ಅಧಿವೇಶನಕ್ಕೂ ಮುನ್ನ ರಾಷ್ಟ್ರಗೀತೆಗೆ ತಮಿಳುನಾಡು ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ ರವಿ

ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ವಿಧಾನಸಭೆಯ ಅಧಿವೇಶನದ ಆರಂಭಿಕ ಸಾಂಪ್ರದಾಯಿಕ ಭಾಷಣವನ್ನು ಓದಲು ನಿರಾಕರಿಸಿದರು. ಸದನ ಆರಂಭವಾಗುವ ಮುನ್ನ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಬೇಕೆಂದು ಸಲಹೆ ನೀಡಿದ್ದೆ ಆದರೆ ಅವರು ನಿರ್ಲಕ್ಷಿಸಿದ್ದಾರೆ ಎಂದು ಹೇಳಿ ಸದನದಿಂದ ಹೊರನಡೆದಿದ್ದಾರೆ.

ಅಧಿವೇಶನಕ್ಕೂ ಮುನ್ನ ರಾಷ್ಟ್ರಗೀತೆಗೆ ತಮಿಳುನಾಡು ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ ರವಿ
ರಾಜ್ಯಪಾಲ ಆರ್​ಎನ್ ರವಿImage Credit source: The Hindu
Follow us
ನಯನಾ ರಾಜೀವ್
|

Updated on: Feb 12, 2024 | 12:36 PM

ರಾಷ್ಟ್ರಗೀತೆಗೆ ಗೌರವ ಕೊಡದ ಕಾರಣ ನನಗೆ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ತಮಿಳುನಾಡು ವಿಧಾನಸಭೆಯಿಂದ ರಾಜ್ಯಪಾಲ ಆರ್​ ಎನ್​ ರವಿ(RN Ravi) ಹೊರನಡೆದಿದ್ದಾರೆ. ಸದನ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಂತೆ ಎನ್​ ರವಿ ಸಲಹೆ ನೀಡಿದ್ದರು. ಆದರೆ ಸ್ಟಾಲಿನ್ ಸರ್ಕಾರವು ಅದನ್ನು ನಿರಾಕರಿಸಿದೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರು ಸದನದಿಂದ ಹೊರ ನಡೆದಿದ್ದಾರೆ.

ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಭಾಷಣದ ಪ್ರತಿಯನ್ನು ಓದಲು ನಿರಾಕರಿಸಿದ ಆರ್​ಎನ್​ ರವಿ ವಿಧಾನಸಭೆಯಿಂದ ಹೊರಹೋಗಿದ್ದಾರೆ. ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾತನಾಡಿ, ತಮಿಳುನಾಡು ವಿಧಾನಸಭೆಯ ಅಧಿವೇಶನದ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತೆ ರಾಜ್ಯಪಾಲರು ವಿನಂತಿಸಿದ್ದರು.

ಅವರ ಸಲಹೆಯನ್ನು ನಿರ್ಲಕ್ಷಿಸಿದ ಕಾರಣ ಅವರು ಸಾಂಪ್ರದಾಯಿಕ ಭಾಷಣ ಮಾಡಲು ನಿರಾಕರಿಸಿದ್ದಾರೆ. ಇದು ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಮಸ್ಯೆಯಾಗಿದೆ ಎಂದಿದ್ದಾರೆ.

ಮತ್ತಷ್ಟು ಓದಿ: Tamil Nadu: ರಾಜ್ಯಪಾಲರ ಹತ್ಯೆ ಹೇಳಿಕೆ ನೀಡಿದ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅಮಾನತು

ತಮಿಳುನಾಡು ಸರ್ಕಾರ ತಮಗಾಗಿ ಸಿದ್ಧಪಡಿಸಿರುವ ಭಾಷಣದಲ್ಲಿ ಮಾಡಿರುವ ಕೆಲವು ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾ ಭಾಷಣ ಮುಗಿಸಿದರು. ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ.

ಸದನದಿಂದ ಹೊರ ನಡೆದ ರಾಜ್ಯಪಾಲರು 

ಕೇರಳದಲ್ಲೂ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ನಡೆದಿತ್ತು. ಕಳೆದ ತಿಂಗಳು ಅಲ್ಲಿ ವಿಧಾನಸಭೆ ಅಧಿವೇಶನ ನಡೆದಾಗ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಚಟುವಟಿಕೆಗಳು ಚರ್ಚೆಗೆ ಗ್ರಾಸವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ