ಭಾರತದಲ್ಲಿ ಯುವ ಉದ್ಯಮಿಗಳಿಗೆ ಹಲವು ಅವಕಾಶಗಳಿವೆ; ಮೈ ಹೋಮ್ ಗ್ರೂಪ್ ಉಪಾಧ್ಯಕ್ಷ ರಾಮು ರಾವ್ ಜೂಪಲ್ಲಿ

"ವ್ಯಾಪಾರಿ ಕುಟುಂಬದಿಂದ ಬಂದವನಾಗಿ, ಇಂದಿನ ಭಾರತವು ನನ್ನ ತಂದೆಯ ಪೀಳಿಗೆಯ ಭಾರತದಂತೆ ಇಲ್ಲ ಎಂದು ನಾನು ನಿಮಗೆ ಹೇಳಬಲ್ಲೆ" ಎಂದು ರಾಮು ರಾವ್ ಶೃಂಗಸಭೆಯಲ್ಲಿ ಹೇಳಿದರು.

ಭಾರತದಲ್ಲಿ ಯುವ ಉದ್ಯಮಿಗಳಿಗೆ ಹಲವು ಅವಕಾಶಗಳಿವೆ; ಮೈ ಹೋಮ್ ಗ್ರೂಪ್ ಉಪಾಧ್ಯಕ್ಷ ರಾಮು ರಾವ್ ಜೂಪಲ್ಲಿ
ರಾಮು ರಾವ್
Follow us
ಸುಷ್ಮಾ ಚಕ್ರೆ
|

Updated on:Nov 22, 2024 | 12:55 AM

ನವದೆಹಲಿ: ಜರ್ಮನಿಯಲ್ಲಿ ನಡೆಯುತ್ತಿರುವ ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಭಾರತದ ವಾಣಿಜ್ಯೋದ್ಯಮ ಕ್ರಾಂತಿಯ ಕುರಿತು ಮೈ ಹೋಮ್ ಗ್ರೂಪ್ ಉಪಾಧ್ಯಕ್ಷ ರಾಮು ರಾವ್ ಜೂಪಲ್ಲಿ ಮಾತನಾಡಿದ್ದಾರೆ. ನ್ಯೂಸ್ 9 ಜಾಗತಿಕ ಶೃಂಗಸಭೆಯು ಇಂದು ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ಆರಂಭವಾಯಿತು. ಈ ಶೃಂಗಸಭೆ 3 ದಿನಗಳ ಕಾಲ ನಡೆಯಲಿದೆ. ಮೊದಲ ದಿನವಾದ ಇಂದು ಮಾತನಾಡಿದ ಮೈ ಹೋಮ್ ಕನ್‌ಸ್ಟ್ರಕ್ಷನ್‌ನ ಉಪಾಧ್ಯಕ್ಷ ರಾಮು ರಾವ್ ಜೂಪಲ್ಲಿ ಅವರು ಭಾರತಕ್ಕಾಗಿ ತಮ್ಮ ಉದ್ಯಮಶೀಲತೆಯ ಮಾರ್ಗಸೂಚಿಯ ಕುರಿತು ಮಾತನಾಡಿದರು. ಭಾರತದಲ್ಲಿ ಯುವ ಉದ್ಯಮಿಗಳಿಗೆ ಹಲವು ಅವಕಾಶಗಳಿವೆ ಎಂದರು.

‘ಭಾರತ ಮತ್ತು ಉದ್ಯಮಶೀಲತೆ: ನೆಕ್ಸ್ಟ್ ಜನ್’ ಕುರಿತು ಮಾತನಾಡಿದ ರಾಮು ರಾವ್, ತಮ್ಮ ತಂದೆ ರಾಮೇಶ್ವರ ರಾವ್ ಜುಪಲ್ಲಿ ಅವರು ಹೋಮಿಯೋಪತಿ ವೈದ್ಯರಾಗಿ ತಮ್ಮ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸಿದರು? ಅವರು ತಮ್ಮ ಕುಟುಂಬದಿಂದ ಯಾವುದೇ ಹಣಕಾಸಿನ ನೆರವು ಪಡೆಯದೆ ಈ ಪ್ರಯಾಣವನ್ನು ಹೇಗೆ ಪ್ರಾರಂಭಿಸಿದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. “ವ್ಯಾಪಾರಿ ಕುಟುಂಬದಿಂದ ಬಂದವನಾಗಿ, ಇಂದಿನ ಭಾರತವು ನನ್ನ ತಂದೆಯ ಪೀಳಿಗೆಯ ಭಾರತದಂತೆ ಇಲ್ಲ ಎಂದು ನಾನು ನಿಮಗೆ ಹೇಳಬಲ್ಲೆ” ಎಂದು ರಾಮು ರಾವ್ ಶೃಂಗಸಭೆಯಲ್ಲಿ ಹೇಳಿದರು.

ಇದನ್ನೂ ಓದಿ: News9 Global Summit: ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?; ಸಿಇಒ ಬರುಣ್ ದಾಸ್​ ಹೇಳಿದ್ದು ಹೀಗೆ

ರಾಮೇಶ್ವರ ರಾವ್ ಜೂಪಲ್ಲಿ ಜಮೀನಿನಲ್ಲಿ ಅವರ ಹೂಡಿಕೆಯು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮ ಉದ್ಯಮಶೀಲತೆಯ ಪ್ರಯಾಣಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಅವರು ವಿವರಿಸಿದರು. ನನ್ನ ತಂದೆಯ ಭಾರತದಲ್ಲಿನ ಪರಿಸ್ಥಿತಿಗಳಲ್ಲಿ ಸ್ಟಾರ್ಟ್ ಅಪ್ ಅಭಿವೃದ್ಧಿ ಹೊಂದುವುದು ಕಷ್ಟಕರವಾಗಿತ್ತು. ಆದರೆ ಇಂದು ಯುವಕರು ಸ್ಟಾರ್ಟ್‌ಅಪ್‌ನ ಕನಸು ಕಾಣುವುದು ಮತ್ತು ಅದನ್ನು ನಿರ್ಮಿಸುವುದು ತುಂಬಾ ಸುಲಭ ಎಂದು ರಾಮು ರಾವ್ ಹೇಳಿದ್ದಾರೆ.

ಜರ್ಮನಿಯಲ್ಲಿ ನ್ಯೂಸ್​9 ಶೃಂಗಸಭೆ:

3 ದಿನಗಳ ನ್ಯೂಸ್ 9 ಜಾಗತಿಕ ಶೃಂಗಸಭೆಯು ಜರ್ಮನಿಯ ಸ್ಟಟ್‌ಗಾರ್ಟ್ ನಗರದಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ನವೆಂಬರ್ 23ರವರೆಗೆ ನಡೆಯುವ ಬಹು ನಿರೀಕ್ಷಿತ ಶೃಂಗಸಭೆಯು ನೀತಿ ನಿರೂಪಕರು, ನವೋದ್ಯಮಿಗಳು, ಉದ್ಯಮದ ಪ್ರಮುಖರ ಜೊತೆ ಚರ್ಚಿಸಲು ವೇದಿಕೆ ಕಲ್ಪಿಸಲಿದೆ. ಐಕಾನಿಕ್ MHP ಅರೆನಾದಲ್ಲಿ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಮೆಗಾ ಶೃಂಗಸಭೆಯನ್ನು ಭಾರತದ ಪ್ರಮುಖ ಸುದ್ದಿವಾಹಿನಿ ಟಿವಿ9 ನೆಟ್‌ವರ್ಕ್, ಬುಂಡೆಸ್ಲಿಗಾದ ವಿಎಫ್‌ಬಿ ಸ್ಟಟ್‌ಗಾರ್ಟ್ ಸೇರಿ ಆಯೋಜಿಸಿವೆ. ಈ ಶೃಂಗಸಭೆಯ ವಿಷಯ “ಭಾರತ ಮತ್ತು ಜರ್ಮನಿ: ಸುಸ್ಥಿರ ಬೆಳವಣಿಗೆಗೆ ಮಾರ್ಗಸೂಚಿ” ಎಂಬುದಾಗಿದೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಸಾಂಪ್ರದಾಯಿಕ ಮಾಧ್ಯಮಗಳಿಗೆ ನ್ಯಾಯಯುತ ಪರಿಹಾರ ನೀಡಬೇಕು; ಅಶ್ವಿನಿ ವೈಷ್ಣವ್

News9 ಗ್ಲೋಬಲ್ ಶೃಂಗಸಭೆಯು ಸುಸ್ಥಿರ ಬೆಳವಣಿಗೆ ಮತ್ತು ಹಂಚಿಕೆಯ ಸಮೃದ್ಧಿಗಾಗಿ ಮಾರ್ಗಸೂಚಿಯನ್ನು ರೂಪಿಸಲು ಪ್ರಮುಖ ನಾಯಕರು, ನೀತಿ ನಿರೂಪಕರು, ಚಿಂತಕರನ್ನು ಒಟ್ಟುಗೂಡಿಸುತ್ತಿದೆ. ಈ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಮುಖ್ಯ ಭಾಷಣ ಮಾಡಲಿದ್ದಾರೆ. ಶೃಂಗಸಭೆಯಲ್ಲಿ ಭಾರತ ಮತ್ತು ಜರ್ಮನಿಗಳು ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಆವಿಷ್ಕಾರಗಳಲ್ಲಿ ದೀರ್ಘಾವಧಿಯ ಆರ್ಥಿಕ ಬೆಳವಣಿಗೆಗೆ ತಮ್ಮ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಚರ್ಚಿಸಲಾಗುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 am, Fri, 22 November 24

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ