನೋದ್ ಅರ್ಗೈಲ್ ಎಂಬ ವ್ಯಕ್ತಿಯನ್ನು ಹಿಡಿದೆಳೆಯುತ್ತಿದ್ದರೂ ಆತ ಮಹಿಳೆ ಮೇಲೆ ಹಲ್ಲೆ ನಡೆಸಿ ತಳ್ಳುತ್ತಿರುವುದು ಕಾಣುತ್ತದೆ. ಹೀಗೆ ತಳ್ಳಿದಾಗ ಆಕೆ ಬೀದಿಯಲ್ಲಿ ಬೀಳುತ್ತಾಳೆ. ಆದರೆ ದಾರಿಹೋಕರು ಯಾರೂ ಇದರ ಮಧ್ಯಪ್ರವೇಶ ಮಾಡುತ್ತಿಲ್ಲ

ಆರ್ಗೈಲ್ ನಿಂದನೀಯ ಭಾಷೆಯನ್ನು ಬಳಸುವುದನ್ನು ಸಹ ಕೇಳಲಾಗುತ್ತದೆ. ಆಗಸ್ಟ್ 31, 2022 ರಂದು ಆರ್ಗೈಲ್ ವಿರುದ್ಧ ನಾನ್ ಕಾಗ್ನಿಸಬಲ್ ಅಪರಾಧ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿರುವ ಪ್ರಕಾಶ್ ದೇವಿ ಎಂಬ ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಂಎನ್ಎಸ್ ನಾಯಕ ಕೇಶವ್ ಮುಲೆ, “ವಿನೋದ್ ಅರ್ಗೈಲ್ ಅವರನ್ನು ಚಿತ್ರಿಸುವ ವೈರಲ್ ವಿಡಿಯೊ ಪೂರ್ಣಗೊಂಡಿಲ್ಲ. ನಾವು ಅದನ್ನು ಬೆಂಬಲಿಸುವುದಿಲ್ಲ. ಎಂಎನ್ಎಸ್ ಮಹಿಳೆಯರನ್ನು ಗೌರವಿಸುತ್ತದೆ .ಆದರೆ ಆ ಮಹಿಳೆ ನಮ್ಮ ಪಕ್ಷದ ಬ್ಯಾನರ್ ಅನ್ನು ಕಿತ್ತೆಸೆದು ನಮ್ಮ ಪಕ್ಷದ ಕಾರ್ಯಕರ್ತರನ್ನು ನಿಂದಿಸಿದ್ದಾರೆ, ಅದನ್ನು ಎಡಿಟ್ ಮಾಡಲಾಗಿಗೆ. ವಿನೋದ್ ಅರ್ಗೈಲ್ ಅವರಿಗೂ ಬೇಗನೆ ಸಿಟ್ಟು ಬರುತ್ತದೆ ನಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದಿದ್ದಾರೆ.

Published On - 9:27 pm, Thu, 1 September 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ