AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus cases in India: ದೇಶದಲ್ಲಿ 45,352 ಹೊಸ ಕೊವಿಡ್ ಪ್ರಕರಣ, 4 ಲಕ್ಷ ಸಮೀಪಿಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ

Covid 19: 34,791 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳು ಈಗ 3,99,778 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಶೇಕಡಾ 97.45 ರಷ್ಟಿದೆ.

Coronavirus cases in India: ದೇಶದಲ್ಲಿ 45,352 ಹೊಸ ಕೊವಿಡ್ ಪ್ರಕರಣ, 4 ಲಕ್ಷ ಸಮೀಪಿಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ
ಪ್ರಾತಿನಿಧಿಕ ಚಿತ್ರ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Sep 03, 2021 | 10:40 AM

Share

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 45,352 ಹೊಸ ಕೊರೊನಾವೈರಸ್ (Coronavirus) ಪ್ರಕರಣಗಳು ಮತ್ತು 366 ಸಾವುಗಳು ವರದಿಯಾಗಿವೆ. ಇದರೊಂದಿಗೆ ದೇಶದ ಒಟ್ಟಾರೆ ಕೊವಿಡ್ ಪ್ರಕರಣ 3,29,03,289 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,39,895 ಕ್ಕೆ ಏರಿದೆ. 34,791 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳು ಈಗ 3,99,778 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಶೇಕಡಾ 97.45 ರಷ್ಟಿದೆ.ಭಾರತದಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಸಾವುಗಳಲ್ಲಿ, ಕೇರಳವು ನಿನ್ನೆ 32,097 ಪ್ರಕರಣಗಳನ್ನು ಮತ್ತು 188 ಸಾವುಗಳನ್ನು ದಾಖಲಿಸಿದೆ.

ಹಬ್ಬದ ಸೀಸನ್‌ಗೆ ಮುಂಚಿತವಾಗಿ ಕೊರೊನಾವೈರಸ್ ಕಾಯಿಲೆಯ ವಿರುದ್ಧ ಹೋರಾಟ ಕಡಿಮೆ ಮಾಡದಂತೆ ಎಚ್ಚರಿಕೆ ನೀಡಿದ ಆರೋಗ್ಯ ಸಚಿವಾಲಯವು ಗುರುವಾರ ಜನರು ಮನೆಯಲ್ಲಿ ಹಬ್ಬಗಳನ್ನು ಆಚರಿಸಬೇಕು, ಕೊವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಮತ್ತು ತಮ್ಮ ಸರದಿ ಬಂದಾಗ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮ್ಯು ಹೆಸರಿನ ಹೊಸ ಕೊರೊನಾವೈರಸ್ ” ಕುತೂಹಲಕಾರಿ ರೂಪಾಂತರಿ” ಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಹೊಸ ರೂಪಾಂತರವು ಲಸಿಕೆಗಳಿಗೆ ಸಂಭವನೀಯ ಪ್ರತಿರೋಧದ ಲಕ್ಷಣಗಳನ್ನು ತೋರಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಹೊಸ ರೂಪಾಂತರವನ್ನು ಜನವರಿ 2021 ರಲ್ಲಿ ಕೊಲಂಬಿಯಾದಲ್ಲಿ ಮೊದಲು ಗುರುತಿಸಲಾಯಿತು. ಅಂದಿನಿಂದ ಪ್ರಕರಣಗಳು ದಕ್ಷಿಣ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಏರಿಕೆ ಆಗಿವೆ.

ಕೊರೊನಾವೈರಸ್ ನ ಹೊಸ, ಹೆಚ್ಚು ತೀವ್ರವಾದ ತಳಿ ಪತ್ತೆಯಾದ ನಂತರ, C.1.2, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಯುರೋಪ್, ಚೀನಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಚೀನಾ ಮತ್ತು ಮಧ್ಯಪ್ರಾಚ್ಯದಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೆಗೆಟಿವ್ ಆರ್ ಟಿ-ಪಿಸಿಆರ್ ಪ್ರಸ್ತುತಪಡಿಸಲು ಕರೆ ನೀಡಿದೆ. ಗುರುವಾರ 16,66,334 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೋವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು ಸಂಚಿತ ಪರೀಕ್ಷೆಗಳನ್ನು 52,65,35,068 ಕ್ಕೆ ತೆಗೆದುಕೊಂಡಿದೆ.

ದೈನಂದಿನ ಧನಾತ್ಮಕ ದರವು 2.72 ಶೇಕಡಾ ಮತ್ತು ವಾರದ ಧನಾತ್ಮಕ ದರವು 2.66 ಶೇಕಡಾ ದಾಖಲಾಗಿದೆ. ಕಳೆದ 70 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,20,63,616 ಕ್ಕೆ ಏರಿಕೆಯಾಗಿದೆ, ಆದರೆ  ಸಾವಿನ ಪ್ರಮಾಣವು 1.34 ಶೇಕಡಾ  ಆಗಿದೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ ಒಟ್ಟು 67.09 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

366 ಹೊಸ ಸಾವುಗಳು ಕೇರಳದಿಂದ 188, ಮತ್ತು ಮಹಾರಾಷ್ಟ್ರದಿಂದ 55 ವರದಿಆಗಿದೆ.ದೇಶದಲ್ಲಿ ಇದುವರೆಗೆ ಒಟ್ಟು 4,39,895 ಸಾವುಗಳು ವರದಿಯಾಗಿದ್ದು  ಮಹಾರಾಷ್ಟ್ರದಿಂದ 1,37,551, ಕರ್ನಾಟಕದಿಂದ 37,361, ತಮಿಳುನಾಡಿನಿಂದ 34,961, ದೆಹಲಿಯಿಂದ 25,082,  ಉತ್ತರ ಪ್ರದೇಶದಿಂದ 22,841, ಕೇರಳದಿಂದ 21,149 ಮತ್ತು ಪಶ್ಚಿಮ ಬಂಗಾಳದಿಂದ 18,472 ಸಾವುಗಳು ಇದರಲ್ಲಿ ಸೇರಿವೆ

70 ಕ್ಕಿಂತ ಹೆಚ್ಚು ಸಾವುಗಳು ಇತರ ರೋಗಗಳಿಂದ ಸಂಭವಿಸಿವೆ ಎಂದು ಸಚಿವಾಲಯ ಒತ್ತಿ ಹೇಳಿದೆ.

ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನ 32,097 ಹೊಸ ಕೊವಿಡ್ ಪ್ರಕರಣ ಪತ್ತೆ, 188 ಸಾವು; ಟಿಪಿಆರ್ ಶೇ 18.41

ಇದನ್ನೂ ಓದಿ: ಆಳುವವರಿದ್ದಾರೆ, ಆಡಳಿತ ನಡೆಸೋರು ಯಾರು? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಪ್ರತಿಭಾ ಪಲಾಯನವೇ ದೊಡ್ಡ ಸವಾಲು

(India reports 45,352 new coronavirus cases and 366 deaths in the last 24 hours as per health ministry)

Follow Us
TV9 Web
TV9 Web

TV9 Kannada

Read More
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?