ಅನುಪಯೋಗಿ ಸಿಎಂ ನನ್ನ ಫೋನ್ ಟ್ಯಾಪ್​ ಮಾಡಿಸುತ್ತಿದ್ದಾರೆ, ದಿನಾ ಸಂಜೆ ಅವರು ರೆಕಾರ್ಡಿಂಗ್​ ಕೇಳುತ್ತಾರೆ: ಅಖಿಲೇಶ್​ ಯಾದವ್ ಆರೋಪ

| Updated By: Lakshmi Hegde

Updated on: Dec 19, 2021 | 5:22 PM

ಬಿಜೆಪಿ ಕೂಡ ಕಾಂಗ್ರೆಸ್​ನ ದಾರಿಯನ್ನೇ ಹಿಡಿಯುತ್ತಿದೆ. ಚುನಾವಣೆ ಹತ್ತಿರ ಬಂದ ತಕ್ಷಣ ಭಯಗೊಂಡು ಕೇಂದ್ರದ ತನಿಖಾ ದಳಗಳನ್ನು ಮುಂದೆ ಬಿಡುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಅನುಪಯೋಗಿ ಸಿಎಂ ನನ್ನ ಫೋನ್ ಟ್ಯಾಪ್​ ಮಾಡಿಸುತ್ತಿದ್ದಾರೆ, ದಿನಾ ಸಂಜೆ ಅವರು ರೆಕಾರ್ಡಿಂಗ್​ ಕೇಳುತ್ತಾರೆ: ಅಖಿಲೇಶ್​ ಯಾದವ್ ಆರೋಪ
ಅಖಿಲೇಶ್ ಯಾದವ್
Follow us on

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh CM Yogi Adityanath)​ ವಿರುದ್ಧ ಉತ್ತರಪ್ರದೇಶ ಸಮಾಜವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ನನ್ನ ಫೋನ್​ ಕದ್ದಾಲಿಸುತ್ತಿದ್ದಾರೆ. ನನ್ನ ಫೋನ್ ಟ್ಯಾಪ್​ ಆಗಿದೆ. ಪ್ರತಿದಿನ ಸಂಜೆ ನಾನು ಯಾರ ಬಳಿ ಮಾತನಾಡುತ್ತೇನೋ, ಅದೆಲ್ಲವನ್ನೂ ಕದ್ದಾಲಿಕೆ ಮಾಡುತ್ತಿದ್ದಾರೆ. ನನ್ನ ಕಚೇರಿಯ ಲ್ಯಾಂಡ್​ಲೈನ್​ಗಳು ಟ್ಯಾಪ್​ ಆಗಿವೆ ಎಂದು ಹೇಳಿದ್ದಾರೆ.  ಗಂಗಾ ಎಕ್ಸ್​ಪ್ರೆಸ್​ ವೇ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ರನ್ನು ಹೊಗಳಿದ್ದರು. ಯುಪಿ+ಯೋಗಿ=ಉಪಯೋಗಿ (UP+Yogi=Upayogi) ಎಂದು ಶ್ಲಾಘಿಸಿದ್ದರು. ಅದರ ಬೆನ್ನಲ್ಲೇ ತಿರುಗೇಟು ನೀಡಿದ ಅಖಿಲೇಶ್​ ಯಾದವ್​, ಯೋಗಿ ಆದಿತ್ಯನಾಥ್​ ಅವರು ಅನುಪಯೋಗಿ (ಯೂಸ್​ಲೆಸ್​​) ಎಂದು ಹೇಳಿದ್ದಾರೆ.

ಇನ್ನು ಅಖಿಲೇಶ್​ ಯಾದವ್​ ಆಪ್ತರ ಮನೆ ಮೇಲೆ ಐಟಿ ದಾಳಿಯಾಗಿದೆ. ಅದರ ಬೆನ್ನಲ್ಲೇ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದ ಅಖಿಲೇಶ್ ಯಾದವ್​, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಗೆ ಸೋಲುವ ಭಯ ಶುರುವಾಗಿದೆ. ಹೀಗಾಗಿ ಕೇಂದ್ರ ತನಿಖಾ ದಳಗಳ ಪ್ರಯೋಗ ಮಾಡಲು ಪ್ರಾರಂಭ ಮಾಡಿದೆ ಎಂದಿದ್ದರು. ಮತ್ತೆ ಇಂದು ಲಖನೌನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲೇಶ್ ಯಾದವ್, ನಮ್ಮೆಲ್ಲ ಫೋನ್​ಗಳೂ ಕದ್ದಾಲಿಕೆ ಆಗುತ್ತಿವೆ. ಸಮಾಜವಾದಿ ಪಕ್ಷದ ಕಚೇರಿಯಲ್ಲಿರುವ ಫೋನ್​ಗಳೂ, ನನ್ನೊಂದಿಗೆ ಇರುವ ಜನರ ಫೋನ್​ಗಳನ್ನೆಲ್ಲ ಟ್ಯಾಪ್ ಮಾಡಲಾಗಿದೆ. ಹೀಗೆ ರೆಕಾರ್ಡ್ ಆದ ಧ್ವನಿಮುದ್ರಿಕೆಗಳನ್ನು ಯೋಗಿ ಆದಿತ್ಯನಾಥ್​ ಪ್ರತಿದಿನ ಸಂಜೆ ಕೇಳುತ್ತಾರೆ. ಇದೊಂದು ಅನುಪಯುಕ್ತ ಸರ್ಕಾರ, ಯೂಸ್​ಲೆಸ್ ಮುಖ್ಯಮಂತ್ರಿ ಎಂದು ಹೇಳಿದರು.

ಇದೀಗ ಬಿಜೆಪಿಯೂ ಕೂಡ ಕಾಂಗ್ರೆಸ್​ನ ದಾರಿಯನ್ನೇ ಹಿಡಿಯುತ್ತಿದೆ. ಚುನಾವಣೆ ಹತ್ತಿರ ಬಂದ ತಕ್ಷಣ ಭಯಗೊಂಡು ಕೇಂದ್ರದ ತನಿಖಾ ದಳಗಳನ್ನು ಮುಂದೆ ಬಿಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ನಾನೀಗಲೇ ಹೇಳಬಲ್ಲೆ. ಇಲ್ಲಿನ ಜನರು ಒಂದು ಯೋಗ್ಯ ಸರ್ಕಾರ ತರಲು ಯೋಚಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ.  ಹಾಗೇ, ಈಗಿರುವ ಬಿಜೆಪಿ ಸರ್ಕಾರದಷ್ಟು ಅಯೋಗ್ಯ ಸರ್ಕಾರ ಇನ್ನೊಂದಿಲ್ಲ. ಇಡೀ ಉತ್ತರಪ್ರದೇಶವನ್ನು ಈ ಸರ್ಕಾರ ಹಾಳುಗೆಡವಿದೆ ಎಂದೂ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋಟಿ ರಾಮು ನಿರ್ಮಾಣದ ‘ಅರ್ಜುನ್​ ಗೌಡ’ ಪತ್ರಿಕಾಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published On - 5:22 pm, Sun, 19 December 21