AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

My India My Life Goal: 8 ಸಾವಿರಕ್ಕೂ ಅಧಿಕ ಸಸಿನೆಟ್ಟು ಪೋಷಿಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಮಗೆಲ್ಲ ಸ್ಫೂರ್ತಿ

ಮರಗಿಡಗಳೇ ಅವರ ಮಕ್ಕಳು. ಸುಮಾರು 8 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ತನ್ನ ಮಕ್ಕಳಂತೆ ಪೋಷಿಸಿ, ಪರಿಸರದ ಉಳಿವಿಗೆ ಮಾದರಿ ವ್ಯಕ್ತಿತ್ವವಾಗಿ ನಿಂತಿರುವ ನಮ್ಮ ಕರ್ನಾಟಕದ ಹೆಮ್ಮೆ ಸಾಲುಮರದ ತಿಮ್ಮಕ್ಕನವರ ಸ್ಫೂರ್ತಿದಾಯಕ ಕಥೆಯನ್ನು ನೋಡೋಣ.

My India My Life Goal: 8 ಸಾವಿರಕ್ಕೂ ಅಧಿಕ ಸಸಿನೆಟ್ಟು ಪೋಷಿಸಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಮಗೆಲ್ಲ ಸ್ಫೂರ್ತಿ
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ
ಮಾಲಾಶ್ರೀ ಅಂಚನ್​
| Edited By: |

Updated on: Jul 22, 2023 | 2:01 PM

Share

ನಮ್ಮ ಮುಂದಿನ ಪೀಳಿಗೆಯು ಭೂಮಿಯಲ್ಲಿ ಸುರಕ್ಷಿತವಾಗಿ ಬದುಕಬೇಕೆಂದರೆ ಪರಿಸರವನ್ನು ಸಂರಕ್ಷಿಸುವುದು ತೀರಾ ಅನಿವಾರ್ಯವಾಗಿದೆ. ಏಕೆಂದರೆ ಇಂದು ಕಾಡುಗಳು ನಶಿಸಿ ಹೋಗುತ್ತಿದೆ. ನಶಿಸಿ ಹೋಗುತ್ತಿದೆ ಎನ್ನುವುದಕ್ಕಿಂತ ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡುಗಳ ವಿನಾಶ ಮಾಡುತ್ತಿದ್ದಾನೆ ಎಂದು ಹೇಳಬಹುದು. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಾಶ ಮಾಡುತ್ತಿದ್ದಾನೆ. ಮಾನವನ ಈ ಸ್ವಾರ್ಥ ಕಾರ್ಯದಿಂದ ಇಂದು ಬಹಳಷ್ಟು ಮರಗಿಡಗಳು ನಶಿಸಿಹೋಗಿವೆ. ಇದು ಹೀಗೆ ಮುಂದುವರೆದರೆ ಖಂಡಿತವಾಗಿಯೂ ನಮ್ಮ ಭೂಮಿ ಬರಿದಾಗಿಬಿಡುತ್ತದೆ. ಆದ್ದರಿಂದ ಮರಗಿಡಗಳ ರಕ್ಷಣೆಗಾಗಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾವು ಈ ಬಾರಿಯ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮೈ ಲೈಫ್ ಮೈ ಗೋಲ್’ ಎಂಬ ವಿಶೇಷ ಅಭಿಯಾನವನ್ನು ಜಾರಿಗೊಳಿಸಿತು. ಈ ಆಂದೋಲನದ ಮುಖ್ಯ ಗುರಿಯೆಂದರೆ ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಒಂದು ಭಾಗವಾಗುವಂತೆ ಪ್ರೇರೆಪಿಸುವುದು. ಈ ಅಭಿಯಾನದಲ್ಲಿ ಟಿವಿ9 ಕೂಡಾ ತನ್ನ ಸಹಭಾಗಿತ್ವವನ್ನು ವಹಿಸಿದ್ದು, ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಲು ಪುಟ್ಟ ಅಳಿಲು ಸೇವೆಯನ್ನು ಮಾಡಿ ಎಂದು ನಾವು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.

ಪರಿಸರ, ಮರಗಿಡಗಳು ಎಂದಾಕ್ಷಣ ನಮಗೆ ಮೊದಲಿಗೆ ನೆನಪಿಗೆ ಬರುವಂತಹದ್ದು, ಸಾಲುಮರದ ತಿಮ್ಮಕ್ಕನವರ ಹೆಸರು. ತಿಮ್ಮಕ್ಕನವರ ಪರಿಸರ ಪ್ರೇಮ ಎಂತಹವರಿಗೂ ಸ್ಪೂರ್ತಿ ನೀಡುವಂತಹದ್ದು. ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕನವರು ತಮ್ಮ ಪರಿಸರ ಕಾಯಕದಿಂದ ‘ಸಾಲುಮರದ ತಿಮ್ಮಕ್ಕ’ ಎಂದೇ ಹೆಸರಾದವರು. ಸುಮಾರು 112ರ ಪ್ರಾಯದ ತಿಮ್ಮಕ್ಕನವರು ಕಳೆದ 65 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವಂತಹ ಕಾರ್ಯದಲ್ಲಿ ತೊಡಗಿದ್ದಾರೆ. ಇವರು ಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ‘ವೃಕ್ಷ ಮಾತೆ’ ಎಂದು ಪ್ರಖ್ಯಾತಿ ಗಳಿಸಿದ್ದಾರೆ. ಅಂದು ಇವರು ಪ್ರೀತಿಯಿಂದ ಪೋಷಿಸಿ ನೆಟ್ಟ ಮರಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ಪರಿಸರದ ಉಳಿವಿಗಾಗಿ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2019 ರಲ್ಲಿ ತಿಮ್ಮಕ್ಕನವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ:  ಸಂತಾನವಿಲ್ಲದ ಕೊರಗನ್ನು ಸಸಿನೆಟ್ಟು ಫೋಷಿಸಿ ನೀಗಿಸಿಕೊಂಡ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಕನ್ನಡಿಗರ ಹೆಮ್ಮೆ!

ತಿಮ್ಮಕ್ಕನವರ ಗಿಡ ನೆಡುವ ಕಾಯಕ ಹೇಗೆ ಪ್ರಾರಂಭವಾಯಿತು:

ಪ್ರಸ್ತುತ 112 ವರ್ಷ ವಯಸ್ಸಿನವರಾಗಿರುವ ತಿಮ್ಮಕ್ಕನವರು ಕಳೆದ 65 ವರ್ಷಗಳಿಂದ ತಮ್ಮ ಜೀವನವನ್ನು ಗಿಡ ನೆಡುವುವ ನಿಸ್ವಾರ್ಥ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಮದುವೆಯಾದ ಬಳಿಕ ತಮಗೆ 40 ವರ್ಷ ವಯಸ್ಸಾದರೂ ಮಕ್ಕಳಾಗದ ಕಾರಣ ಸಮಾಜದಲ್ಲಿ ಜನರ ಚುಚ್ಚು ಮಾತಿನಿಂದ ಬೇಸತ್ತು ಹೋಗಿದ್ದರು. ಈ ನೋವನ್ನು ಮರೆಯಲು ತಿಮ್ಮಕ್ಕನವರು ತನ್ನ ಪತಿಯ ಸಹಕಾರದೊಂದಿದೆ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ಮೊದಲಿಗೆ ಅವರು ರಸ್ತೆಗಳ ಇಕ್ಕೆಳಗಳಲ್ಲೂ 10 ಆಲದ ಸಸಿಗಳನ್ನು ನೆಡುವ ಮೂಲಕ ಈ ಪುಣ್ಯದ ಕೆಲಸವನ್ನು ಆರಂಭಿಸಿದರು. ಹೀಗೆ ಗಿಡಗಳನ್ನು ನೆಡುತ್ತಾ ತಮ್ಮ ಮಕ್ಕಳಿಲ್ಲದ ಕೊರಗನ್ನು ನೀಗಿಸಿ, ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಪೋಷಿಸಿದರು. ಕಿಲೋ ಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ ತಾವು ನೆಟ್ಟ ಗಿಡಗಳಿಗೆ ನೀರು ಹಾಕಿ ಪೋಷಿಸುತ್ತಿದ್ದರು. ಅಂದಿನಿಂದ ಇಂದಿನವರೆಗೆ ಸುಮಾರು 8000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನಮಗೆಲ್ಲರಿಗೂ ಮಾದರಿ ವ್ಯಕ್ತಿತ್ವವಾಗಿ ನಿಂತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ