AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರುತ್ತಲೇ ಇದೆ ಬೆಳಗಾವಿ ಅಧಿವೇಶನದ ವೆಚ್ಚ: ಈ ಬಾರಿ ಎಷ್ಟು ಖರ್ಚಾಗುತ್ತೆ ಗೊತ್ತಾ?

ಡಿಸೆಂಬರ್ 8 ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದೆ. ಅದರೊಂದಿಗೆ, ಅಧಿವೇಶನದ ಖರ್ಚುವೆಚ್ಚ ಏರಿಕೆಯಾಗುತ್ತಿರುವುದರ ಬಗ್ಗೆಯೂ ಚರ್ಚೆ ಆರಂಭಗೊಂಡಿದೆ. ಹಾಗಾದರೆ, ಬೆಳಗಾವಿ ಅಧಿವೇಶನಕ್ಕೆ ಈವರೆಗೆ ಆದ ಖರ್ಚುವೆಚ್ಚಗಳೆಷ್ಟು? ಈ ಬಾರಿ ಎಷ್ಟು ಖರ್ಚಾಗಬಹುದು? ಇದು ಕಳೆದ ವರ್ಷಕ್ಕಿಂತ ಎಷ್ಟು ಹೆಚ್ಚು? ಇಲ್ಲಿದೆ ಮಾಹಿತಿ.

ಏರುತ್ತಲೇ ಇದೆ ಬೆಳಗಾವಿ ಅಧಿವೇಶನದ ವೆಚ್ಚ: ಈ ಬಾರಿ ಎಷ್ಟು ಖರ್ಚಾಗುತ್ತೆ ಗೊತ್ತಾ?
ಬೆಳಗಾವಿಯ ಸುವರ್ಣ ವಿಧಾನಸೌಧ
ಗಣಪತಿ ಶರ್ಮಾ
|

Updated on: Dec 04, 2025 | 2:31 PM

Share

ಬೆಳಗಾವಿ, ಡಿಸೆಂಬರ್ 4: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು (Assembly Session) ಆಯೋಜಿಸುವ ವೆಚ್ಚ ಹೆಚ್ಚುತ್ತಲೇ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಡಿಸೆಂಬರ್ 8 ರಿಂದ 19 ರವರೆಗೆ ನಡೆಯಲಿರುವ ಹತ್ತು ದಿನಗಳ ಅಧಿವೇಶನಕ್ಕೆ ಜಿಲ್ಲಾಡಳಿತವು 21 ಕೋಟಿ ರೂ. ವೆಚ್ಚವನ್ನು ಅಂದಾಜಿಸಿದೆ. ಕಳೆದ ವರ್ಷ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನಕ್ಕೆ ಸರ್ಕಾರ 15.30 ಕೋಟಿ ರೂ. ಖರ್ಚು ಮಾಡಿತ್ತು. ಈ ವರ್ಷ 5.70 ಕೋಟಿ ರೂ. ಹೆಚ್ಚಳವಾಗಿದೆ. 2012 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಗಳಿಗೆ ರಾಜ್ಯ ಸರ್ಕಾರ 169.6 ಕೋಟಿ ರೂ. ಖರ್ಚು ಮಾಡಿದೆ.

ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವುದು ಮತ್ತು ಆಡಳಿತ ವಿಕೇಂದ್ರೀಕರಣ, ಇಲಾಖಾ ಸಮತೋಲನವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಗುತ್ತದೆ. ಆದಾಗ್ಯೂ ಈ ಉದ್ದೇಶಗಳು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎಂಬುದರ ಬಗ್ಗೆ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದೆ.

ಬೆಳಗಾವಿ ಅಧಿವೇಶನ: ಯಾವುದಕ್ಕೆಲ್ಲ ಹೆಚ್ಚು ಖರ್ಚು?

ಕಲಾಪದ ದಿನಗಳ ಸಂಖ್ಯೆ, ಶಾಸಕರ ಹಾಜರಾತಿ ಪ್ರಮಾಣ ಮತ್ತು ಚರ್ಚೆಗಳ ಗಂಭೀರತೆ ಹೊರತಾಗಿ ಅಧಿವೇಶನದ ಹೆಚ್ಚಿನ ವೆಚ್ಚವು ಪ್ರಯಾಣ, ವಸತಿ, ಭದ್ರತೆ, ಅತಿಥಿಗಳ ನಿರ್ವಹಣೆ, ತಾಂತ್ರಿಕ ಬೆಂಬಲ, ವಿಶೇಷ ಸಿಬ್ಬಂದಿಯ ನಿಯೋಜನೆ, ಸಾರಿಗೆ ಮತ್ತು ಸುವರ್ಣ ಸೌಧದ ನಿರ್ವಹಣೆ ಸೇರಿದಂತೆ ಇತರ ಕೆಲಸಗಳಿಗೇ ಹೆಚ್ಚಿನ ವೆಚ್ಚ ವಿನಿಯೋಗವಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಸುವರ್ಣಸೌಧ ಸಜ್ಜು: 12 ಸಾವಿರ ಸಿಬ್ಬಂದಿ, 3 ಸಾವಿರ ರೂಮ್​ಗಳು ಬುಕ್

ಉಳಿದಂತೆ ಸಂಪುಟ ಸಭೆಗಳು, ವಿಶೇಷ ಶಾಸಕಾಂಗ ಸಭೆಗಳು, ಮಾಧ್ಯಮ ಸೌಲಭ್ಯ, ಪೊಲೀಸ್ ವ್ಯವಸ್ಥೆ, ಸಾರಿಗೆ ಲಾಜಿಸ್ಟಿಕ್ಸ್ ಮತ್ತು ಶಿಷ್ಟಾಚಾರ ನಿರ್ವಹಣೆಗೆ ಹಣವನ್ನು ಹಂಚಿಕೆ ಮಾಡಲಾಗುತ್ತದೆ. ಪ್ರತಿ ವರ್ಷ ಬೆಳಗಾವಿ ಅಧಿವೇಶನಕ್ಕೆ ಖರ್ಚು ಹೆಚ್ಚುತ್ತಿದೆ. ಇದರೊಂದಿಗೆ, ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವ ಅನಿವಾರ್ಯ, ಅಗತ್ಯತೆಯ ಕುರಿತಾದ ಚರ್ಚೆ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ