AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಗೀತೆಗೆ ಅಗೌರವ, ಈ ವರ್ಷವೂ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ ರವಿ

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ, ಸತತ ಎರಡನೇ ವರ್ಷವೂ ವಿಧಾನಸಭೆ ಅಧಿವೇಶನದಿಂದ ಹೊರನಡೆದಿದ್ದಾರೆ. ತಮಿಳು ಗೀತೆಯ ನಂತರ ರಾಷ್ಟ್ರಗೀತೆ ಹಾಡಬೇಕೆಂಬ ಅವರ ಒತ್ತಾಯಕ್ಕೆ ಸ್ಪೀಕರ್ ನಿರಾಕರಿಸಿದರು. ಮೈಕ್ ಆಫ್ ಮಾಡಲಾಗಿದೆ ಹಾಗೂ ದಲಿತ ದೌರ್ಜನ್ಯ ವಿಷಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ. ಈ ಘಟನೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ರಾಷ್ಟ್ರಗೀತೆಗೆ ಅಗೌರವ, ಈ ವರ್ಷವೂ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ ರವಿ
ಆರ್​ಎನ್​ ರವಿ
ನಯನಾ ರಾಜೀವ್
|

Updated on: Jan 20, 2026 | 11:20 AM

Share

ಚೆನ್ನೈ, ಜನವರಿ 20: ತಮಿಳುನಾಡಿನಲ್ಲಿ ವಿಧಾನಸಭಾ ಅಧಿವೇಶನ(Assembly Session) ಶುರುವಾಗಿದೆ. ತಮಿಳು ಗೀತೆಯೊಂದಿಗೆ ಅಧಿವೇಶನ ಆರಂಭಿಸಿದ್ದಾರೆ. ರಾಷ್ಟ್ರಗೀತೆಗೆ ಗೌರವ ಕೊಟ್ಟಿಲ್ಲ ಎನ್ನುವ ಬೇಸರದಲ್ಲಿ ಈ ವರ್ಷವೂ ಕೂಡ ತಮಿಳುನಾಡು ರಾಜ್ಯಪಾಲ್ ಆರ್​ಎನ್​ ರವಿ ಭಾಷಣ ಮಾಡದೆ ವಿಧಾನಸಭೆಯಿಂದ ಹೊರ ನಡೆದಿದ್ದಾರೆ. ನನ್ನ ಮೈಕ್  ಸ್ವಿಚ್ ಆಫ್ ಮಾಡಲಾಗಿತ್ತು, ನನ್ನನ್ನು ಅವಮಾನಿಸಲಾಗಿದೆ ಮತ್ತು ನನಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿ ಅವರು ಹೊರನಡೆದಿದ್ದಾರೆ.

ಕಳೆದ ವರ್ಷವೂ ಕೂಡ ಇದೇ ರೀತಿಯಾಗಿತ್ತು. ತಮಿಳು ಗೀತೆಯ ನಂತರ ರಾಷ್ಟ್ರಗೀತೆ ಹಾಡಬೇಕೆಂದು ರಾಜ್ಯಪಾಲರು ಒತ್ತಾಯಿಸಿದರು ಮತ್ತು ಸ್ಪೀಕರ್ ಅಪ್ಪಾವು ನಿರಾಕರಿಸಿದಾಗ, ರಾಜ್ಯಪಾಲರು ಆರಂಭಿಕ ಭಾಷಣವನ್ನು ಓದದೆಯೇ ಅಲ್ಲಿಂದ ಹೋಗಿದ್ದಾರೆ.

2024, 2025 ರಲ್ಲೂ ರಾಜ್ಯಪಾಲರು ವಿಧಾನಸಭೆಯನ್ನುದ್ದೇಶಿಸಿ ಭಾಷಣ ಮಾಡಲಿಲ್ಲ. ಕಳೆದ ವರ್ಷ, ತಮ್ಮ ಭಾಷಣದ ಆರಂಭದಲ್ಲಿ ರಾಷ್ಟ್ರಗೀತೆ ಹಾಡದ ಕಾರಣ ಅವರು ವಿಧಾನಸಭೆಯಿಂದ ಹೊರನಡೆದಿದ್ದರು. ತಮಿಳುನಾಡಿನ ಲೋಕ ಭವನವು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, ರಾಜ್ಯಪಾಲ ಆರ್.ಎನ್. ರವಿ ಅವರು ಉದ್ಘಾಟನಾ ಭಾಷಣ ಮಾಡುವ ಮೊದಲು ವಿಧಾನಸಭೆಯಿಂದ ಹೊರನಡೆದ ಕಾರಣಗಳನ್ನು ತಿಳಿಸಿತ್ತು.

ಮತ್ತಷ್ಟು ಓದಿ: ಅಧಿವೇಶನಕ್ಕೂ ಮುನ್ನ ರಾಷ್ಟ್ರಗೀತೆಗೆ ತಮಿಳುನಾಡು ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ ರವಿ

ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಆಫ್ ಮಾಡಲಾಯಿತು, ಮತ್ತು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಲಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ತೀವ್ರವಾಗಿ ಹೆಚ್ಚುತ್ತಿವೆ. ಆದಾಗ್ಯೂ, ಭಾಷಣದಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರಾಷ್ಟ್ರಗೀತೆಯನ್ನು ಮತ್ತೊಮ್ಮೆ ಅವಮಾನಿಸಲಾಗಿದೆ ಮತ್ತು ಮೂಲಭೂತ ಸಾಂವಿಧಾನಿಕ ಕರ್ತವ್ಯವನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮಿಳುನಾಡು ಸ್ಪೀಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ತಮಿಳುನಾಡು ವಿಧಾನಸಭೆಯ ಸ್ಪೀಕರ್ ಎಂ. ಅಪ್ಪಾವು ಅವರಿಗೆ ಹುಟ್ಟುಹಬ್ಬದ ಶುಭಾಶಯ, ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಬಿರ್ಲಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ