ಭಾರೀ ಮಳೆಗೆ ಡ್ಯಾಂ‌ ಒಡೆದು ಗ್ರಾಮದ ತುಂಬೆಲ್ಲಾ ನೀರು! ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jul 31, 2020 | 2:47 PM

ಬಿಹಾರ: ಬಿಹಾರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಡ್ಯಾಮ್‌ ಒಡೆದ ಪರಿಣಾಮ ಮುಜಫರ್‌ಪುರ ಜಿಲ್ಲೆಯಲ್ಲಿ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ. ಹೌದು ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬೂರಿ ಗಂದಕ್‌ ನದಿಗೆ ಕಟ್ಟಲಾಗಿದ್ದ ರಿಂಗ್‌ ಡ್ಯಾಮ್‌ ಕಿತ್ತುಹೊಗಿದೆ. ಪರಿಣಾಮ ನದಿಯ ನೀರು ಸುತ್ತಮುತ್ತಲಿನ ಪ್ರದೇಶದಲ್ಲಿ ತುಂಬಿಕೊಂಡಿದ್ದು ಅಲ್ಲಿನ ಜನರು ಪರದಾಡುವಂತಾಗಿದೆ. ಈ ಬಗ್ಗೆ ತಮ್ಮ ಅಳಲು ತೊಡಿಕೊಂಡಿರುವ ಸ್ಥಳೀಯರು, ಸುತ್ತಮಮುತ್ತಲಿನ ಗ್ರಾಮಗಳಲ್ಲಿ ನೀರು ತುಂಬಿಕೊಂಡಿರೋದ್ರಿಂದ ಪರದಾಡುವಂತಾಗಿದೆ. ಕುಡಿಯಲು ಸರಿಯಾದ ನೀರು ಮತ್ತು ಆಹಾರ […]

ಭಾರೀ ಮಳೆಗೆ ಡ್ಯಾಂ‌ ಒಡೆದು ಗ್ರಾಮದ ತುಂಬೆಲ್ಲಾ ನೀರು! ಎಲ್ಲಿ?
Follow us on

ಬಿಹಾರ: ಬಿಹಾರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಡ್ಯಾಮ್‌ ಒಡೆದ ಪರಿಣಾಮ ಮುಜಫರ್‌ಪುರ ಜಿಲ್ಲೆಯಲ್ಲಿ ಜನಜೀವನ ಭಾರೀ ಅಸ್ತವ್ಯಸ್ತವಾಗಿದೆ.

ಹೌದು ಬಿಹಾರದ ಮುಜಫರ್‌ಪುರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬೂರಿ ಗಂದಕ್‌ ನದಿಗೆ ಕಟ್ಟಲಾಗಿದ್ದ ರಿಂಗ್‌ ಡ್ಯಾಮ್‌ ಕಿತ್ತುಹೊಗಿದೆ. ಪರಿಣಾಮ ನದಿಯ ನೀರು ಸುತ್ತಮುತ್ತಲಿನ ಪ್ರದೇಶದಲ್ಲಿ ತುಂಬಿಕೊಂಡಿದ್ದು ಅಲ್ಲಿನ ಜನರು ಪರದಾಡುವಂತಾಗಿದೆ.

ಈ ಬಗ್ಗೆ ತಮ್ಮ ಅಳಲು ತೊಡಿಕೊಂಡಿರುವ ಸ್ಥಳೀಯರು, ಸುತ್ತಮಮುತ್ತಲಿನ ಗ್ರಾಮಗಳಲ್ಲಿ ನೀರು ತುಂಬಿಕೊಂಡಿರೋದ್ರಿಂದ ಪರದಾಡುವಂತಾಗಿದೆ.

ಕುಡಿಯಲು ಸರಿಯಾದ ನೀರು ಮತ್ತು ಆಹಾರ ಸಿಗುತ್ತಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ತಿರುಗಾಡಲು ಬೋಟ್‌ಗಳನ್ನು ಅಥವಾ ತೆಪ್ಪಗಳನ್ನು ಉಪಯೋಗಿಸಬೇಕಾಗಿದೆ. ಬಿಹಾರ ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ.