ಸಮವಸ್ತ್ರದ ಮೇಲೆ ಹಿಜಾಬ್​ ನಿಷೇಧ; ಸರ್ಕಾರಗಳ ಸುತ್ತೋಲೆ ಹರಿದು ಹಾಕಿ ಕೇರಳದಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಯುವತಿಯರು

ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಸರ್ವಥ್​ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್​ ಅವರು ಹಿಂದುಳಿದವರ ಶಿಕ್ಷಣಕ್ಕಾಗಿ ಶ್ರಮಿಸಿದವರು. ಅವರೂ ಕೂಡ ತಮ್ಮ ತಲೆಯ ಮೇಲೆ ಪಲ್ಲು ಅಥವಾ ಸ್ಕಾರ್ಫ್​ ಕಟ್ಟುತ್ತಿದ್ದರು ಎಂದು ಹೇಳಿದರು.

ಸಮವಸ್ತ್ರದ ಮೇಲೆ ಹಿಜಾಬ್​ ನಿಷೇಧ; ಸರ್ಕಾರಗಳ ಸುತ್ತೋಲೆ ಹರಿದು ಹಾಕಿ ಕೇರಳದಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂ ಯುವತಿಯರು
ಕೇರಳದಲ್ಲಿ ನಡೆದ ರ್ಯಾಲಿ
Follow us
TV9 Web
| Updated By: Lakshmi Hegde

Updated on:Mar 13, 2022 | 8:40 AM

ಕೇರಳದ ಎರ್ನಾಕುಲಂನಲ್ಲಿ ಶನಿವಾರ ಹಿಜಾಬ್ (Hijab)​ ಧರಿಸಿದ ಅನೇಕ ಮಹಿಳೆಯರು, ಹುಡುಗಿಯರು ದೊಡ್ಡ ಪ್ರಮಾಣದಲ್ಲಿ ರ್ಯಾಲಿ, ಸಭೆ ನಡೆಸಿದ್ದಾರೆ. ಗರ್ಲ್ಸ್ ಇಸ್ಲಾಮಿಕ್​ ಆರ್ಗನೈಸೇಶನ್​​ ಬ್ಯಾನರ್​ ಹಿಡಿದು ರ್ಯಾಲಿ ನಡೆಸಿದ ಇವರು, ಹಿಜಾಬ್​ ನಿಷೇಧದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಶಾಲಾ ಸಮವಸ್ತ್ರದ ಮೇಲೆ ಹಿಜಾಬ್ ಧರಿಸುವಂತಿಲ್ಲ ಎಂಬ ಕರ್ನಾಟಕ ಸರ್ಕಾರದ ಸುತ್ತೋಲೆ ಮತ್ತು ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿ ಪೊಲೀಸ್​ ಕೆಡೆಟ್​​ಗಳಲ್ಲಿರುವ ವಿದ್ಯಾರ್ಥಿನಿಯರು ಹಿಜಾಬ್​ ಧರಿಸುವಂತಿಲ್ಲ ಎಂದು ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಹರಿದು ಹಾಕುವ ಮೂಲಕ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕರ್ನಾಟಕದಲ್ಲಿ ಹಿಜಾಬ್​ ವಿವಾದ ಬೂದಿ ಮುಚ್ಚಿದ ಕೆಂಡದಂತೆ ನಡೆಯುತ್ತಲೇ ಇದೆ. ಅದು ದೇಶವ್ಯಾಪಿ ವಿಸ್ತರಿಸಿದ್ದು ಗೊತ್ತೇ ಇದೆ.

ಕೇರಳದ ಶಾಲೆಗಳಲ್ಲಿ ಸ್ಟೂಡೆಂಟ್​​ ಪೊಲೀಸ್​ ಕೆಡೆಟ್​ ಎಂಬ ವಿಭಾಗವಿದೆ. ಇದೊಂದು ಯುವಜನ ಅಭಿವೃದ್ಧಿ ಯೋಜನೆಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಪಾಲನೆ, ಶಿಸ್ತು, ನಾಗರಿಕ ಪ್ರಜ್ಞೆ, ಬಡವರು-ದುರ್ಬಲ ವರ್ಗದವರ ಬಗ್ಗೆ ಸಹಾನುಭೂತಿ, ಸಮಾಜದಲ್ಲಿ ಕೆಟ್ಟದರ ಬಗ್ಗೆ ಪ್ರತಿರೋಧ ಒಡ್ಡುವುದನ್ನು ಕಲಿಸುವ, ಈ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭವಿಷ್ಯದಲ್ಲಿ ಒಬ್ಬ ಅತ್ಯುತ್ತಮ ನಾಯಕನನ್ನಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತವೆ. ಇಲ್ಲೂ ಸಹ ಸಮವಸ್ತ್ರದ ಮೇಲೆ ಹಿಜಾಬ್​ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಮೊರೆ ಹೋಗಿದ್ದಳು. ಆದರೆ ಕೇರಳ ಸರ್ಕಾರ , ಇಲ್ಲಿಯವರೆಗೆ ಇಲ್ಲದ್ದನ್ನು ಈಗ ಮಾಡಲಾಗದು. ಹೀಗೆ ಸ್ಟುಡೆಂಟ್​ ಪೊಲೀಸ್​ ಕೆಡೆಟ್​​ ವಿದ್ಯಾರ್ಥಿಗಳಿಗೆ ಹಿಜಾಬ್​ ಮತ್ತು ಪೂರ್ಣ ತೋಳಿನ ಅಂಗಿ ಧರಿಸಲು ಕೊಟ್ಟರೆ, ಇನ್ನೂ ಬೇರೆ ಸಂಘಟನೆಗಳವರೂ ಅದಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿತ್ತು.

ಎರ್ನಾಕುಲಂನಲ್ಲಿ ನಡೆದ ರ್ಯಾಲಿ, ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿ.ಎ. ಶಬ್ನಾ (ಇವರು ಮೂಲತಃ ಕೇರಳದವರಾಗಿದ್ದು, ಕರ್ನಾಟಕದ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಹಿಜಾಬ್​ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು), ಕಳೆದ ವರ್ಷ ಪರೀಕ್ಷೆಯ ವೇಳೆ ನಾನು ಹಿಜಾಬ್ ಧರಿಸಿಯೇ ಕುಳಿತಿದ್ದೆ. ಆಗ ಶಿಕ್ಷಕರು ಮತ್ತು ಪ್ರಿನ್ಸಿಪಾಲ್​ ಬಂದು ಹಿಜಾಬ್ ತೆಗೆಯುವಂತೆ ಸೂಚಿಸಿದರು. ಆದರೆ ನಾನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತೆ. ಅದು ಅಲ್ಲಿಗೇ ಮುಗಿಯಿತು, ಲಾಕ್​ಡೌನ್ ಶುರುವಾಯಿತು. ಲಾಕ್​ಡೌನ್​ ಮುಗಿದು ವಾಪಸ್​ ಬಂದಾಗ ಶಿಕ್ಷಕರು ಮತ್ತು ಇತರ ಕೆಲವು ವಿದ್ಯಾರ್ಥಿಗಳಲ್ಲಿ ನನ್ನ ಬಗೆಗಿನ ಅಭಿಪ್ರಾಯ ಬದಲಾಗಿತ್ತು. ಅವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದರು. ನಾನು ಯಾರೊಂದಿಗೆ ರೂಂನಲ್ಲಿ ಇದ್ದೆನೋ, ಆಕೆಯೂ ಕೂಡ ಅಲ್ಲಿಂದ ಹೋಗುವಂತೆ ಹೇಳಿದಳು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಸರ್ವಥ್​ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್​ ಅವರು ಹಿಂದುಳಿದವರ ಶಿಕ್ಷಣಕ್ಕಾಗಿ ಶ್ರಮಿಸಿದವರು. ಅವರೂ ಕೂಡ ತಮ್ಮ ತಲೆಯ ಮೇಲೆ ಪಲ್ಲು ಅಥವಾ ಸ್ಕಾರ್ಫ್​ ಕಟ್ಟುತ್ತಿದ್ದರು. ಬೇರೆಬೇರೆ ಹೆಸರಿನಿಂದ ಕರೆದರೂ ಇದು ನಮ್ಮ ದೇಶದಲ್ಲಿ ದೀರ್ಘ ಕಾಲದಿಂದಲೂ ಇರುವ ಒಂದು ಸಂಪ್ರದಾಯ. ತಲೆಗೆ ಸೆರಗು, ಸ್ಕಾರ್ಫ್​ ಅಥವಾ ಹಿಜಾಬ್​​ ಧರಿಸುವುದರಿಂದ ಸಾಮಾಜಿಕವಾಗಿ ಯಾವುದೇ ಅನನುಕೂಲ ತರುವುದಿಲ್ಲ. ಅದರಲ್ಲಿ ಈಗ ಹಿಜಾಬ್​ಗೆ ಮಾತ್ರ ನಿರಾಕರಣೆ ಮಾಡುವುದು ಅನ್ಯಾಯ ಎಂದು ಹೇಳಿದರು. ಹೀಗೆ ಹಲವು ಪ್ರಮುಖರು ಮಾತನಾಡಿ, ಹಿಜಾಬ್​ಗೆ ಅವಕಾಶ ಕೊಡಲೇಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Health: ಒಬ್ಬ ಭಾರತೀಯ ಪ್ರತಿ ವರ್ಷ ಸರಾಸರಿ 14 ಕೆಜಿ ಸಕ್ಕರೆ ಸೇವಿಸುತ್ತಾನೆ; ಅದು ಎಷ್ಟು ಅಪಾಯಕಾರಿ ಎಂದು ತಿಳಿದಿದೆಯೇ?

Published On - 8:39 am, Sun, 13 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ