ತರಕಾರಿ ಮಾರಿ ಬಂದ ಹಣದಲ್ಲಿ ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿ ತೇರದಾಳ ಪಟ್ಟಣದ ಪ್ರಭುಲಿಂಗ ದೇವರಿಗೆ 12 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿ ದಾನಜ್ಜಿ ಎಂದು ಹೆಸರಾಗಿದ್ದ ಚಂದ್ರವ್ವ ನಿಲಜಗಿ ಅಜ್ಜಿ ಕೊಲೆಯಾಗಿದೆ. ಬಾಗಲಕೋಟೆ (Bagalkot) ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಜಗದಾಳ ಬಳಿಯ ಕಾಲುವೆಗೆ ತಳ್ಳಿ ಕೊಲೆ ಮಾಡಲಾಗಿದೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸರ್ವೆ ಮಾಡುತ್ತಿದ್ದ ವೇಳೆ ಅಲ್ಲೇ ಇದ್ದ ಕಾಲುವೆಗೆ ಅಳಿಯಂದಿರು ( ಚಂದ್ರವ್ವನ ಅಣ್ಣನ ಮಕ್ಕಳು), ಅಜ್ಜಿಯನ್ನು ಕಾಲುವೆಗೆ ತಳ್ಳಿ ಕೊಂದಿದ್ದಾರೆ.
ಬಾಲಕೋಟೆ, (ಜನವರಿ 15): ತರಕಾರಿ ಮಾರಿ ತೇರದಾಳ ಪಟ್ಟಣದ ಪ್ರಭುಲಿಂಗ ದೇವರಿಗೆ 12 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿ ದಾನಜ್ಜಿ ಎಂದು ಹೆಸರಾಗಿದ್ದ ಚಂದ್ರವ್ವ ನಿಲಜಗಿ ಅಜ್ಜಿ ಕೊಲೆಯಾಗಿದೆ. ಬಾಗಲಕೋಟೆ (Bagalkot) ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಜಗದಾಳ ಬಳಿಯ ಕಾಲುವೆಗೆ ತಳ್ಳಿ ಕೊಲೆ ಮಾಡಲಾಗಿದೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸರ್ವೆ ಮಾಡುತ್ತಿದ್ದ ವೇಳೆ ಅಲ್ಲೇ ಇದ್ದ ಕಾಲುವೆಗೆ ಅಳಿಯಂದಿರು ( ಚಂದ್ರವ್ವನ ಅಣ್ಣನ ಮಕ್ಕಳು), ಅಜ್ಜಿಯನ್ನು ಕಾಲುವೆಗೆ ತಳ್ಳಿ ಕೊಂದಿದ್ದಾರೆ. ಬಳಿಕ ರಕ್ಷಣೆ ಮಾಡುವ ನಾಟಕವಾಡಿದ್ದಾರೆ. ಆದ್ರೆ, ಅಷ್ಟೊತ್ತಿಗೆ ಅಜ್ಕಿಯ ಜೀವ ಹೋಗಿದ್ದು, ಅವಸರದಲ್ಲಿ ಅಂತ್ಯಸಂಸ್ಕಾರ ಮಾಡಲು ಅಜ್ಜಿಯ ಮೃತದೇಹಕ್ಕೆ ಹೊಸ ಸೀರೆ ಉಡಿಸಿ ಸಿಂಗರಿಸಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದಾರೆ. ಆದ್ರೆ, ಸ್ಥಳೀಯರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬನಹಟ್ಟಿ ಪೊಲೀಸರು ದೌಡಾಯಿಸಿದಾಗ ದಾನಜ್ಜಿಯ ಕೊಲೆ ರಹಸ್ಯ ಬಯಲಿಗೆ ಬಂದಿದೆ.
ಅಜ್ಜಿ ಮದುವೆಯಾಗಿ ಕೆಲವೇ ವರ್ಷದಲ್ಲಿ ಗಂಡ ತೀರಿಕೊಂಡಿದ್ದ. ಮಕ್ಕಳು ಸಹ ಇರಲಿಲ್ಲ. ಇದರಿಂದ ಕಳೆದ 60 ವರ್ಷಗಳಿಂದ ತೇರದಾಳ ಪಟ್ಟಣದ ಪ್ರಭುಲಿಂಗ ದೇವಸ್ಥಾನದ ಮುಂದೆ ತರಕಾರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಇದರಿಂದ ಬಂದ ಹಣದಿಂದ ದೇಗುಲಕ್ಕೆ 2022ರಲ್ಲಿ 20 ಕೆಜಿ ತೂಕದ 16 ಲಕ್ಷ ರೂ. ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿದ್ದಳು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

