ಮುಂಬೈ, ನವೆಂಬರ್ 28: ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಗುರುವಾರ (ನವೆಂಬರ್ 27) ಐಜಿಬಿಸಿ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶಗಳ ಗಣ್ಯರು ಭಾಗವಹಿಸಿದ್ದರು. ಇದರಲ್ಲಿ ಮೈ ಹೋಮ್ ಗ್ರೂಪ್ ಕನ್‌ಸ್ಟ್ರಕ್ಷನ್ ವಿವಿಧ ವಿಭಾಗಗಳಲ್ಲಿ ಒಟ್ಟು 4 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮೈ ಹೋಮ್ ಗ್ರೂಪ್‌ನ (My Home Groups) ಸುಸ್ಥಿರ ನಿರ್ಮಾಣ ಪದ್ಧತಿಗಳು, ಪರಿಸರ ಸ್ನೇಹಿ ಯೋಜನೆಗಳು ಮತ್ತು ಹೊಸ ತಂತ್ರಜ್ಞಾನಗಳ ಬಳಕೆಯನ್ನು ಗುರುತಿಸಿ ಭಾರತೀಯ ಹಸಿರು ಕಟ್ಟಡ ಮಂಡಳಿ (ಐಜಿಬಿಸಿ) ಪ್ರತಿನಿಧಿಗಳು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಐಜಿಬಿಸಿ ಸ್ಥಾಪಕ ಸದಸ್ಯರು ಆಯೋಜಿಸಿದ್ದ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್‌ನಲ್ಲಿ ಮೈ ಹೋಮ್ ಗ್ರೂಪ್ಸ್ ಕನ್ಸ್ಟ್ರಕ್ಷನ್ ವಿವಿಧ ವಿಭಾಗಗಳಲ್ಲಿ 4 ಪ್ರಶಸ್ತಿಗಳನ್ನು ಪಡೆದುಕೊಂಡಿತು. ಈ ಕಾರ್ಯಕ್ರಮದಲ್ಲಿ ಮೈ ಹೋಮ್ ಗ್ರೂಪ್ಸ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಲಾಯಿತು. ಮೈ ಹೋಮ್ ಗ್ರೂಪ್ಸ್ ಹಲವಾರು ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಪ್ರದರ್ಶಿಸುತ್ತಿದೆ.
ಇದನ್ನೂ ಓದಿ: My Home Group: ಹೈದ್ರಾಬಾದ್ ಮೈ ಹೋಮ್ ಗ್ರೂಪ್ ಸಂಸ್ಥೆಗೆ ಗ್ರೀನ್ ಸಮ್ಮಿಟ್ ಪ್ರಶಸ್ತಿ
ಎರಡು ವಾಣಿಜ್ಯ ಯೋಜನೆಗಳಾದ ಮೈ ಹೋಮ್ ಗ್ರಾವಾ ಬಿಸಿನೆಸ್ ಪಾರ್ಕ್ ಮತ್ತು ಮೈ ಹೋಮ್ ಟ್ವಿಟ್ಜಾ, ನೆಟ್ ಝೀರೋ ಪ್ರಮಾಣೀಕರಣಗಳನ್ನು ಪಡೆದಿವೆ. ಪ್ರಿಕಾಸ್ಟ್ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ಮೈ ಹೋಮ್ ಗ್ರಾವಾ ಬಿಸಿನೆಸ್ ಪಾರ್ಕ್, ನೆಟ್ ಝೀರೋ ವೇಸ್ಟ್ ಪ್ಲಾಟಿನಂ ರೇಟಿಂಗ್, ನೆಟ್ ಝೀರೋ ವಾಟರ್ ಪಾಸಿಟಿವ್ ಮತ್ತು ನೆಟ್ ಝೀರೋ ಎನರ್ಜಿ ಮನ್ನಣೆಗಳನ್ನು ಪಡೆದಿದೆ.
ಅದೇ ರೀತಿ, ಮೈ ಹೋಮ್ ಟ್ವಿಟ್ಜಾ ವಾಣಿಜ್ಯ ಘಟಕಗಳ ವಿಭಾಗದಲ್ಲಿ ನೆಟ್ ಝೀರೋ ವೇಸ್ಟ್ ಪ್ಲಾಟಿನಂ ರೇಟೆಡ್ ಪ್ರಶಸ್ತಿಯನ್ನು ಗೆದ್ದಿದೆ. ಈ ಪ್ರಶಸ್ತಿಗಳು ಮತ್ತೊಮ್ಮೆ ಮೈ ಹೋಮ್ ಗ್ರೂಪ್‌ನ ಸುಸ್ಥಿರ ಅಭಿವೃದ್ಧಿ ಮತ್ತು ಹಸಿರು ಕಟ್ಟಡ ಮಾನದಂಡಗಳಿಗೆ ಇರುವ ನಿರಂತರ ಬದ್ಧತೆಯನ್ನು ಪ್ರದರ್ಶಿಸುತ್ತವೆ.
ಇದನ್ನೂ ಓದಿ: GSS 2024: ಮೈ ಹೋಮ್ ಗ್ರೂಪ್ ಕನ್‌ಸ್ಟ್ರಕ್ಷನ್ ಉಪಾಧ್ಯಕ್ಷ ರಾಮು ರಾವ್ ಗೆ ಗ್ಲೋಬಲ್ ಸಸ್ಟೈನಬಿಲಿಟಿ ಲೀಡರ್ ಪ್ರಶಸ್ತಿ
ಈ ಕಾರ್ಯಕ್ರಮದಲ್ಲಿ, ಐಜಿಬಿಸಿ ಸ್ಥಾಪಕ ಸದಸ್ಯರು ಮೈ ಹೋಮ್ ಗ್ರೂಪ್ಸ್ ಕನ್ಸ್ಟ್ರಕ್ಷನ್ ಅನ್ನು ಗುರುತಿಸಿದರು. ನಿರ್ಮಾಣ ಉದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಗೌರವಿಸುತ್ತದೆ. ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್‌ನಲ್ಲಿ ಪ್ರಶಸ್ತಿ ಪಡೆಯುವುದನ್ನು ಅತ್ಯಂತ ಪ್ರತಿಷ್ಠಿತ ಸಂಗತಿಯೆಂದು ಪರಿಗಣಿಸಲಾಗಿದೆ.
ಈ ಪ್ರಶಸ್ತಿಗಾಗಿ ಹಲವು ಕಂಪನಿಗಳು ಪೈಪೋಟಿ ನಡೆಸುತ್ತವೆ. ಮೈ ಹೋಮ್ ಗ್ರೂಪ್ಸ್ ಈಗ ಒಟ್ಟು 4 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವ ಮೂಲಕ ರಾಷ್ಟ್ರವ್ಯಾಪಿ ಮೆಚ್ಚುಗೆಯನ್ನು ಗಳಿಸುತ್ತಿದೆ. ಮೈ ಹೋಮ್ ಗ್ರೂಪ್ಸ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು. ಇದು ಹೈದರಾಬಾದ್‌ನಲ್ಲಿ ಹಲವಾರು ದೊಡ್ಡ ವಸತಿ ಮತ್ತು ಕಮರ್ಷಿಯಲ್ ಯೋಜನೆಗಳನ್ನು ನಿರ್ಮಿಸಿದೆ. ಈ ಗುಂಪು ರಿಯಲ್ ಎಸ್ಟೇಟ್, ಸಿಮೆಂಟ್, ಇಂಧನ, ಔಷಧ, ಮಾಧ್ಯಮ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು 1981ರಲ್ಲಿ ಸ್ಥಾಪಿಸಲಾಯಿತು. ಮೈ ಹೋಮ್ ಗ್ರೂಪ್‌ನ ಅಧ್ಯಕ್ಷರು ರಾಮೇಶ್ವರ ರಾವ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Fri, 28 November 25