AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ: ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು

ಮೂರು ಮಕ್ಕಳ ತಾಯಿಯನ್ನ ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ. ಪರಿಚಯ ವ್ಯಕ್ತಿಯೇ ಮಹಿಳೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಸದ್ಯ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ.

ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ: ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು
ಆರೋಪಿ, ಕೊಲೆಯಾದ ಮಹಿಳೆ
ವಿನಾಯಕ ಬಡಿಗೇರ್​
| Edited By: |

Updated on:Jan 15, 2026 | 6:55 PM

Share

ಬಳ್ಳಾರಿ, ಜನವರಿ 15: ಆಕೆ ಮೂರು ಮಕ್ಕಳ ತಾಯಿ (mother). ಕಳೆದ 8 ವರ್ಷಗಳಿಂದ ಗಂಡನಿಂದ ದೂರವಾಗಿದ್ದರು. ರೈಲ್ವೆ ಸ್ಟೇಷನ್​​ನಲ್ಲಿ ಸ್ಟಾಲ್‌‌ವೊಂದರಲ್ಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ತಾವಾಯ್ತು ತಮ್ಮ ಕುಟುಂಬವಾಯ್ತು ಅಂತಾ ಇದ್ದವರಿಗೆ ಯುವಕನೊಬ್ಬನ ಪರಿಚಯವಾಗಿದೆ. ಪರಿಚಯ ಸಲುಗೆಗೆ ತಿರುಗಿ ಯಾರಿಗೂ ಗೊತ್ತಾಗದ ಹಾಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದರು. ಆದರೆ ಅವರಿಬ್ಬರ ನಡುವೆ ಅದೇನಾಯ್ತು ಏನೋ, ಕತ್ತು ಕೊಯ್ದು ಭೀಕರ ಕೊಲೆ (Murder)  ಮಾಡಿದ್ದ.

ನಡೆದದ್ದೇನು?

ಉಮಾ (32) ಅವರಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಪಕ್ಕದ ರಾಜ್ಯ ಆಂಧ್ರದ ಪಾತಿಕೊಂಡ ಗ್ರಾಮದ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಮೂರು ಗಂಡು ಮಕ್ಕಳಿಗೆ ಜನ್ಮ ಕೂಡ ನೀಡಿದ್ದರು. ಆದರೆ ದಿನ ಕಳೆದಂತೆ ಗಂಡ-ಹೆಂಡತಿ ನಡುವೆ ಕಲಹ ಶುರುವಾಗಿದ್ದು, ಬಳಿಕ ಇಬ್ಬರು ದೂರುವಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ

ಗಂಡನಿಂದ ದೂರವಾಗಿದ್ದ ಉಮಾ ತಮ್ಮ ತವರೂರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ವಾಸವಾಗಿದ್ದರು. ಮೂರು ಮಕ್ಕಳನ್ನ ಕಟ್ಟಿಕೊಂಡು ಜೀವನ ನಡೆಸುವುದು ಉಮಾಗೆ ಕಷ್ಟವಾಗಿತ್ತು. ಹೀಗಾಗಿ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಇನ್ನು ಉಮಾಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಹಿರಿಯ ಮಗ ತನ್ನ ತಂದೆಯೊಂದಿಗೆ ವಾಸವಿದ್ದರೆ, ಇಬ್ಬರನ್ನು ಉಮಾ ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ತಂದೆ-ತಾಯಿಯನ್ನ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು.

ಚಾಟಿಂಗ್, ಕಾಲಿಂಗ್ ಜೋರು

ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಉಮಾರಿಗೆ ಅಂದು ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿದೆ. ಪರಿಚಯದ ನಂತರ ಆತ ದಿನವು ರೈಲ್ವೆ ಸ್ಟೇಷನ್‌ಗೆ ಬರೋದು, ಉಮಾ ಕೆಲಸ ಮಾಡುತ್ತಿದ್ದ ಸ್ಟಾಲ್ ಹತ್ತಿರ ನಿಲ್ಲುವುದು, ಅವರನ್ನು ಮಾತನಾಡಿಸು ಪ್ರಯತ್ನ ಮಾಡುವುದು ಹೀಗೆ ಕೆಲ ತಿಂಗಳು ನಡೆದಿದೆ. ಆದಾದ ಬಳಿಕ ಇಬ್ಬರು ಫೋನ್​ ನಂಬರ್ ಬದಲಾಯಿಸಿಕೊಂಡಿದ್ದಾರೆ. ನಂಬರ್​

ಪೋನ್ ನಂಬರ್ ಎಕ್ಸ್​ಚೇಂಜ್ ಆಗುತ್ತಿದ್ದಂತೆ ಇಬ್ಬರು ವಾಟ್ಸಾಪ್ ಚಾಟಿಂಗ್, ಫೋನ್​ ಕಾಲಿಂಗ್ ಜೋರಿರುತ್ತೆ. ಉಮಾ ಖಾಜಾನ ಜೊತೆಗೆ ಮಾತನಾಡುವ ವಿಷಯ ಅವರ ಮನೆಯಲ್ಲೂ ಗೊತ್ತಿರುತ್ತದೆ. ಉಮಾಳ ಸಹೋದರಿ ಯಾಕೆ ಇಷ್ಟೊಂದು ಫೋನ್​​ನಲ್ಲಿ ಮಾತಾಡೋದು, ಯಾರದು ಎಂದು ಕೇಳಿದ್ದಾರೆ. ಆಗ ಉಮಾ ಖಾಜಾ ಅಂತಾ, ಅವನು ನನ್ನ ಫ್ರೆಂಡ್ ಅಂತ ಹೇಳಿದ್ದಾರೆ. ಮೂರು ಮಕ್ಕಳ ತಾಯಿಯಾಗಿದ್ದ ಉಮಾಳಿಗೆ ಮುಸ್ಲಿಂ ಯುವಕ ಖಾಜಾ ಮೇಲೆ ಲವ್ ಆಗಿಯೇ ಬಿಟ್ಟಿದೆ. ಇತ್ತ ಖಾಜಾ ಕೂಡ ಲವ್​ನಲ್ಲಿ ಬಿದ್ದಿದ್ದ. ಇಬ್ಬರ ಪ್ರೇಮ ಪ್ರಣಯ ಶುರುವಾಗಿದೆ.

ಹಣಕಾಸಿನ ವಿಚಾರಕ್ಕೆ ಜಗಳ

ಉಮಾ ಯಾವಾಗ ಖಾಜಾನ ಪ್ರೀತಿಯಲ್ಲಿ ಬಿದ್ದರೋ, ಆಗ ಅವರು ಮನೆ-ಮಕ್ಕಳು ಎಲ್ಲವನ್ನ ಮರೆತಿದ್ದಾರೆ. ಮೂರು ಹೊತ್ತು ಖಾಜಾನ ಜೊತೆಗೆ ಮಾತು, ಚಾಟಿಂಗ್, ಡೇಟಿಂಗ್ ಜೋರಾಗಿತ್ತು. ಪರಿಚಯವಾಗಿ 8 ತಿಂಗಳ ಕಳೆದಿತ್ತು. ಅದರಲ್ಲಿ ಮನೆಯವರಿಗೆ ಹೇಳದೇನೆ ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರು ಗುಪ್ತವಾಗಿ ಮದುವೆ ಕೂಡ ಆಗಿದ್ದರಂತೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಹಣದ ವಿಚಾರ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜೊತೆಗೆ ಖಾಜಾನಿಗೆ ಉಮಾಳ ಸೌಂದರ್ಯ, ಆಕೆಯ ಮಾತು ತೆಲೆಕೆಡಿಸಿತ್ತು. ಬರುಬರುತ್ತ ಆಕೆಯ ಮೇಲೆ ಅನುಮಾನ ಪಡೋದಕ್ಕೆ ಶುರು ಮಾಡಿದ್ದ. ಉಮಾಳ ಫೋನ್​ ಬಿಜಿ ಬಂದ್ರೆ ಸಾಕು ಜೋರು ಗಲಾಟೆ ಮಡುತ್ತಿದ್ದನಂತೆ. ಉಮಾರ ಮನೆಗೆ ಯಾವತ್ತು ಖಾಜಾ ಬರುತ್ತಿರಲಿಲ್ಲ, ಬದಲಿಗೆ ಇಬ್ಬರು ಹೊರಗಡೆ ಭೇಟಿ ಮಾಡುತ್ತಿದ್ದರಂತೆ.

ಜನವರಿ 6ರಂದು ಅನುಮಾನ, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆಯಾದ ಬಳಿಕ ಉಮಾಳ ಮನೆ ಹತ್ತಿರಕ್ಕೆ ಖಾಜಾ ಬಂದಿದ್ದಾನೆ. ಮನೆ ಹತ್ತಿರ ಬರುತ್ತಿದ್ದಂತೆ ಉಮಾ ಅವರ ಮನೆ ಪಕ್ಕದ ಮನೆಯ ಮಹಡಿಗೆ ಹೋಗಿದ್ದಾರೆ. ಆಗ ಸಮಯ ಬೆಳಗಿನ ಜಾವ 4.30ರ ಸುಮಾರು, ಇಬ್ಬರು ಮಹಡಿ ಮೇಲೆ ಮಾತನಾಡುತ್ತಿದ್ದರು. ಸಿಟ್ಟಿನಲ್ಲಿದ್ದ ಖಾಜಾ ಕೊಲೆ ಮಾಡಲೇಬೇಕು ಅಂತಾ ಸಂಚು ಹಾಕಿ, ಹರಿತವಾದ ಚಾಕು ತಂದಿದ್ದ. ಮುಖಕ್ಕೆ ಟವೆಲ್ ಹಾಕಿ ಕೋಳಿ ಕುತ್ತಿಗೆ ಕೊಯ್ಯುವ ಹಾಗೆ ಉಮಾರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಉಮಾ ಸ್ಥಳದಲ್ಲೇ ಮೃತಪಟ್ಟಿದ್ದರು.

ಬೆಕ್ಕುಗಳ ಕಾದಾಟ: ಉಮಾ ಪತ್ತೆ

ರೈಲ್ವೆ ಸ್ಟೇಷನ್ ಸ್ಟಾಲ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಉಮಾ ಬೆಳಗಿನ ಜಾವ 4:30ಕ್ಕೆ ಮನೆಯಿಂದ ಆಚೆ ಹೋದವಳು ವಾಪಾಸ್ ಮನೆಗೆ ಬಂದಿಲ್ಲ. ಇತ್ತ ಗಾಬರಿಯಾಗಿದ್ದ ಮನೆಮಂದಿ ಉಮಾಳ ಹುಡುಕಾಡಿದ್ದಾರೆ. ಸಂಬಂಧಿಕರಿಗೆ, ಸ್ನೇಹಿತರಗೆ ಫೋನ್​ ಮಾಡಿ ವಿಚಾರಿಸಿದ್ದಾರೆ. ಆದರೆ ಯಾವುದು ಪ್ರಯೋಜವಾಗಿಲ್ಲ. ಇತ್ತ ಮನೆ ಪಕ್ಕದಲ್ಲಿ ಬೆಕ್ಕುಗಳ ಕಾದಾಟ ಮಾಡುತ್ತಿದ್ದವು. ಬೆಕ್ಕುಗಳು ಯಾಕಿಷ್ಟು ಕಾದಾಡುತ್ತಿವೆ. ಅಂತಾ ಮನೆ ಮಹಡಿ ನೋಡಲು ಹೋಗಿದ್ದ ಪಕ್ಕದ ಮನೆಯವರಿಗೆ ಉಮಾಳ ಶವ ಕಂಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹ ಕಂಡು ಆತಂಕಗೊಂಡಿದ್ದಾರೆ. ತಕ್ಷಣ ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹರಿತವಾದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದು ಬೆಳೆಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆಬಿಸಿದ್ದರು.

ಇದನ್ನೂ ಓದಿ: ತರಕಾರಿ ಮಾರಿ ಬಂದ ಹಣದಲ್ಲಿ ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ

ಇತ್ತ ಕೊಲೆ ಮಾಡಿದ್ದ ಖಾಜಾ ಹೊಸಪೇಟೆ ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಕೊಲೆ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಭೇಟಿ ನೀಡಿ ಆರೋಪಿ ಪತ್ತೆಗೆ ತಂಡ ಸಿದ್ಧಮಾಡಿದ್ದರು. ಮೃತ ಉಮಾಳ ಫೋನ್​ ಚೆಕ್ ಮಾಡಿ ಆಕೆಯ ಕೊನೆಯ ಕಾಲ್‌ ನಂಬರ್ ತೆಗೆದು ಟವರ್ ಟ್ರೇಸ್​ ಮಾಡಿದ್ದು, ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿ ಖಾಜಾ ಪತ್ತೆ ಮಾಡಿದ ಪೊಲೀಸರು, ಆತನನ್ನು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ಇತ್ತ ಉಮಾರನ್ನ ಕಳೆದುಕೊಂಡ ಇಡೀ ಕುಟುಂಬ ಅನಾಥವಾಗಿದೆ. ಮೊದಲೇ ತಂದೆಯಿಂದ ದೂರವಿದ್ದ ಮಕ್ಕಳು ಇದೀಗ ತಾಯಿ ಇಲ್ಲದೆ ತಬ್ಬಲಿಗಳಾಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:52 pm, Thu, 15 January 26

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್