AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

News9 Global Summit: ಶತಮಾನಗಳ ಬಳಿಕ ಭಾರತವು ಜಾಗತಿಕ ರಂಗಕ್ಕೆ ಧುಮುಕಿದೆ: ಜ್ಯೋತಿರಾದಿತ್ಯ ಸಿಂದಿಯಾ

Jyotiraditya Scindia speaks at News9 Global Summit 2024: ಜರ್ಮನಿಯಲ್ಲಿ ನ್ಯೂಸ್9 ವಾಹಿನಿಯಿಂದ ಗ್ಲೋಬಲ್ ಸಮಿಟ್ ಕಾರ್ಯಕ್ರಮ ಆಯೋಜನೆ ಮಾಡಿರುವುದನ್ನು ಸಚಿವರು ಪ್ರಶಂಸಿಸಿದರು. ಇದೊಂದು ಮಾಧ್ಯಮ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು. ಭಾರತ ಮಾತ್ರವಲ್ಲ, ವಿಶ್ವದ ಯಾವುದೇ ಮಾಧ್ಯಮವೂ ಇಂಥದ್ದೊಂದು ಉನ್ನತ ಮಟ್ಟದ ಜಾಗತಿಕ ಸಮಿಟ್ ಅನ್ನು ಆಯೋಜನೆ ಮಾಡಿದ್ದು ಇದೇ ಮೊದಲು ಎಂದು ಜ್ಯೋತಿರಾದಿತ್ಯ ಸಿಂದಿಯಾ ಹೇಳಿದರು.

News9 Global Summit: ಶತಮಾನಗಳ ಬಳಿಕ ಭಾರತವು ಜಾಗತಿಕ ರಂಗಕ್ಕೆ ಧುಮುಕಿದೆ: ಜ್ಯೋತಿರಾದಿತ್ಯ ಸಿಂದಿಯಾ
ಜ್ಯೋತಿರಾದಿತ್ಯ ಸಿಂದಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 21, 2024 | 11:56 PM

Share

ನವದೆಹಲಿ, ನವೆಂಬರ್ 21: ಭಾರತ ಕಳೆದ ಕೆಲ ವರ್ಷಗಳಿಂದ ಮೈಕೊಡವಿ ಮೇಲೇಳುತ್ತಿದೆ. ಶತಮಾನಗಳ ಬಳಿಕ ದೇಶವು ಈಗ ಜಾಗತಿಕ ರಂಗದ ಮುನ್ನೆಲೆಗೆ ಬಂದಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ. ಜರ್ಮನಿಯ ಸ್ಟುಟ್​ಗಾಟ್​ನ ಎಂಎಚ್​ಪಿ ಅರೇನಾದಲ್ಲಿ ಇಂದು ಆರಂಭಗೊಂಡಿರುವ ಮೂರು ದಿನಗಳ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಸಿಂದಿಯಾ ಮಾತನಾಡುತ್ತಿದ್ದರು. ನ್ಯೂಸ್9 ವಾಹಿನಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದನ್ನು ಸಚಿವರು ಪ್ರಶಂಸಿಸಿದರು. ಇದೊಂದು ಮಾಧ್ಯಮ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು.

ಭಾರತ ಮಾತ್ರವಲ್ಲ, ವಿಶ್ವದ ಯಾವುದೇ ಮಾಧ್ಯಮವೂ ಇಂಥದ್ದೊಂದು ಉನ್ನತ ಮಟ್ಟದ ಜಾಗತಿಕ ಸಮಿಟ್ ಅನ್ನು ಆಯೋಜನೆ ಮಾಡಿದ್ದು ಇದೇ ಮೊದಲು ಎಂದು ಜ್ಯೋತಿರಾದಿತ್ಯ ಸಿಂದಿಯಾ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಸ್ಥಿರ ಅಭಿವೃದ್ಧಿಯ ಹಾದಿ ವಿಚಾರದ ಬಗ್ಗೆ ಸಚಿವರು ಮಾತನಾಡಿದರು. ಸುಸ್ಥಿರತೆ ಸಾಧನೆಯ ಹಾದಿಯಲ್ಲಿ ಭಾರತದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. ಹಸಿರು ಇಂಧನ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬರುತ್ತಿರುವುದನ್ನು ತಿಳಿಸಿದರು. ಪ್ಯಾರಿಸ್ ಅಗ್ರೀಮೆಂಟ್ ಆಶಯದಂತೆ ಡೀಕಾರ್ಬನೈಸೇಶನ್ ಕಾರ್ಯದಲ್ಲಿ ಭಾರತ ಯಶಸ್ಸು ಗಳಿಸಿರುವುದನ್ನು ವಿವರಿಸಿದರು.

ಇದನ್ನೂ ಓದಿ: ನ್ಯೂಸ್9 ಗ್ಲೋಬಲ್ ಸಮಿಟ್​ನಲ್ಲಿ ಭಾರತದ ಬೆಳವಣಿಗೆಯ ಹಾದಿ ತೆರೆದಿಟ್ಟ ಸಚಿವ ಎ ವೈಷ್ಣವ್

ಸರ್ಕಾರದ ಇನ್ನಷ್ಟು ಸಾಧನೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟ ಜ್ಯೋತಿರಾದಿತ್ಯ ಸಿಂದಿಯಾ, ಪಿಎಂ ಇಂಟರ್ನ್​ಶಿಪ್ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸಿದರು.

ನವೆಂಬರ್ 21ರಿಂದ 23ರವರೆಗೆ ಜರ್ಮನಿಯ ಸ್ಟುಟ್​ಗಾರ್ಟ್​ನಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ನಡೆಯಲಿದೆ. ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, ಕಾರ್ಯಕ್ರಮದ ಸಹ ಆಯೋಜಕರಾದ ವಿಎಫ್​ಬಿ ಸ್ಟುಟ್​ಗಾರ್ಟ್​ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಮೊದಲಾದವರು ಮಾತನಾಡಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತ ದೇಶ ಕಳೆದ 10 ವರ್ಷದಲ್ಲಿ ಸಾಧಿಸಿದ ಕಾರ್ಯಗಳ ವಿವರ ನೀಡಿದರು. ಹ್ಯಾಪಿ ಹೋಮ್ ಸಂಸ್ಥೆಯ ರಾಮುರಾವ್ ಜುಪಲ್ಲಿ ಕೂಡ ಮಾತನಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:38 pm, Thu, 21 November 24

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು