My India My Life Goal: ಅಂದು ಬ್ರಿಟಿಷರು ಮಾಡಿದ ಆ ದೊಡ್ಡ ಪ್ರಮಾದಕ್ಕೆ ಇಂದು ಪರಿಸರ ನಾಶವಾಗುತ್ತಿದೆ: ಟಿವಿ9 ಡಿಜಿಟಲ್​​ನಲ್ಲಿ ಚರ್ಚೆ

| Updated By: ಡಾ. ಭಾಸ್ಕರ ಹೆಗಡೆ

Updated on: Aug 07, 2023 | 12:56 PM

ಟಿವಿ 9, ಪ್ರಕೃತಿಯ ಬಗ್ಗೆ ಕಾಳಜಿ ಚರ್ಚೆ ನಡೆಸಿದ್ದು ಆ ಮೂಲಕ ವೆಬಿನಾರ್​​ಗಳು, ಸಂಭಾಷಣೆಗಳ ಸರಣಿಯನ್ನು ನಡೆಸುತ್ತಿದೆ, ಡಿಜಿಟಲ್ ಚರ್ಚೆಯಲ್ಲಿ ನಾಲ್ಕು ಅತಿಥಿಗಳ ಭಾಗವಹಿಸಿದ್ದು, ಪರಿಸರ ರಕ್ಷಣೆ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

My India My Life Goal: ಅಂದು ಬ್ರಿಟಿಷರು ಮಾಡಿದ ಆ ದೊಡ್ಡ ಪ್ರಮಾದಕ್ಕೆ ಇಂದು ಪರಿಸರ ನಾಶವಾಗುತ್ತಿದೆ: ಟಿವಿ9 ಡಿಜಿಟಲ್​​ನಲ್ಲಿ ಚರ್ಚೆ
ಟಿವಿ9
Follow us on

ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಈ ಬಾರಿಯ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮೈ ಲೈಫ್ ಮೈ ಗೋಲ್’ (My India My Life Goal) ಎಂಬ ವಿಶೇಷ ಅಭಿಯಾನವನ್ನು ಜಾರಿಗೊಳಿಸಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಟಿವಿ 9 ಸಂಸ್ಥೆ ಕೂಡ ಕೈ ಜೋಡಿಸಿದೆ. ಅಲ್ಲದೆ ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಸೆಲಿಬ್ರಿಟಿಗಳು ಸಾಥ್ ನೀಡಿದ್ದರು. ಟಿವಿ 9 ನೆಟ್​ವರ್ಕ್​​ ಪ್ರಕೃತಿ ಕಾಳಜಿ ಬಗ್ಗೆ ಚರ್ಚೆ ನಡೆಸಿದ್ದು, ಆ ಮೂಲಕ ವೆಬಿನಾರ್​​ಗಳು ಸಂಭಾಷಣೆ ಸರಣಿಯನ್ನು ನಡೆಸುತ್ತಿದೆ. ಈ ಡಿಜಿಟಲ್ ಚರ್ಚೆಯಲ್ಲಿ ನಾಲ್ಕು ಅತಿಥಿಗಳ ಭಾಗವಹಿಸಿದ್ದು, ಪರಿಸರ ರಕ್ಷಣೆ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಟಿವಿ9 ನೆಟ್​​ವರ್ಕ್​​ನ ಎಲ್ಲ ಯೂಟ್ಯೂಬ್​​ನಲ್ಲೂ ಹಂಚಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಮೊದಲಿಗೆ ಸಂಸ್ಕೃತಿ ಸಚಿವಾಲಯದ, ಎಕೆಎಎಂ ವಿಭಾಗದ ನಿರ್ದೇಶಕರಾದ ಪ್ರಿಯಾಂಕಾ ಚಂದ್ರ ಮಾತನಾಡಿ “ನಾವು ಪ್ರತಿಯೊಂದು ವಿಷಯದಲ್ಲಿಯೂ ಪ್ರಕೃತಿಯ ಜೊತೆ ಸಂಬಂಧ ಹೊಂದಿದ್ದೇವೆ. ನದಿಯನ್ನು ಪೂಜಿಸುತ್ತೇವೆ, ಜೊತೆಗೆ ನಾವು ಆಚರಿಸುವ ಹಬ್ಬಗಳೆಲ್ಲವೂ ಪ್ರಕೃತಿ ಜೊತೆ ಸಂಬಂಧ ಹೊಂದಿದೆ. ನಿಮಗೆ ತಿಳಿದಿರಬಹುದು, ಕೊನೆಯ, ಒಂದೂವರೆ ವರ್ಷದಲ್ಲಿ ಲೈಫ್ ಕ್ಯಾಂಪೇನ್ ಅಡಿಯಲ್ಲಿ, ನಾವು ಶಾಲೆ, ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ನೀರು ಉಳಿತಾಯದ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂದರು. ಅಲ್ಲದೆ ಆಧುನೀಕರಣ ಮತ್ತು ನಗರೀಕರಣವು ಸಾಂಪ್ರದಾಯಿಕತೆಯ ಮೇಲೆ ಪರಿಣಾಮ ಬೀರಿದೆ, ವಿಶೇಷವಾಗಿ ಪ್ಲಾಸ್ಟಿಕ್, ಹಾಗಾಗಿ ನಾವು ಲೈಫ್ ಮಿಷನ್ ಅಡಿಯಲ್ಲಿ ಕೆಲವು ಅಭಿಯಾನಗಳು, ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ” ಎಂದರು.

ಇನ್ನು ಗಂಗಾ ನದಿಯ ಸ್ಥಾಪಕ ಮುಖ್ಯಸ್ಥ, ಬೇಸಿನ್ ಮ್ಯಾನೇಜ್ಮೆಂಟ್ ಮತ್ತು ಸ್ಟಡೀಸ್ ನ ಡಾ. ವಿನೋದ್ ತಾರೇ ಮಾತನಾಡಿ, “ನಮ್ಮ ಪ್ರಕೃತಿ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜೀವನಶೈಲಿಯ ಒಂದು ಭಾಗವಾಗಿದೆ. ಆದರೆ ನಿಧಾನವಾಗಿ, ನಾವು ಅದರ ಮೌಲ್ಯವನ್ನು ಮರೆತುಬಿಟ್ಟಿದ್ದೇವೆ. ಕಳೆದ 50, 60 ವರ್ಷಗಳಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ, ನಾವು ಕಲಿತಿರುವುದೇನು? ಪ್ರಗತಿ ಏನು ಎಂಬುದನ್ನು ನೀವೇ ಯೋಚಿಸಿ. ಸಹಜವಾಗಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಬೇಕು, ಆದರೆ ನಮ್ಮ ಸಾಂಪ್ರದಾಯಿಕ ಜ್ಞಾನ, ಪ್ರಾಚೀನ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಮರೆತುಬಿಡಬಾರದು. ಹಿಂದೂ ಧರ್ಮದ ದೇವಾನು, ದೇವತೆಗಳ ವಾಹನಗಳಾಗಿ ಕೆಲವು ಪ್ರಾಣಿಗಳಿವೆ, ಅದು ಆನೆ, ಸಿಂಹ ಯಾವುದೇ ಆಗಿರಲಿ. ನಾವು ಅವರನ್ನು ಪೂಜಿಸಿದರೆ, ನಿಸ್ಸಂಶಯವಾಗಿ ನಾವು ಆ ಪ್ರಾಣಿಗಳನ್ನು ರಕ್ಷಿಸುತ್ತೇವೆ, ಅಲ್ಲವೇ?” ಎಂದು ಹೇಳಿದ್ದಾರೆ.

ಇದನ್ನೂ ಓದಿ: 8 ಸಾವಿರಕ್ಕೂ ಅಧಿಕ ಸಸಿನೆಟ್ಟು ಪೋಷಿಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಮಗೆಲ್ಲ ಸ್ಫೂರ್ತಿ 

ಈ ಕಾರ್ಯಕ್ರಮದಲ್ಲಿ “ಪ್ರಕೃತಿಯ ಬಗ್ಗೆ ಇತಿಹಾಸದಲ್ಲಿ ದಾಖಲಾದ ಹಲವು ಮಾಹಿತಿ ಗಳನ್ನು ಹಂಚಿಕೊಂಡ ಡಾ. ಪ್ರೊ. ಯುತಿಕಾ ಮಿಶ್ರಾ, ಮಾತನಾಡಿ ಈ ಆಧುನೀಕರಣ, ವಾಣಿಜ್ಯೀಕರಣ, ಎಲ್ಲಿಂದ ಬಂತು? 50 ವರ್ಷಗಳಿಗಿಂತ ಹೆಚ್ಚು, ಬ್ರಿಟಿಷರು, ಭಾರತೀಯ ನಮ್ಮ ಸಂಪನ್ಮೂಲಗಳೊಂದಿಗೆ ಸಂವಹನ ನಡೆಸಿದರು, ಇದರಿಂದ ಕಾಡಿಗೆ ದೊಡ್ಡ ಹೊಡೆತ ಬಿದ್ದಿತು, 1865 ರಲ್ಲಿ, ಅವರು ರಚಿಸಿದ ಮೊದಲ ಭಾರತೀಯ ಅರಣ್ಯ ಕಾಯ್ದೆ ಅದು ಭಾರತೀಯ ಅರಣ್ಯಗಳು ಮತ್ತು ಭಾರತೀಯ ಸಂಪನ್ಮೂಲಗಳನ್ನು ನಿಯಂತ್ರಿಸುವುದು ಮತ್ತು ನಿಯಮಗಳನ್ನು ರೂಪಿಸುವುದು ಅವರ ಉದ್ದೇಶವಾಗಿತ್ತು. ಇದು ಬುಡಕಟ್ಟು ಜನಾಂಗಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಬಳಿಕ ಬುಡಕಟ್ಟು ಜನರು ಕಾಡುಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲಾಯಿತು. ಆದರೆ ಅವರು ನಮ್ಮಂತಲ್ಲ ಕಾಡಿನೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದರು. ಮೀಸಲು ಅರಣ್ಯಗಳ ಪರಿಕಲ್ಪನೆ ಹೇಗೆಂದರೆ “ನೀನು ಹೋಗಲು ಸಾಧ್ಯವಿಲ್ಲ, ನಾವು ಮಾತ್ರ ಹೋಗಬಹುದು” ಎಂಬುದಾಗಿತ್ತು. ಬ್ರಿಟಿಷರು ಮಾಡಿದ ಮತ್ತೊಂದು ದೊಡ್ಡ ಪ್ರಮಾದ ಕೈಗಾರಿಕೀಕರಣದ ಪ್ರಾರಂಭ, ಆ ವಸಾಹತುಶಾಹಿ ನೀತಿ ಎಷ್ಟು ಶೋಷಕವಾಗಿತ್ತೆಂದರೆ, ಹೇಳಲಾಗದು ಎಂದು ಇತಿಹಾಸ ಪುಟಗಳನ್ನು ತೆರೆದಿಡುತ್ತಾ ವಸಾಹತುಶಾಹಿಗೆ ಮುಂಚಿನ ದಿನಗಳಲ್ಲಿ ನಾವು ಹೇಗಿದ್ದೇವೋ ಅದೇ ಸ್ಥಿತಿಗೆ ಹಿಂತಿರುಗೋಣ” ಎಂದಿದ್ದಾರೆ.

ಬಳಿಕ ಮಾತನಾಡಿದ ಲೇಖಕ, ಟೆಡ್ ಸ್ಪೀಕರ್ ಶಂತನು ಗುಪ್ತಾ, ಬ್ರಿಟನ್​​ನ ಪ್ರಧಾನಿಯಾಗಿದ್ದಾಗ “ಬೋರಿಸ್ ಜಾನ್ಸನ್ ಅವರು ಪ್ರಧಾನಿ ಮೋದಿಯನ್ನು ಮತ್ತು ಸುವಿಚಾರದ ನಾಯಕತ್ವದ ಬಗ್ಗೆ ಒಳ್ಳೆಯದನ್ನೇ ಮಾತುಗಳನ್ನಾಡಿದ್ದರು, ಅಲ್ಲದೆ ಈ 9 ವರ್ಷಗಳಲ್ಲಿ ನಾವು ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಅದರಲ್ಲಿ ಗ್ಯಾಸ್ ಸಬ್ಸಿಡಿಯೂ ಒಂದು. ಏಕೆಂದರೆ 3 ಭಾರಿ ಕಟ್ಟಿಗೆ ಉರಿಸಿ ಒಲೆಯಲ್ಲಿ ಅಡುಗೆ ಮಾಡುವುದು ಒಂದೇ 100 ಸಿಗರೆಟ್​​ಗಳನ್ನೂ ಸೇದುವುದು ಒಂದೇ. ಈಗ ಲಕ್ಷಾಂತರ ಜನರು ಕಟ್ಟಿಗೆ ಬಿಟ್ಟು ಗ್ಯಾಸ್ ಅನ್ನು ಆರಿಸಿಕೊಂಡಿದ್ದಾರೆ. ಅಲ್ಲದೆ ನಾವು 8 ತಿಂಗಳ ಹಿಂದೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಲಿಲ್ಲ ಆದರೆ ಈಗ ಎಲ್ಲ ಕಡೆಗಳಲ್ಲೂ ಈ ಆಯ್ಕೆ ಇದೆ. ನಾವು ಹಿಂದೆ ಇದ್ದ ಜೀವನ ಶೈಲಿಗೆ ಹೋಗುತ್ತೇವೋ ಇಲ್ಲವೋ ಗೊತ್ತಿಲ್ಲ ಆದರೆ ಈಗಿರುವ ತಂತ್ರಜ್ಞಾನ ನಮಗೆ ಸಹಾಯ ಮಾಡಲಿದೆ. ನಾವು ತಿಳಿದವರಾಗಿ ಪರಿಸರಕ್ಕೆ ಏನು ಒಳ್ಳೆಯದು ಎಂಬುದನ್ನು ನೋಡಿ ನಡೆಯಬೇಕು. ಆಗಲೇ ನಮ್ಮ ಮಕ್ಕಳು ಅದನ್ನು ಅನುಸರಿಸುತ್ತಾರೆ ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Fri, 28 July 23