ನನ್ನ ಉತ್ತರಾಧಿಕಾರಿಯನ್ನು ಈಗ ನೇಮಕ ಮಾಡುತ್ತಿಲ್ಲ, ಆದರೆ ಅವರು ದಲಿತ ಸಮುದಾಯದವರೇ ಆಗಿರುತ್ತಾರೆ: ಮಾಯಾವತಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 03, 2021 | 11:15 AM

Mayawati: ನಾನು ಇನ್ನೂ ಉತ್ತರಾಧಿಕಾರಿಯನ್ನು ನೇಮಿಸುವ ಅಗತ್ಯವಿಲ್ಲ. ಆದರೆ ಸಮಯ ಬಂದಾಗ ಮತ್ತು ನನ್ನ ಆರೋಗ್ಯ ಸರಿಯಿಲ್ಲದಿದ್ದಾಗ, ನಾನು ಖಂಡಿತವಾಗಿ ನನ್ನ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತೇನೆ. ಆ ವ್ಯಕ್ತಿ ದಲಿತ ಸಮುದಾಯದವರೇ ಆಗಿರುತ್ತಾರೆ

ನನ್ನ ಉತ್ತರಾಧಿಕಾರಿಯನ್ನು ಈಗ ನೇಮಕ ಮಾಡುತ್ತಿಲ್ಲ, ಆದರೆ ಅವರು ದಲಿತ ಸಮುದಾಯದವರೇ ಆಗಿರುತ್ತಾರೆ: ಮಾಯಾವತಿ
ಮಾಯಾವತಿ
Follow us on

ದೆಹಲಿ: ಬಿಎಸ್‌ಪಿ (BSP) ಮುಖ್ಯಸ್ಥೆ ಮಾಯಾವತಿ (Mayawati) ತಮ್ಮ ಉತ್ತರಾಧಿಕಾರಿಯನ್ನು ಶೀಘ್ರದಲ್ಲೇ ನೇಮಕ ಮಾಡಲು ಯೋಚಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ 65 ವರ್ಷದ ನಾಯಕಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥಳಾಗಿದ್ದೇನೆ. ನಾನೀಗ ಆರೋಗ್ಯವಾಗಿದ್ದರಿಂದ ತನ್ನ ಉತ್ತರಾಧಿಕಾರಿಯನ್ನು ನೇಮಿಸುವ ಅಗತ್ಯವಿಲ್ಲ ಎಂದು ಹೇಳಿದರು. ಆದಾಗ್ಯೂ, ಹಾಗೊಂದು ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬಂದರೆ ದಲಿತ ಸಮುದಾಯಕ್ಕೆ ಸೇರಿದವರನ್ನು ಮಾತ್ರ ನೇಮಕ ಮಾಡುವುದಾಗಿ ಹೇಳಿದರು.

ನಾನು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರ ಸಂದರ್ಶನವನ್ನು ಟಿವಿ ಚಾನೆಲ್‌ನಲ್ಲಿ ನೋಡುತ್ತಿದ್ದೆ. ಸಂದರ್ಶನದಲ್ಲಿ ನನ್ನ ಉತ್ತರಾಧಿಕಾರಿ ಯಾರೆಂದು ಅವರಲ್ಲಿ ಪದೇ ಪದೇ ಕೇಳಲಾಯಿತು. ಈ ಸಮಯದಲ್ಲಿ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಸಂದರ್ಶಕರಿಗೆ ತಿಳಿಸಲು ಬಯಸುತ್ತೇನೆ. ನಾನು ಇನ್ನೂ ಉತ್ತರಾಧಿಕಾರಿಯನ್ನು ನೇಮಿಸುವ ಅಗತ್ಯವಿಲ್ಲ. ಆದರೆ ಸಮಯ ಬಂದಾಗ ಮತ್ತು ನನ್ನ ಆರೋಗ್ಯ ಸರಿಯಿಲ್ಲದಿದ್ದಾಗ, ನಾನು ಖಂಡಿತವಾಗಿ ನನ್ನ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತೇನೆ. ಆ ವ್ಯಕ್ತಿ ದಲಿತ ಸಮುದಾಯದವರೇ ಆಗಿರುತ್ತಾರೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಲಕ್ನೋದಲ್ಲಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಿಎಸ್‌ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ನನ್ನನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದರು ಎಂದು ಮಾಯಾವತಿ ಹೇಳಿದರು.

ಕಾಂಗ್ರೆಸ್ ಪಕ್ಷದ ಕಿರುಪುಸ್ತಕದಲ್ಲಿ ತನ್ನನ್ನು “ದೌಲತ್ ಕಿ ಬೇಟಿ” (ಸಂಪತ್ತಿನ ಮಗಳು) ಎಂದು ವಿವರಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಟೀಕಿಸಿದ ಮಾಯಾವತಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಟೀಕಿಸಿದ್ದು “ಇದು ಕಿರುಪುಸ್ತಕವಾಗಲಿ ಅಥವಾ ನಾಟಕವಾಗಲಿ, ಅವರು (ಕಾಂಗ್ರೆಸ್) ಮಹಾತ್ಮ ಗಾಂಧಿಯವರ ಪ್ರತಿಮೆ ಕೆಳಗೆ ಬಂದು ಕುಳಿತುಕೊಳ್ಳುತ್ತಾರೆ. ಕೆಲವು ದೌರ್ಜನ್ಯ ನಡೆದಾಗ, ಅವರು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ನಾಟಕದಿಂದ ಏನೂ ಆಗುವುದಿಲ್ಲ ಏಕೆಂದರೆ ಜನರಿಗೆ ಎಲ್ಲವೂ ತಿಳಿದಿದೆ ಎಂದಿದ್ದಾರೆ.

ಇದನ್ನೂ ಓದಿ: ಕಷ್ಟಕಾಲದಲ್ಲಿ ನನ್ನ ಮತ್ತು ಪಕ್ಷದ ಜೊತೆಗೆ ನಿಂತ ದಲಿತ ನಾಯಕನೇ ಉತ್ತರಾಧಿಕಾರಿ: ಮಾಯಾವತಿ

ಇದನ್ನೂ ಓದಿ:  Coronavirus cases in India: ದೇಶದಲ್ಲಿ 45,352 ಹೊಸ ಕೊವಿಡ್ ಪ್ರಕರಣ, 4 ಲಕ್ಷ ಸಮೀಪಿಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ

(My Successor Will Be From Dalit community only says BSP chief Mayawati)