ಕೋಚಿಂಗ್​ ಕೇಂದ್ರದಲ್ಲಿ ಸಹಪಾಠಿಯ ಪಿಸ್ತೂಲಿನಿಂದ ಹಾರಿದ ಗುಂಡು, ಬಾಲಕಿಗೆ ಗಾಯ

|

Updated on: Sep 11, 2024 | 10:31 AM

ಮುಜಾಫರ್​ಪುರದ ಕೋಚಿಂಗ್ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಸಹಪಾಠಿಯ ಪಿಸ್ತೂಲಿನಿಂದ ಗುಂಡು ತಗುಲಿರುವ ಘಟನೆ ವರದಿಯಾಗಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ, ಮುಜಾಫರ್‌ಪುರದ ಸಕ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ.

ಕೋಚಿಂಗ್​ ಕೇಂದ್ರದಲ್ಲಿ ಸಹಪಾಠಿಯ ಪಿಸ್ತೂಲಿನಿಂದ ಹಾರಿದ ಗುಂಡು, ಬಾಲಕಿಗೆ ಗಾಯ
Image Credit source: thesnipermind.com
Follow us on

ಕೋಚಿಂಗ್​ ಕೇಂದ್ರದಲ್ಲಿ ಸಹಪಾಠಿಯ ಪಿಸ್ತೂಲಿನಿಂದ ಗುಂಡು ಹಾರಿ ಬಾಲಕಿ ಗಾಯಗೊಂಡಿರುವ ಘಟನೆ ಮುಜಾಫರ್​ಪುರದಲ್ಲಿ ನಡೆದಿದೆ. ಆಕೆಯ ಸ್ಥಿತಿ ಸ್ಥಿರವಾಗಿದೆ, ಮುಜಾಫರ್‌ಪುರದ ಸಕ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ನಂತರ, ಬಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ, ಪೋಷಕರು ಮತ್ತು ಸ್ಥಳೀಯರ ದೊಡ್ಡ ಗುಂಪು ಕೇಂದ್ರದೆದುರು ಪ್ರತಿಭಟನೆ ನಡೆಸಿತು.

ಕೋಚಿಂಗ್ ಸೆಂಟರ್‌ನ ಮಾಲೀಕ ಮುಖೇಶ್ ಕುಮಾರ್ ಅವರ ಪ್ರಕಾರ, 16 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದ 12 ನೇ ತರಗತಿಯ ಇಂಗ್ಲಿಷ್ ತರಗತಿಯಲ್ಲಿ ಈ ಘಟನೆ ಸಂಭವಿಸಿದೆ. ಮೊದಲಿಗೆ ಗುಂಡು ಹಾರಿದ್ದು ಆಕೆಗೆ ತಿಳಿದಿರಲಿಲ್ಲ, ರಕ್ತಸ್ರಾವವಾಗಲು ಪ್ರಾರಂಭವಾದಾಗ ಆಕೆ ಗಾಯಗೊಂಡಿದ್ದಾಳೆಂದು ಅರಿತುಕೊಂಡಿದ್ದಾಳೆ. ಆಕೆ ಮನೆಯವರಿಗೆ ಕರೆ ಮಾಡಿದ ಕೂಡಲೇ ಬಂದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಕೆ ಸಹಪಾಠಿ ತನ್ನ ಬಳಿ ಇರುವ ಪಿಸ್ತೂಲ್​ನ್ನು ಆಕೆಗೆ ತೋರಿಸುತ್ತಿದ್ದಾಗ ಘಟನೆ ನಡೆದಿದೆ. ಅವರ ನಡುವೆ ಮೊದಲು ಯಾವುದೇ ಸಂಘರ್ಷ ಇರಲಿಲ್ಲ. ಆರೋಪಿಯ ವಿರುದ್ಧ ಕೊಲೆ ಯತ್ನ ಹಾಗೂ ಅಕ್ರಮವಾಗಿ ಬಂದೂಕು ಹೊಂದಿದ್ದ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಘಟನಾ ಸ್ಥಳದ ತನಿಖೆಗೆ ಎಫ್‌ಎಸ್‌ಎಲ್ ತಂಡವನ್ನೂ ಕಳುಹಿಸಲಾಗಿದೆ.

ಮತ್ತಷ್ಟು ಓದಿ:
Crime News: ಪ್ರೇಮ ಸಮಸ್ಯೆಯಿಂದ 17 ವರ್ಷದ ಯುವತಿ ಮೇಲೆ ಯುವಕನಿಂದ ಗುಂಡಿನ ದಾಳಿ

ಜುಲೈ 31 ರಂದು ನಡೆದ ಇದೇ ರೀತಿಯ ಘಟನೆಯಲ್ಲಿ, ಸುಪೌಲ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಐದು ವರ್ಷದ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಗುಂಡು ಹಾರಿಸಿದ ಪರಿಣಾಮ ಎಂಟು ವರ್ಷದ ಬಾಲಕ ಗಾಯಗೊಂಡಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ