ಬಾಲ್ಯದ ಗೆಳೆಯನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಪ್ರೀತಿಯು ಧರ್ಮವನ್ನು ಮೀರಿದ ಘಟನೆ ನಡೆದಿದೆ. ಸಫೀನಾ ಎಂಬ ಮುಸ್ಲಿಂ ಯುವತಿ ತನ್ನ ಬಾಲ್ಯದ ಗೆಳೆಯ ಸಂತ ಕುಮಾರ್ ಠಾಕೂರ್ ಅವರನ್ನು ಮದುವೆಯಾಗಲು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮಹಾದೇವಗಢ ದೇವಾಲಯದಲ್ಲಿ ಸನಾತನ ಧರ್ಮವನ್ನು ಸ್ವೀಕರಿಸಿ 'ಸಿಮ್ರನ್' ಎಂದು ಹೆಸರನ್ನು ಬದಲಾಯಿಸಿಕೊಂಡು ವೈದಿಕ ವಿಧಿಗಳ ಪ್ರಕಾರ ವಿವಾಹವಾದರು. ಸನಾತನ ಧರ್ಮ ಮಹಿಳೆಯರಿಗೆ ಗೌರವ ನೀಡುತ್ತದೆ ಎಂಬುದು ಅವರ ನಿರ್ಧಾರಕ್ಕೆ ಪ್ರೇರಣೆ.

ಬಾಲ್ಯದ ಗೆಳೆಯನನ್ನು ಮದುವೆಯಾಗಲು  ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ
ಮದುವೆ

Updated on: Jan 20, 2026 | 10:44 AM

ಖಾಂಡ್ವಾ, ಜನವರಿ 20: ಪ್ರೀತಿ(Love)ಯು ಜಾತಿ, ಧರ್ಮ ಎಲ್ಲವನ್ನೂ ಮೀರದ್ದು ಅಂತಾರೆ. ತಮ್ಮ ಪ್ರೀತಿಯನ್ನು ಗೆಲ್ಲಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪ್ರೇಮಿಗಳು ಸಿದ್ಧರಿರುತ್ತಾರೆ. ಯುವತಿ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಲು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಮಹಾದೇವಗಢ ದೇವಸ್ಥಾನವು ಈ ಘಟನೆಗೆ ಸಾಕ್ಷಿಯಾಗಿದೆ. ಅಲ್ಲಿ ನಡೆದ ವಿವಾಹದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆದಿದೆ. ಮುಸ್ಲಿಂ ಯುವತಿಯೊಬ್ಬರು ಸನಾತನ ಧರ್ಮವನ್ನು ಆರಿಸಿಕೊಂಡಿದ್ದಾರೆ. ತಾನು ಇಷ್ಟಪಟ್ಟವನ ಜತೆ ಸಪ್ತಪದಿ ತುಳಿದಿದ್ದಾರೆ. ವೈದಿಕ ವಿಧಿಗಳ ಪ್ರಕಾರ ಹಿಂದೂ ಪುರುಷನನ್ನು ವಿವಾಹವಾದರು. ಮಹಿಳೆ ತಾನು ಸ್ವಯಂಪ್ರೇರಣೆಯಿಂದ ಮತ್ತು ತನ್ನ ನಂಬಿಕೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಆ ಯುವತಿಯ ಹೆಸರು ಸಫಿನಾ, ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ನಿವಾಸಿ. ಮಹಾದೇವಗಢಕ್ಕೆ ಬಂದ ನಂತರ, ಅವರು ಮಹಾದೇವಗಢದ ಅಶೋಕ್ ಪಲಿವಾಲ್ ಅವರನ್ನು ಭೇಟಿಯಾದರು. ನಂತರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಮಾರಂಭವನ್ನು ನಡೆಸಲಾಯಿತು. ಅಲ್ಲಿ ಯುವತಿ ವೇದ ಪಠಣ ಮತ್ತು ಆಚರಣೆಗಳೊಂದಿಗೆ ಸನಾತನ ಧರ್ಮಕ್ಕೆ ಬಂದರು.

ಮತ್ತಷ್ಟು ಓದಿ: ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ: ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು

ಈ ಸಮಾರಂಭದಲ್ಲಿ, ಸಫೀನಾ ತನ್ನ ಹೆಸರನ್ನು ಸಿಮ್ರನ್ ಎಂದು ಬದಲಾಯಿಸಿಕೊಂಡರು. ಮತಾಂತರಗೊಂಡ ನಂತರ, ಸಿಮ್ರನ್ ತನ್ನ ಬಾಲ್ಯದ ಗೆಳೆಯ ಸಂತ ಕುಮಾರ್ ಠಾಕೂರ್ ಅವರನ್ನು ವಿವಾಹವಾದರು. ವಿವಾಹ ಸಮಾರಂಭವು ಮಹಾದೇವಗಢ ದೇವಾಲಯ ಆವರಣದಲ್ಲಿ ನಡೆಯಿತು. ಅಇಡೀ ಸಮಾರಂಭವು ದೇವಾಲಯ ಸಮಿತಿ ಮತ್ತು ಮಹಾದೇವಗಢ ತಂಡದ ಸಮ್ಮುಖದಲ್ಲಿ ನಡೆಯಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿ ಸಿಮ್ರನ್, ಸನಾತನ ಧರ್ಮದ ಬಗ್ಗೆ ತನಗೆ ಬಹಳ ಹಿಂದಿನಿಂದಲೂ ವಿಶೇಷವಾದ ನಂಟು ಇದೆ ಎಂದು ಹೇಳಿದರು. ಸಿಮ್ರನ್ ಪ್ರಕಾರ, ಸನಾತನ ಧರ್ಮವು ಮಹಿಳೆಯರಿಗೆ ಗೌರವ ಮತ್ತು ಸಮಾನ ಸ್ಥಾನಮಾನವನ್ನು ನೀಡುತ್ತದೆ, ಇದು ಈ ಧರ್ಮವನ್ನು ಸ್ವೀಕರಿಸಲು ಪ್ರೇರೇಪಿಸಿತು.

ಈ ನಿರ್ಧಾರವು ತನಗೆ ಸುಲಭವಾಗಿರಲಿಲ್ಲ ಎಂದು ಸಿಮ್ರನ್ ಹೇಳಿದ್ದಾರೆ. ಕುಟುಂಬದ ಅಸಮ್ಮತಿಯ ಹೊರತಾಗಿಯೂ, ಅವರು ಹೊಸ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಅಶೋಕ್ ಪಲಿವಾಲ್, ಯುವತಿಯ ಇಚ್ಛೆಯಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸಮಿತಿಯು ನವವಿವಾಹಿತರಿಗೆ ರಾಮಚರಿತಮಾನಸವನ್ನು ನೀಡಿ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸಿತು. ಮಹಾದೇವಗಢಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ನಂಬಿಕೆ ಮತ್ತು ನಿರ್ಧಾರಗಳನ್ನು ಗೌರವಿಸಲಾಗುತ್ತದೆ ಎಂದು ಪಲಿವಾಲ್ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ