AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ದಾರ್​ ವಲ್ಲಭಬಾಯಿ ಪಟೇಲ್​ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ, ಗೋವಾ ವಿಮೋಚನೆ ಮತ್ತೂ ಮೊದಲೇ ಆಗುತ್ತಿತ್ತು: ಪ್ರಧಾನಿ ಮೋದಿ

Goa Liberation Day 2021: ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್​​ರನ್ನು ನೆನಪಿಸಿಕೊಂಡು, ಪರೋಕ್ಷವಾಗಿ ವಿಳಂಬಕ್ಕೆ ನೆಹರೂ ಕಾರಣ ಎಂಬುದನ್ನು ಹೇಳಿದ್ದಾರೆ.  

ಸರ್ದಾರ್​ ವಲ್ಲಭಬಾಯಿ ಪಟೇಲ್​ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ, ಗೋವಾ ವಿಮೋಚನೆ ಮತ್ತೂ ಮೊದಲೇ ಆಗುತ್ತಿತ್ತು: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
TV9 Web
| Edited By: |

Updated on:Dec 19, 2021 | 7:24 PM

Share

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿದ್ದರೂ ಗೋವಾ ಪೋರ್ಚುಗೀಸರ ಹಿಡಿತದಿಂದ ಮುಕ್ತವಾಗಿದ್ದು 1961ರ ಡಿಸೆಂಬರ್​ 19ರಂದು. ಹೀಗಾಗಿ ಪ್ರತಿವರ್ಷ ಡಿಸೆಂಬರ್​ 19ನ್ನು ಗೋವಾ ವಿಮೋಚನಾ ದಿನವನ್ನಾಗಿ (Goa Liberation Day 2021) ಆಚರಿಸಲಾಗುತ್ತಿದೆ. ಇಂದು ನಡೆದ ಗೋವಾ ವಿಮೋಚನಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಾಲ್ಗೊಂಡು, ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಪುಷ್ಪಗೌರವ ಸಲ್ಲಿಸಿದರು. ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು,  ದೇಶದ ಮೊದಲ ಗೃಹಮಂತ್ರಿಯಾಗಿದ್ದ ಸರ್ದಾರ್​ ವಲ್ಲಭಬಾಯಿ ಪಟೇಲ್​ ಅವರು ಇನ್ನೂ ಸ್ವಲ್ಪ ಕಾಲ ಬದುಕಿದ್ದಿದ್ದರೆ, ಗೋವಾ ಮತ್ತಷ್ಟು ಬೇಗನೆ ಸ್ವಾತಂತ್ರ್ಯ ಪಡೆಯುತ್ತಿತ್ತು ಎಂದು ಹೇಳಿದರು. ಇನ್ನು ಸರ್ದಾರ್ ವಲ್ಲಭಬಾಯಿ ಪಟೇಲ್​ ಅವರು ನೆಹರೂ ಕ್ಯಾಬಿನೆಟ್​ನಲ್ಲಿ ಗೃಹಮಂತ್ರಿಯಾಗಿದ್ದವರು ಮತ್ತು ಉಪಪ್ರಧಾನಿಯೂ ಆಗಿದ್ದರು. ಮಹಾರಾಷ್ಟ್ರದ ಮರಾಠವಾಡ ಪ್ರದೇಶವನ್ನು ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆದರೆ ಗೋವಾ ವಿಮೋಚನೆಗೂ ಮುನ್ನ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೂರು ವರ್ಷಗಳ ನಂತರ 1950ರ ಡಿಸೆಂಬರ್​ 15ರಂದು ಮೃತಪಟ್ಟಿದ್ದಾರೆ. ನಂತರ ಗೋವಾ ವಿಮೋಚನೆ ವಿಳಂಬವಾಗಲು ಜವಾಹರ್​ಲಾಲ್​ ನೆಹರೂ ಕಾರಣ ಎಂದು ಈ ಹಿಂದೆಯೇ ಹಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇಂದು ಕೂಡ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್​​ರನ್ನು ನೆನಪಿಸಿಕೊಂಡು, ಪರೋಕ್ಷವಾಗಿ ವಿಳಂಬಕ್ಕೆ ನೆಹರೂ ಕಾರಣ ಎಂಬುದನ್ನು ಹೇಳಿದ್ದಾರೆ.  

ಡಾ. ಶ್ಯಾಮಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ಮಾತನಾಡಿದ ಅವರು, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಭಾರತದ ಜನರು ಆ  ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಗೋವಾ, ದಮನ್​ ಡಿಯು, ದಾದ್ರಾ ನಗರ, ಹವೇಲಿಗಳು ಇನ್ನೂ ಪೋರ್ಚುಗೀಸರ ಕೈಯಲ್ಲೇ ಇದ್ದವು. ಇಡೀ ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ಹಲವರು ಸ್ವಲ್ಪವೂ ತಡ ಮಾಡದೆ ಹೋಗಿ ಗೋವಾ ಸ್ವಾತಂತ್ರ್ಯ ಚಳವಳಿ ಸೇರಿಕೊಂಡರು ಎಂದು ಹಳೇ ದಿನಗಳನ್ನು ಮತ್ತು ಗೋವಾ ವಿಮೋಚನಾ ಹೋರಾಟವನ್ನು ನೆನಪಿಸಿಕೊಂಡರು.

ಇದೇ ವೇಳೆ ಪ್ರಧಾನಿ ಮೋದಿ ಗೋವಾ ಸರ್ಕಾರವನ್ನು ಹೊಗಳಿದರು. ವಿವಿಧ ಮಾನದಂಡಗಳಲ್ಲಿ ಗೋವಾ ಆಡಳಿತ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು. ತಲಾ ಆದಾಯ, ಶಾಲೆಗಳಲ್ಲಿ ಹೆಣ್ಣುಮಕ್ಕಳಿಗಾಗಿ ವಿಶೇಷ ಶೌಚಗೃಹ ವ್ಯವಸ್ಥೆ, ಪ್ರತಿ ಮನೆಯಲ್ಲೂ ನಲ್ಲಿ ನೀರು, ಮನೆಮನೆಯ ತ್ಯಾಜ್ಯ ಸಂಗ್ರಹಣೆ ಮತ್ತು ಆಹಾರ ಭದ್ರತೆ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಗೋವಾ ಸರ್ಕಾರ ಅತ್ಯುತ್ತಮ ಆಡಳಿತ ನೀಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇದೇ ವೇಳೆ ಅವರು ಗೋವಾದ ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್​ ಅವರನ್ನೂ ಸ್ಮರಿಸಿದರು. ಮನೋಹರ್ ಪರಿಕ್ಕರ್ ಅವರು ಗೋವಾದ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿದ್ದರು. ಇಲ್ಲಿನ ಜನರ ಕಲ್ಯಾಣಕ್ಕಾಗಿ ಅದನ್ನು ಸದ್ಬಳಕೆ ಮಾಡಿಕೊಂಡು ಪೋಷಿಸಿದರು ಎಂದು ಹೇಳಿದರು.

ಇದನ್ನೂ ಓದಿ: Goa Liberation Day 2021: ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ಮೋದಿ ಪುಷ್ಪನಮನ

Published On - 7:24 pm, Sun, 19 December 21

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ